ಶಿರೂರು: ಶ್ರೀ ಮಹಾಗಣಪತಿ ದೇವಸ್ಥಾನ ಅಳ್ವೆಗದ್ದೆ ಶಿರೂರು ಇದರ ನೂತನ ಶಿಲಾಮಯ ಮಹಾಗಣಪತಿ ದೇವಸ್ಥಾನದಲ್ಲಿ ಮಂಗಳವಾರ ಅಂಗಾರಕ ಸಂಕಷ್ಟಹರ ಚತುರ್ಥಿ ನಡೆಯಿತು. ಬೆಳಿಗ್ಗೆ ಅರ್ಚಕರ ಸಮ್ಮುಖದಲ್ಲಿ ಸತ್ಯಗಣಪತಿ ವೃತ, ಸಾರ್ವಜನಿಕ ಗಣಹೋಮ,ಮಹಾಪೂಜೆ ಹಾಗೂ ಮುಂತಾದ ಪೂಜಾ ವಿಧಿ ವಿಧಾನಗಳು ಹಾಗೂ ಮಧ್ಯಾಹ್ನ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಸಾವಿರಾರು ಭಕ್ತರು ಶ್ರೀ ಮಹಾಗಣಪತಿ ದೇವರ ದರ್ಶನ ಪಡೆದರು.

ಅಳ್ವೆಗದ್ದೆ ಶ್ರೀ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೃಷ್ಣ ಮೊಗೇರ್,ದೇವಸ್ಥಾನದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ರಾಮ ಎನ್.ಅಳ್ವೆಗದ್ದೆ ಹಾಗೂ ದೇವಸ್ಥಾನದ ಸಮಿತಿಯ ಸರ್ವ ಸದಸ್ಯರು ಹಾಗೂ ಊರ,ಪರಪೂರ ಭಕ್ತಾಧಿಗಳು ಹಾಜರಿದ್ದರು.