ಶಿರೂರು: ಯುವಶಕ್ತಿ ಶ್ರೀ ಗಣೇಶೋತ್ಸವ ಸಮಿತಿ(ರಿ.) ಕರಾವಳಿ ಶಿರೂರು ಇದರ 28ನೇ ವರ್ಷದ ಕರಾವಳಿ ಚೌತಿ ಗಣೇಶೋತ್ಸವ ಮತ್ತು ಸಾಂಸ್ಕ್ರತಿಕ ಪ್ರತಿಷ್ಠಾನ ಇದರ ಭರತನಾಟ್ಯ ಮತ್ತು ಯಕ್ಷಗಾನ ವಿದ್ಯಾರ್ಥಿಗಳ ಪ್ರಥಮ ಪ್ರದರ್ಶನ ಯುವಶಕ್ತಿ ಸಭಾ ವೇದಿಕೆ ಕರಾವಳಿಯಲ್ಲಿ ಸಂಭ್ರಮದಿಂದ ನಡೆಯಿತು.
ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕ್ರತ ಸಿ.ಎನ್‌ ಬಿಲ್ಲವ ಯುವಶಕ್ತಿ ಕಲಾ ಮತ್ತು ಸಾಂಸ್ಕ್ರತಿಕ ಪ್ರತಿಷ್ಠಾನದ ವತಿಯಿಂದ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಸಮ್ಮಾನ ಸ್ವೀಕರಿಸಿ  ಮಾತನಾಡಿದ ಅವರು ಗ್ರಾಮೀಣ ಭಾಗದಲ್ಲಿ ಯುವಕರು ಊರಿನ ಅಭಿವೃದ್ದಿ ಮತ್ತು ಸಂಘಟನೆಯ ಉದ್ದೇಶದಿಂದ ಸ್ಥಾಪಿಸಿದ ಯುವಶಕ್ತಿ ಸಮಿತಿ ಇಂದು ಹೆಮ್ಮರವಾಗಿ ಬೆಳೆದಿದೆ.ಕೆಲೆ, ಸಾಹಿತ್ಯ,ಸಾಂಸ್ಕ್ರತಿಕ ಸೇರಿದಂತೆ ಎಲ್ಲಾ ವಿಭಾಗದಲ್ಲೂ ಚಟುವಟಿಕೆ ವೃದ್ದಿಸಿರುವುದು ಇಲ್ಲಿನ ಸಾಂಘಿಕ ಪ್ರಯತ್ನದ ಫಲವಾಗಿದೆ ಮತ್ತು ಇತರ ಸಂಘ ಸಂಸ್ಥೆಗಳಿಗೆ ಮಾದರಿಯಾಗಿದೆ ಎಂದರು.
ಶಿರೂರು ಯಕ್ಷ ಸಂಪದ ಕಲಾ ಬಳಗದ ಅಧ್ಯಕ್ಷ ಚಿಕ್ಕು ಪೂಜಾರಿ ಮಾತನಾಡಿ ಯುವಶಕ್ತಿ ಗಣೇಶೋತ್ಸವ ಆಚರಣೆಯ ಜೊತೆಗೆ ಊರಿನ ಸಾಧಕರನ್ನು ಗೌರವಿಸುವುದು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವುದು ಮತ್ತು ಈ ವರ್ಷದಿಂದ ಯಕ್ಷಗಾನ ತರಬೇತಿ ಆರಂಭಿಸುವ ಮೂಲಕ ಪ್ರತಿಭೆಗಳಿಗೆ ಅವಕಾಶ ನೀಡಿದಂತಾಗಿದೆ ಎಂದರು.
ಯುವಶಕ್ತಿ ಗಣೇಶೋತ್ಸವ ಸಮಿತಿ ಅಧ್ಯಕ್ಷ ಯಶವಂತ್‌ ಬಿಲ್ಲವ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಯುವಶಕ್ತಿ ಉತ್ಸವ ಸಮಿತಿ ಅಧ್ಯಕ್ಷ ಚಂದ್ರ ಮೊಗೇರ್‌,ನಿವೃತ್ತ ಅಪೆಕ್ಸ್‌ ಬ್ಯಾಂಕ್‌ ವ್ಯವಸ್ಥಾಪಕ ಮಾಚ ಬಿಲ್ಲವ ಮಂಗಳುಮನೆ,ಉಪತಹಶೀಲ್ದಾರ ಗಿರಿಜಾ ಐ.ಮೊಗೇರ್‌,ಮಾಧವ ಬಿಲ್ಲವ ಕಾಳನಮನೆ, ಮಾಜಿ ಗೌರವಾಧ್ಯಕ್ಷರಾದ ವಾಸು ಬಿಲ್ಲವ ತೆಂಕಮನೆ, ಮಹಾದೇವ ಬಿಲ್ಲವ ಜಂಗ್ಲಿಮನೆ,ರಾಮ ಟೈಲರ್‌,ಅರುಣ್‌ ಮೊಗೇರ್‌ ಸಂಕುಮನೆ,ಹಿರಿಯರಾದ ವೆಂಕ್ಟುಪೂಜಾರಿ ಕಾಳನಮನೆ,ನಾಗಪ್ಪ ಬಿಲ್ಲವ ಜಟ್ಟಜ್ಜಿಮನೆ,ಜಲಜಾಕ್ಷಿ ಮಂಗಳುಮನೆ ಹಾಗೂ ಯುವಶಕ್ತಿ ಸರ್ವ ಸದಸ್ಯರು ಹಾಜರಿದ್ದರು.
ಈ ಸಂದರ್ಭದಲ್ಲಿ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕ್ರತ ಸಿ.ಎನ್‌.ಬಿಲ್ಲವ, ವೈದ್ಯಕೀಯ ಕ್ಷೇತ್ರಕ್ಕೆ ಪಾದಾರ್ಪಣೆಗೊಂಡಿರುವ ಡಾ.ರಚನಾ ಮಾಚ ಬಿಲ್ಲವ,ಸಂಗೀತಾ ಪೂಜಾರಿ ಬೇಡುಮನೆ,ನಿವೃತ್ತ ಮುಖ್ಯ ಶಿಕ್ಷಕಿ ಭಾಗೀರಥಿ ಮೊಗೇರ್‌,ಯಕ್ಷಗಾನ ಕಲಾವಿದರು ಹಾಗೂ ಗುರುಗಳಾದ ಶ್ರೀಧರ ಉಪ್ಪುಂದ ಹಾಗೂ ಭರತನಾಟ್ಯ ಕಲಾವಿದೆ ಅಮೃತ ಎನ್‌ ರವರನ್ನು ಯುವಶಕ್ತಿ ಸಮಿತಿ ವತಿಯಿಂದ ಸಮ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಎಸ್‌.ಎಸ್‌.ಎಲ್‌.ಸಿ ಹಾಗೂ ಪಿ.ಯು.ಸಿ ಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು.

=

ಗಿರೀಶ್‌ ಮೊಗೇರ್‌,ಮನೋಹರ ಬಿಲ್ಲವ ಹಾಗೂ ದಿನಕರ ಬಿಲ್ಲವ ಸನ್ಮಾನಿತರ ಸಮ್ಮಾನ ಪತ್ರ ವಾಚಿಸಿದರು.ಯುವಶಕ್ತಿ ಕಾರ್ಯದರ್ಶಿ ಮಹೇಶ್‌ ಮೊಗೇರ್‌ ಸ್ವಾಗತಿಸಿದರು.ಮಾಜಿ ಅಧ್ಯಕ್ಷ ಅರುಣ್‌ ಕುಮಾರ್‌ ಶಿರೂರು ಕಾರ್ಯಕ್ರಮ ನಿರ್ವಹಿಸಿದರು.ಮಹೇಂದ್ರ ಬಿಲ್ಲವ ವಂದಿಸಿದರು.

ವರದಿ/ಚಿತ್ರ: ಗಿರಿ ಶಿರೂರು

 

Leave a Reply

Your email address will not be published. Required fields are marked *

3 + 13 =