ಬೈಂದೂರು: ಬೈಂದೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಘೋಷಣೆ ದಿನದಿಂದ ದಿನಕ್ಕೆ ಕುತೂಹಲ ಕೆರಳಿಸುತ್ತಿದೆ.ಹಾಲಿ ಶಾಸಕರಿಗೆ ಟಿಕೆಟ್ ದೊರೆಯುತ್ತಿಲ್ಲ ಒಂದೊಮ್ಮೆ ಪಕ್ಷ ಟಿಕೆಟ್ ನೀಡದಿದ್ದರೆ ಯಾವ ಕಾರಣಕ್ಕೆ ಟಿಕೆಟ್ ನೀಡಲಿಲ್ಲ ಎಂದು ಪಕ್ಷದ ನಾಯಕರು ಸ್ಪಷ್ಟಪಡಿಸಬೇಕು ಎಂಬ ನಿಲುವು ಗಟ್ಟಿಗೊಳಿಸಿಕೊಂಡಿದ್ದಾರೆ ಇದರ ಜೊತೆಗೆ ಕಳೆದೆರಡು ದಿನದ ಹಿಂದೆ ಪ್ರಣಯ್ ಕುಮಾರ್ ಶೆಟ್ಟಿ ಹಾಗೂ ಗುರುರಾಜ್ ಗಂಟಿಹೊಳೆ ಹೆಸರು ಕೂಡ ಕೇಳಿಬಂದಿತ್ತು.ಆದರೆ ಇಂದು ಬೈಂದೂರು ಬಿಜೆಪಿ ಮುಖಂಡ ಕೆ.ಬಾಬು ಶೆಟ್ಟಿ ಹೆಸರು ಕೇಳಿಬರುತ್ತಿದೆ.ಇದಕ್ಕೆ ಪುಷ್ಟಿ ಎನ್ನುವಂತೆ ಮಂಗಳವಾರ ಬೆಳಿಗ್ಗೆ ಕೆ.ಬಾಬು ಶೆಟ್ಟಿ ಅಭಿಮಾನಿಗಳು ಹಾಗೂ ಬಿಜೆಪಿ ಕಾರ್ಯಕರ್ತರು ಸೇರಿ ಕೆ.ಬಾಬು ಶೆಟ್ಟಿ ಯವರಿಗೆ ಬಿಜೆಪಿ ಅವಕಾಶ ನೀಡಬೇಕು ಹಾಗೂ ಅದರ ಜೊತೆಗೆ ಬೈಂದೂರು ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆ ಎಂದು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಕೆ.ಬಾಬು ಶೆಟ್ಟಿ ಈಗಾಗಲೇ ಕಾರ್ಯಕರ್ತರು ಟಿಕೆಟ್ ವಿಚಾರದಲ್ಲಿ ಎನಾಗಿದೆ ಎನ್ನುವ ಕುತೂಹಲದಿಂದ ನಮ್ಮ ಮನೆಗೆ ಬೇಟಿ ನೀಡಿದ್ದಾರೆ.ಈಗಾಗಲೇ ಪಕ್ಷದ ಹಿರಿಯರು ಒಳ್ಳೆಯ ಸಿಹಿ ಸುದ್ದಿ ನೀಡುವ ಭರವಸೆ ನೀಡಿದ್ದಾರೆ.ಒಂದೆರಡು ದಿನದ ಒಳಗೆ ಗೊಂದಲಕ್ಕೆ ತೆರೆಬೀಳಲಿದೆ ಹಾಗೂ ಅವಕಾಶ ದೊರೆಯುವ ವಿಶ್ವಾಸವಿದೆ.ಹೀಗಾಗಿ ಕಾರ್ಯಕರ್ತರು ಗೊಂದಲಕ್ಕೆ ಒಳಪಡದೆ ಒಗ್ಗಟ್ಟಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವಂತೆ ತಿಳಿಸಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಪುಷ್ಪರಾಜ್ ಶೆಟ್ಟಿ ಶಿರೂರು,ಮಹೇಂದ್ರ ಪೂಜಾರಿ,ಸದಾಶಿವ ಡಿ.ಪಡುವರಿ,ಟಿ.ನಾರಾಯಣ ಹೆಗ್ಡೆ,ಪ್ರವೀಣ್ ಕುಮಾರ್ ಶೆಟ್ಟಿ ಕಡ್ಕೆ ಮೊದಲಾದವರು ಹಾಜರಿದ್ದರು.
ಒಟ್ಟಾರೆಯಾಗಿ ಚುನಾವಣೆ ಫಲಿತಾಂಶಕ್ಕಿಂತ ಬಿಜೆಪಿ ಅಭ್ಯರ್ಥಿ ಪಟ್ಟಿ ಆಯ್ಕೆಯಲ್ಲಿ ಬಹಳಷ್ಟು ನಿರೀಕ್ಷೆ ಮೂಡಿಸಿದೆ.ಇದರ ಜೊತೆಗೆ ಬಿಜೆಪಿ ಪಕ್ಷದಲ್ಲಿ ಆಕಾಂಕ್ಷಿಗಳ ಗುಂಪು ಕೂಡ ತೆರೆಮೆರೆಯ ಕಸರತ್ತು ನಡೆಸುತ್ತಿದೆ.