ಬೈಂದೂರು; ಕರಾವಳಿಯಲ್ಲಿ ಒಂದು ಚುನಾವಣೆಯು ಎದುರಿಸದೆ ಯಾರದ್ದೊ ಕೃಪಾಕಟಾಕ್ಷದಲ್ಲಿ ಹಿರಿಯ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಯವರನ್ನು ನೋಯಿಸಿ ಹಿಂಬಾಗಿಲ ಮೂಲಕ ರಾಜಕೀಯ ಸ್ಥಾನ ಪಡೆದ ಕೋಟ ಶ್ರೀನಿವಾಸ ಪೂಜಾರಿ ನಾಲ್ಕು ಬಾರಿ ಶಾಸಕರಾಗಿರುವ ಕೆ.ಗೋಪಾಲ ಪೂಜಾರಿ ಬಗ್ಗೆ ಮಾತನಾಡಿರುವುದು ಅಕ್ಷಮ್ಯ. ಕೋಟ ಶ್ರೀನಿವಾಸ ಪೂಜಾರಿ ಮಾತಿಗೆ ಗ್ಯಾರಂಟಿನೂ ಇಲ್ಲಾ,ವಾರೆಂಟಿನೂ ಇಲ್ಲಾ ಹಸಿ ಹಸಿ ಸುಳ್ಳು ಹೇಳಿ ನುಣುಚಿಕೊಳ್ಳುವುದು ಅವರಿಗೆ ಚೆನ್ನಾಗಿ ಕರಗತವಾಗಿದೆ. ಕೊಚ್ಚಲಕ್ಕಿ ಕೊಡುತ್ತೇನೆ ಎಂದು ಹೇಳಿ ಈಗ ಬಣ್ಣ ಬದಲಿಸಿಕೊಂಡಿದ್ದಾರೆ.ಪಂಚಾಯತ್ ನೌಕರರ ಗೌರವಧನ ಹೆಚ್ಚಿಸುತ್ತೇನೆ ಎಂದು ಮುಂಗೈಗೆ ಬೆಣ್ಣೆ ಸವರಿದ್ದಾರೆ.ಪುಲ್ವಾಮ ದಾಳಿ ಬಿಜೆಪಿಯವರ ಪೂರ್ವ ನಿಯೋಜಿತ ಸಾಧನೆ.ಹೊನ್ನಾವರದ ಪರೇಶ್ ಮೇಸ್ತ ಸಾವು ಕೊಲೆಯಲ್ಲ ಎಂದು ಸಿ.ಬಿ.ಐ ವರದಿ ನೀಡಿದೆ.ತಮ್ಮದೇ ಪಕ್ಷ ಭ್ರಷ್ಟಾಚಾರದಲ್ಲಿ ಮಿಂದೆಳುವಾಗ ಕೋಟ ಶ್ರೀನಿವಾಸ ಪೂಜಾರಿ ಬೈಂದೂರಿನ ಧರ್ಮರಾಯನಂತಿರುವ ಕೆ.ಗೋಪಾಲ ಪೂಜಾರಿ ಯವರ ಬಗ್ಗೆ ಹಗುರವಾಗಿ ಮಾತನಾಡಬಾರದಿತ್ತು ಎಂದು ಕಾಂಗ್ರೆಸ್ ಯುವ ನಾಯಕ ವಿಕಾಸ್ ಹೆಗ್ಡೆ ಹೇಳಿದರು.ಕೋಟ ಶ್ರೀನಿವಾಸ ಪೂಜಾರಿ ಭಯೋತ್ಪಾದಕ ಎನ್ನುವ ಹೇಳಿಕೆಗೆ ಬೈಂದೂರು ಕಾಂಗ್ರೇಸ್ ನಾಯಕರು ಹಾಗೂ ಕಾರ್ಯಕರ್ತರು ವ್ಯಾಪಕ ಖಂಡನೆ ವ್ಯಕ್ತಪಡಿಸಿದ್ದಾರೆ.ಸಿಂಪಲ್,ಸರಳತೆ, ಸಂತ ಎಂದುಕೊಂಡು ಶಾಸಕರಾಗಿ ಐದು ವರ್ಷದಲ್ಲಿ ಸಾವಿರಾರು ಕೋಟಿ ಸಂಪಾದಿಸುವುದು ಬಿಜೆಪಿಯ ಲಾಜಿಕ್ಕೂ ಎಂದರು.
ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಮಾತನಾಡಿ ಕೋಟ ಯಾರನ್ನು ಮೆಚ್ಚಿಸಲು ಹೋಗಿ ಗೋಪಾಲ ಪೂಜಾರಿಯವರ ಬಗ್ಗೆ ಆರೋಪಿಸಿದ್ದಾರೆ.ದೇಶಕ್ಕಾಗಿ ಬಿಜೆಪಿಗರ ತ್ಯಾಗ ಎನಿದೆ ಎಂದು ಹೇಳಲಿ ಎಂದರು.
ಬಾವುಕರಾದ ಗೋಪಾಲ ಪೂಜಾರಿ,ಕೋಟ ಹೇಳಿಕೆ ಕೊಲ್ಲೂರು ಮೂಕಾಂಬಿಕೆ ನೋಡಿಕೊಳ್ಳುತ್ತಾಳೆ: ನನ್ನ ರಾಜಕೀಯ ಜೀವನದಲ್ಲಿ ಕ್ಷೇತ್ರದ ಜನಸೇವೆಗಾಗಿ ಸವ೯ಸ್ವವನ್ನು ಕಳೆದುಕೊಂಡಿದ್ದೇನೆ.ಕಾಲು ಮುರಿದುಕೊಂಡು ನಡೆಯಲಾಗದಿದ್ದರು ಜನರು ಕಷ್ಟದಲ್ಲಿದ್ದಾಗ ಅವರ ಬಳಿ ತೆರಳಿ ಸಂತೈಸಿದ್ದೇನೆ.ಶಿರೂರು ಮುಂತಾದ ಕಡೆ ನೆರೆ ಹಾವಳಿ ಆದಾಗ ಕಾರ್ಯಕರ್ತರ ಜೊತೆ ದ್ವನಿಯಾಗಿದ್ದೇನೆ. ಕೋಟ ಶ್ರೀನಿವಾಸ ಪೂಜಾರಿಯವರು ಅಂತರಾತ್ಮ ಮುಟ್ಟಿ ಹೇಳಲಿ ಭಯೋತ್ಪಾದಕರು ಯಾರು ಎಂದು ಜೋಡಿ ಕೊಲೆ,ಉದಯ ಗಾಣಿಗ ಕೊಲೆ ಬಿಜೆಪಿಗರೆ ಮಾಡಿದ್ದಾರೆ.ಪುಲ್ವಾಮ ದಾಳಿ ಬಿಜೆಪಿಯ ಚುನಾವಣೆ ಕುಮ್ಮಕ್ಕಿನಿಂದ ಆಗಿರುವುದು ಜನರಿಗೆ ತಿಳಿದಿದೆ.ನನ್ನನ್ನು ಭಯೋತ್ಪಾದಕರಗೆ ಹೋಲಿಸಿದ ಅವರ ಹೇಳಿಕೆಗೆ ತಾಯಿ ಕೊಲ್ಲೂರು ಮೂಕಾಂಬಿಕೆ ನೋಡಿಕೊಳ್ಳುತ್ತಾಳೆ ಎಂದು ಬಾವುಕರಾದರು.