ಶಿರೂರು: ಇಲ್ಲಿನ‌ ಮಾರ್ಕೆಟ್ ಬಳಿ ಮನೆಯೊಂದಕ್ಕೆ ನುಗ್ಗಿದ ಕಳ್ಳರು 18 ಲಕ್ಷ ರುಪಾಯಿ ಚಿನ್ನ ಹಾಗೂ 12 ಲಕ್ಷ ನಗದು ಕದ್ದೊಯ್ದಿದ್ದಾರೆ. ಮಾರ್ಕೆಟ್ ಬಳಿ ಹಾರ್ಡ್‌ವೇರ್ ಉದ್ಯಮ ನಡೆಸುತ್ತಿರುವ ಅಜೀಮ್ ಎನ್ನುವವರು ರಾತ್ರಿ ಊಟ ಮಾಡಿ ಮಸೀದಿಗೆ ಪ್ರಾರ್ಥನೆಗೆ ತೆರಳಿ ವಾಪಾಸ್ಸು ಬರುವ ವೇಳೆ ಕಳ್ಳತನ ನಡೆದಿರುವುದು ಗಮನಕ್ಕೆ ಬಂದಿದೆ.ರಾತ್ರಿ ಹನ್ನೊಂದು ಗಂಟೆಯ ಒಳಗೆ ಕಳ್ಳತನ ನಡೆದಿರುವುದು ಜನರನ್ನು ಗಾಬರಿಗೊಳಿಸಿದೆ.
ಸರಣಿ ರಜೆ ಇರುವ ಕಾರಣ ವ್ಯಾಪಾರದ ಹಣವನ್ನು ಬ್ಯಾಂಕಿಗೆ ಹಾಕಲಾಗದೆ ಮನೆಯಲ್ಲಿಟ್ಟಿದ್ದರು.ಈ ಕುರಿತು ಮಾಹಿತಿ ಇರುವವರೆ ಕಳ್ಳತನ ನಡೆಸಿರುವ ಸಾಧ್ಯತೆ ಕೂಡ ಇದೆ.

ರಾತ್ರಿಯಿಡೀ ತೆರೆದಿರುವ ಅನಧಿಕ್ರತ ಅಂಗಡಿಗಳು,ಗಾಂಜಾ ಅಕ್ರಮ ಚಟುವಟಿಕೆಯ ತಾಣವಾದ ಹೆದ್ದಾರಿ ಬದಿ ಅಂಗಡಿಗಳು. ಗಂಭೀರವಾಗಿ ಪರಿಗಣಿಸದ ಇಲಾಖೆ;ಶಿರೂರು ಟೋಲ್ ಗೇಟ್ ಸಮೀಪದಿಂದ ಸೇರಿ ಬೈಂದೂರು ಮರವಂತೆಯವರಗೆ ಹೆದ್ದಾರಿ ಪಕ್ಕದಲ್ಲಿ ಅನಧಿಕೃತ ಅಂಗಡಿಗಳು ದಿನಕ್ಕೊಂದರಂತೆ ತಲೆ ಎತ್ತುತ್ತಿದೆ.ಮಾತ್ರವಲ್ಲದೆ ಯಾವುದೆ ಅನುಮತಿ ದಾಖಲೆ ಇಲ್ಲದಿದ್ದರು ಕೂಡ ರಾತ್ರಿ ಇಡಿ ತೆರೆದಿರುವುದರ ಜೊತೆಗೆ ಮದ್ಯ ಮಾರಾಟ ನಡೆಯುತ್ತಿರುವುದು ಕುರಿತು ಸಾರ್ವಜನಿಕರು ಹಲವು ಬಾರಿ ದೂರು ನೀಡಿದ್ದರು.ಅದರಲ್ಲೂ ಶಿರೂರು ಟೋಲ್ ಗೇಟ್ ಪರಿಸರದಲ್ಲಿ ಇದುವರಗೂ ಇಪ್ಪತ್ತಕ್ಕೂ ಹೆಚ್ಚು ಗಾಂಜಾ ಪ್ರಕರಣ ಕಂಡು ಬಂದಿದೆ.ಭಟ್ಕಳ,ಶಿವಮೊಗ್ಗ, ಸಾಗರ ಕಡೆಯಿಂದ ಅಪರಿಚಿತ ವಾಹನಗಳಲ್ಲಿ ನಿರಂತರವಾಗಿ ಈ ಅಂಗಡಿಗೆ ಗ್ರಾಹಕರ ಸೋಗಿನಲ್ಲಿ ಬಂದಿರುವ ಮಾಹಿತಿ ಇದೆ ಮದ್ಯ ಮಾರಾಟ,ಗೋ ಕಳ್ಳತನ,ಸಾಗಾಟ,ಗಾಂಜಾ ವ್ಯವಹಾರ ಕೂಡ ನಡೆಯುತ್ತಿರುವ ಮಾಹಿತಿಗಳಿವೆ.ಕಳೆದ ವಾರ ಧಾರ್ಮಿಕ ಕಾರ್ಯಕ್ರಮದ ಬ್ಯಾನರ್ ಕೂಡ ಕಿಡಿಗೇಡಿಗಳು ಹರಿದು ಹಾಕಿದ್ದರು.ಇಲ್ಲಿನ ಅಂಗಡಿಗಳು ರಾತ್ರಿಯಿಡಿ ತೆರೆದಿರುವುದೆ ಇದಕ್ಕೆ ಕಾರಣವಾಗಿರುವ ಸಾಧ್ಯತೆಗಳಿವೆ.ಕನಿಷ್ಟ ಪಕ್ಷ ರಾತ್ರಿ ಹನ್ನೆರಡು ಗಂಟೆಯ ಬಳಿಕ ಇಂತಹ ಅನಧಿಕ್ರತ ಅಂಗಡಿಗಳು ಮುಚ್ಚಿದರೆ ಅಪರಾಧ ಪ್ರಕರಣ ಕಡಿಮೆಯಾಗುತ್ತದೆ ಅನ್ನೋದು ಸಾರ್ವಜನಿಕ ವಿಚಾರ.ಶಿರೂರು ಪರಿಸರದಲ್ಲಿ ನಿರಂತರ ಕಾನೂನುಬಾಹಿರ ಚಟುವಟಿಕೆ ಅವ್ಯಾಹತವಾಗಿ ನಡೆಯುತ್ತಿರುವುದು ಕೂಡ ಇಂತಹ ಪ್ರಕರಣಗಳಿಗೆ ಕಾರಣವಾಗುತ್ತದೆ.ಹೀಗಾಗಿ ಇಲಾಖೆ ಸಾರ್ವಜನಿಕರ ಹಿತಧ್ರಷ್ಟಿಯಿಂದ ಗಂಭೀರವಾಗಿ ಪರಿಗಣಿಸಬೇಕಿದೆ.ಚುನಾವಣೆ ಹಿನ್ನೆಲೆಯಲ್ಲಿ ವಿಶೇಷ ಚೆಕ್ ಪೋಸ್ಟ್ ,ಗಸ್ತುವಾಹನ,ತಪಾಸಣೆ ಇದ್ದರು ಕೂಡ ಇಷ್ಟು ದೊಡ್ಡ ಕಳ್ಳತನ ನಡೆದಿರುವುದು ಆತಂಕ ಉಂಟುಮಾಡಿದೆ.ಶಿರೂರು ಪರಿಸರದಲ್ಲಿ ಸಣ್ಣಪುಟ್ಟ ಕಳ್ಳತನ ನಿರಂತರವಾಗಿ ನಡೆಯುತ್ತಿದೆ.ಹೀಗಾಗಿ ಇಲಾಖೆ ಕಾನೂನು ಸುರಕ್ಷತೆ ಧ್ರಷ್ಟಿಯಿಂದ ಒಂದಿಷ್ಡು ಬಿಗಿ ಕ್ರಮ ಕೈಗೊಳ್ಳಬೇಕಿದೆ.ಕಳ್ಳತನ ನಡೆದಿರುವ ಸ್ಥಳಕ್ಕೆ ಬೈಂದೂರು ಆರಕ್ಷಕ ತಂಡ ಆಗಮಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ.

Leave a Reply

Your email address will not be published.

9 + eighteen =