ಬೈಂದೂರು: ಜೆಸಿಐ ವಿಟ್ಲ ಹಾಗೂ ಜೆಸಿಐ ತುಂಬೆ ಎಲೈಟ್ ಘಟಕಗಳ ಆಶ್ರಯದಲ್ಲಿ ನಡೆದ ವಲಯ ಸಮ್ಮೇಳನ ‘ಆರ್ಯ-2026’ ರಲ್ಲಿ ಜೆಸಿಐ ಶಿರೂರು ಘಟಕವು ಹಲವು ಪ್ರತಿಷ್ಠಿತ ಪ್ರಶಸ್ತಿಗಳು ಹಾಗೂ ವಿಶೇಷ ಮನ್ನಣೆಗಳಿಗೆ ಭಾಜನವಾಗಿದೆ.

2026ನೇ ಸಾಲಿನಲ್ಲಿ ಘಟಕವು ಹಮ್ಮಿಕೊಂಡ ವಿವಿಧ ಸಮಾಜಮುಖಿ ಹಾಗೂ ಸೇವಾ ಕಾರ್ಯಕ್ರಮಗಳನ್ನು ಗುರುತಿಸಿ, ಝೋನ್ ಪ್ರೆಸಿಡೆಂಟ್ ಎಕ್ಸಲೆನ್ಸಿ ಅವಾರ್ಡ್, ರಕ್ತದಾನ ವಿಭಾಗದ ಮನ್ನಣೆ, ಸೆಲ್ಯೂಟ್ ದ ಸೈಲೆಂಟ್ ಸ್ಟಾರ್ ಮನ್ನಣೆ ಹಾಗೂ ಗೋ ಗ್ರೀನ್ ವಿಭಾಗದ ಮನ್ನಣೆ ಸೇರಿದಂತೆ ಹಲವು ಪ್ರಶಸ್ತಿ ಹಾಗೂ ಗೌರವಗಳನ್ನು ನೀಡಿ ಸನ್ಮಾನಿಸಲಾಯಿತು.

ವಲಯಾಧ್ಯಕ್ಷ ಜೆಸಿ ಸಂತೋಷ ಶೆಟ್ಟಿ ಹಾಗೂ ವಲಯ ಉಪಾಧ್ಯಕ್ಷ ಜೆಸಿ ಪ್ರದೀಪ್ ಶೆಟ್ಟಿ ಅವರು ಜೆಸಿಐ ಶಿರೂರು ಅಧ್ಯಕ್ಷ ಜೆಸಿ ವಿನೋದ್ ಮೇಸ್ತ ಅವರಿಗೆ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.

ಈ ಸಂದರ್ಭದಲ್ಲಿ ಜೆಸಿಐ ಶಿರೂರು ಘಟಕದ ಪೂರ್ವಾಧ್ಯಕ್ಷರಾದ ಜೆಸಿ ಪ್ರಸಾದ್ ಪ್ರಭು, ಜೆಸಿ ಅರುಣ್ ಕುಮಾರ್ ಹಾಗೂ ಜೆಸಿ ಹರೀಶ್ ಶೇಟ್ ಉಪಸ್ಥಿತರಿದ್ದರು.

ಘಟಕದ ಸದಸ್ಯರ ಸಂಘಟಿತ ಪ್ರಯತ್ನ, ಸೇವಾ ಮನೋಭಾವ ಹಾಗೂ ಸಮಾಜಮುಖಿ ಕಾರ್ಯಗಳಿಗೆ ಸಂದ ಈ ಗೌರವಗಳು ಜೆಸಿಐ ಶಿರೂರು ಘಟಕದ ಸಾಧನೆಗೆ ಮತ್ತೊಂದು ಹೆಮ್ಮೆಯ ಗರಿಯಾಗಿವೆ.

Leave a Reply

Your email address will not be published. Required fields are marked *

12 + two =