ಉಪ್ಪುಂದ; ಕುಂದಾಪುರ ಹಾಗೂ ಬೈಂದೂರು ತಾಲೂಕು ಇತಿಹಾಸದಲ್ಲಿ ಪ್ರಪ್ರಥಮ ಭಾರಿಗೆ ಯುವ ಮುಖಂಡ ಶೇಖರ ಪೂಜಾರಿ ಉಪ್ಪುಂದ ಇವರ ಸಾರಥ್ಯದಲ್ಲಿ ಶ್ರೀ ದುರ್ಗಾ ಟೈಗರ್ಸ ಉಪ್ಪುಂದ ಇವರ ಸಂಯೋಜನೆಯಲ್ಲಿ ಮಂಗಳೂರು ಹಾಗೂ ಉಡುಪಿ ಭಾಗದ ಆಯ್ದ ಪ್ರತಿಷ್ಠಿತ ತಂಡಗಳ ಹುಲಿ ಪರ್ವ-2026 ಆಕರ್ಷಕ ಹುಲಿ ಕುಣಿತ ಸ್ಪರ್ಧೆ ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ರಥಬೀದಿ ಆವರಣದಲ್ಲಿ ವೈಭವದಿಂದ ಸಂಪನ್ನಗೊಂಡಿತು.

ಬೆಳಗಾವಿ ಜಿಲ್ಲಾ ಯುವ ಕಾಂಗ್ರೆಸ್ ಮುಖಂಡ ಮೃಣಾಲ್ ಹೆಬ್ಬಾಳ್ಕರ್ ಹುಲಿ ಪರ್ವ-2026 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಕರಾವಳಿ ಜಿಲ್ಲೆ ಹಿಂದಿನಿಂದಲೂ ಕಲೆ,ಸಾಹಿತ್ಯ,ಸಂಸ್ಕ್ರತಿ ಆತಿಥ್ಯಕ್ಕೆ ಹೆಸರುವಾಸಿಯಾಗಿದೆ.ಈ ಜಿಲ್ಲೆಯ ಅನೇಕ ಸಾಧಕರು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ.ಯುವ ಸಮುದಾಯ ಕ್ರಿಯಾತ್ಮಕ ಚಿಂತನೆಗಳ ಮೂಲಕ ಬೆಳೆಯುತ್ತಿರುವುದು ಪ್ರಶಂಸನೀಯವಾಗಿದೆ.ಇಂತಹ ಕ್ರಿಯಾಶೀಲ ಚಿಂತನೆಯ ಯುವ ಸಮುದಾಯಕ್ಕೆ ಹತ್ತಾರು ಅವಕಾಶಗಳು ದೊರೆಯಬೇಕು ಹಾಗೂ ಹುಲಿಪರ್ವ ಕಾರ್ಯಕ್ರಮ ಅತ್ಯಂತ ವೈಭವದಿಂದ ಸಂಘಟಿಸಲಾಗಿದೆ ಮತ್ತು ಜಿಲ್ಲೆಯ ಜನರ ಸಾಂಸ್ಕ್ರತಿಕ ಉತ್ಸಾಹದ ಪ್ರತೀಕವಾಗಿದೆ ಎಂದರು.
ಕಾರ್ಯಕ್ರಮದ ಆಯೋಜಕ ಶೇಖರ ಪೂಜಾರಿ ಉಪ್ಪುಂದ ಪ್ರಾಸ್ತಾವಿಕ ಮಾತನಾಡಿ ಕರಾವಳಿ ಪರಿಸರದಲ್ಲಿ ಅನೇಕ ಸಾಂಸ್ಕ್ರತಿಕ ಕಲಾ ಪರಂಪರೆಗಳನ್ನು ಹೊಂದಿದೆ.ಬಹುತೇಕ ಕಡೆಗಳಲ್ಲಿ ಅದನ್ನು ಮುಂದುವರಿಸಿಕೊಂಡು ಬರುವ ಪ್ರೋತ್ಸಾಹದ ಹುಲಿವೇಷ ಬೈಂದೂರು ಭಾಗಕ್ಕೆ ಹೊಸತಾದರು ಕೂಡ ಉಪ್ಪುಂದ ಪರಿಸರದಲ್ಲಿ ಬಹಳ ಹಿಂದಿನಿಂದಲೂ ಕೆಲವು ಕುಟುಂಬದವರು ಸೇವೆಯ ರೀತಿಯಲ್ಲಿ ಮುಂದುವರಿಸಿಕೊಂಡು ಬಂದಿದ್ದಾರೆ.ಕರಾವಳಿಯ ಪ್ರಸಿದ್ದ ಕಲೆಯಾದ ಹುಲಿವೇಷ ಪ್ರೋತ್ಸಾಹಿಸುವ ಉದ್ದೇಶ ಮತ್ತು ಮುಂದಿನ ತಲೆಮಾರುಗಳಿಗೆ ಮುಂದುವರಿಸುವ ಪ್ರಯತ್ನವೇ ಹುಲಿ ಪರ್ವ -2026 ಹಿನ್ನೆಲೆಯಾಗಿದೆ.ಈ ಭಾಗದ ಎಲ್ಲಾ ಸಾರ್ವಜನಿಕರ ಸಹಕಾರದಿಂದ ಹುಲಿ ಪರ್ವ -2026 ಸಂಪನ್ನಗೊಂಡಿದೆ ಎಂದರು.
ಹಿರಿಯರಾದ ಅರೆಹಾಡಿ ಮಂಜು ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು.
ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ,ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ,ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಬಾಬು ಶೆಟ್ಟಿ,ಜಾದೂಗಾರ ಓಂ ಗಣೇಶ ಉಪ್ಪುಂದ,ಖ.ರೈ.ಸೇ.ಸಂಘದ ಅಧ್ಯಕ್ಷ ಎಸ್.ಪ್ರಕಾಶ್ಚಂದ್ರ ಶೆಟ್ಟಿ,ಉಡುಪಿ ಜಿ.ಪಂ ಮಾಜಿ ಅಧ್ಯಕ್ಷ ಎಸ್.ರಾಜು ಪೂಜಾರಿ,ಸೇವಾ ಸಂಗಮ ಶಿಶು ಮಂದಿರ ಉಪ್ಪುಂದ ಸ್ಥಾಪಕಾಧ್ಯಕ್ಷ ದಿ.ಟಿ .ಸೀತಾರಾಮ,ಸುಮುಖ ಸರ್ಜಿಕಲ್ ಮಾಲಕರಾದ ಬಿ.ಎಸ್.ಸುರೇಶ ಶೆಟ್ಟಿ,ಬೈಂದೂರು ತಾಲೂಕು ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ,ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರವಿಂದ ಪೂಜಾರಿ,ಮರವಂತೆ ಬ.ವ್ಯ.ಸೇ.ಸ.ಸಂಘದ ಅಧ್ಯಕ್ಷ ಜಗದೀಶ ಪೂಜಾರಿ ಹಕ್ಕಾಡಿ,ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಮಹಾಲಿಂಗ ನಾಯ್ಕ,ರಘುರಾಮ ದೇವಾಡಿಗ,ಜಿ.ಪಂ ಮಾಜಿ ಸದಸ್ಯೆ ಗೌರಿ ದೇವಾಡಿಗ,ಕೋಟ ಪರ್ಶಿನ್ ಮೀನುಗಾರರ ಸಹಕಾರಿ ಸಂಘದ ನಿರ್ದೇಶಕ ಬಿ.ಎಚ್.ಪಿ ನಾಗರಾಜ ಖಾರ್ವಿ,ಬೈಂದೂರು ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶೇಖರ ಪೂಜಾರಿ,ಕುಂದಾಪುರ ಕನ್ನಡ ಸಂಸ್ಕ್ರತಿ ಪ್ರತಿಷ್ಠಾನದ ಅಧ್ಯಕ್ಷ ಶರತ್ ಕುಮಾರ್ ಶೆಟ್ಟಿ ಉಪ್ಪುಂದ,ಬೈಂದೂರು ಬಿಜೆಪಿ ಮಂಡಲದ ಅಧ್ಯಕ್ಷೆ ಅನಿತಾ ಆರ್.ಕೆ,ಉದ್ಯಮಿ ಸುಭಾಷ್ ಪೂಜಾರಿ ತಗ್ಗರ್ಸೆ,ಗುರುರಾಜ ಪಂಜು ಪೂಜಾರಿ,ಗುತ್ತಿಗೆದಾರ ರಘುರಾಮ ಶೆಟ್ಟಿ ಬಿಜೂರು,ಅಶೋಕ ಜ್ಯುವೆಲ್ಲರ್ಸ್ ಮಾಲಕ ಅಶೋಕ ಶೇಟ್,ಉಪ್ಪುಂದ ಶ್ರೀ ದುರ್ಗಾ ಫ್ರೆಂಡ್ಸ್ ಅಧ್ಯಕ್ಷ ಕೇಶವ ದೇವಾಡಿಗ,ಬೆಳಕೆ ವ್ಯ.ಸೇ.ಸ.ಸಂಘದ ಅಧ್ಯಕ್ಷ ಮಹಾದೇವ ನಾಯ್ಕ,ಉದ್ಯಮಿ ರಘುರಾಮ ಕೆ.ಪೂಜಾರಿ,ಶಿರೂರು ಗ್ರಾ.ಪಂ ಮಾಜಿ ಸದಸ್ಯ ರವೀಂದ್ರ ಶೆಟ್ಟಿ,ಉಪ್ಪುಂದ ದುರ್ಗಾಪರಮೇಶ್ವರಿ ದೇವಸ್ಥಾನದ ಅಧ್ಯಕ್ಷ ನಾರಾಯಣ ಖಾರ್ವಿ,ಭೂ ನ್ಯಾಯ ಮಂಡಳಿ ಸದಸ್ಯ ಉದಯ ಪೂಜಾರಿ,ಮಂಜು ಪೂಜಾರಿ ಸೇನಾಪುರ,ಉದ್ಯಮಿ ಗೋಕುಲ ಶೆಟ್ಟಿ ಉಪ್ಪುಂದ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಉಪ್ಪುಂದದಲ್ಲಿ ಹುಲಿ ಕುಣಿತ ನಡೆಸಿಕೊಂಡು ಬರುತ್ತಿದ್ದ ಹಿರಿಯ ಹುಲಿಗಳನ್ನು ಗೌರವಿಸಲಾಯಿತು ಹಾಗೂ ಸ್ಪರ್ಧೆಗೆ ಆಗಮಿಸಿದ ಹುಲಿ ತಂಡಗಳಿಗೆ ವಯಕ್ತಿಕ ಗೌರವ ನೀಡಿ ಗೌರವಿಸಲಾಯಿತು.
ಶಿಕ್ಷಕ ಸುಬ್ರಹ್ಮಣ್ಯ ಜಿ.ಉಪ್ಪುಂದ ಕಾರ್ಯಕ್ರಮ ನಿರೂಪಿಸಿದರು.ಜಿ.ಪಂ ಮಾಜಿ ಸದಸ್ಯ ಎಸ್.ಮದನ್ ಕುಮಾರ್ ವಂದಿಸಿದರು.
ಹುಲಿ ಕುಣಿತ ಸ್ಪರ್ಧೆಯ ಫಲಿತಾಂಶ:
ಪ್ರಥಮ ಬಹುಮಾನ
ಜಂಟಿ ವಿಜೇತರು.
ಕಾರ್ಕಳ ಟೈಗರ್ಸ್ ಮತ್ತು ಅಶೋಕರಾಜ್ ಬಳಗ ಕಾಡಬೆಟ್ಟು, ಉಡುಪಿ
 
ದ್ವಿತೀಯ ಬಹುಮಾನ
ಕುರ್ಕಾಲು ಟೈಗರ್ಸ್, ಉಡುಪಿ
 
ಕರಿಹುಲಿ : ಸುಧರ್ಮ ಮೊಗವೀರ
ವರದಿ/ಗಿರಿ ಶಿರೂರು
 
 

Leave a Reply

Your email address will not be published. Required fields are marked *

nineteen − 5 =