ಬೈಂದೂರು: ಜೆ ಸಿ ಐ ಉಪ್ಪುಂದ,ಸರಕಾರಿ ಪ್ರಥಮ ದರ್ಜೆ ಕಾಲೇಜು ಬೈಂದೂರು ಹಾಗೂ ರೆಡ್ ಕ್ರಾಸ್ ರೆಡ್ ರಿಬ್ಬನ್ ಇದರ ಸಂಯುಕ್ತ ಆಶ್ರಯದಲ್ಲಿ ಪ್ರಥಮ ಚಿಕಿತ್ಸೆ ಮಾಹಿತಿ ಕಾರ್ಯಗಾರ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯಿತು.
ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ನಾಗರಾಜ್ ಶೆಟ್ಟಿ ಮಾಹಿತಿ ಕಾರ್ಯಗಾರವನ್ನು ಉದ್ಘಾಟಿಸಿದರು.ಜೆ ಸಿ ಐ ಉಪ್ಪುಂದ ಅಧ್ಯಕ್ಷ ಪ್ರದೀಪ್ ಶೆಟ್ಟಿ ಕಾರಿಕಟ್ಟೆ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಜೆ ಸಿ ಐ ಉಪ್ಪುಂದದ ಪದಾಧಿಕಾರಿ ಗುರುರಾಜ್ ಹೆಬ್ಬಾರ್,ಸಂಪನ್ಮೂಲ ವ್ಯಕ್ತಿ ಅಶ್ವಿನ್ ಕುಮಾರ್ ಎಂ.ಮಂಗಳೂರು,ಉಪನ್ಯಾಸಕ ಸತೀಶ್,ಜೆಸಿಐ ಪೂರ್ವ ಅಧ್ಯಕ್ಷರಾದ ಯು ಪ್ರಕಾಶ್ ಭಟ್,ಪುರಂದರ ಖಾ ರ್ವಿ ಜೆಸಿ ಉಪ್ಪಂದದ ಉಪಾಧ್ಯಕ್ಷ ಸಂತೋಷ್,ಅನುದೀಪ್,ಕಾಲೇಜಿನ ಉಪನ್ಯಾಸಕರು ಜೆ ಸಿ ಐ ಸದಸ್ಯರು ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.