ಶಿರೂರು: ಶ್ರೀ ಮಹಾವಿಷ್ಣು ದೇವಸ್ಥಾನ ತೂದಳ್ಳಿ ಯಡ್ತರೆ ಗ್ರಾಮ ಇದರ ಶ್ರೀದೇವರ ಪುನಃಪ್ರತಿಷ್ಠೆ, ಅಷ್ಟಬಂಧ,ಬ್ರಹ್ಮಕಲಶ ಮತ್ತು ಮಹಾವಿಷ್ಣುಯಾಗ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು.ಧ.ಗ್ರಾ.ಯೋಜನೆಯ ಯೋಜನಾಧಿಕಾರಿ ವಿನಾಯಕ ಪೈ ಮಾತನಾಡಿ ದೇವರ ಆರಾಧನೆ ಮತ್ತು ಧಾರ್ಮಿಕ ಕೇಂದ್ರಗಳಲ್ಲಿ ನಡೆಯುವಂತ ಪೂಜಾ ಪುನಸ್ಕಾರಗಳು ಊರಿಗೆ ಒಳಿತನ್ನು ಮಾಡುತ್ತದೆ.ಹಲವು ವರ್ಷಗಳ ಇತಿಹಾಸ ಇರುವ ದೇವಸ್ಥಾನಗಳ ಪುನ: ಪ್ರತಿಷ್ಠೆಯಿಂದ ಊರಿಗೆ ಶ್ರೇಯಸ್ಸು ದೊರೆಯುತ್ತದೆ.ಇದರ ಜೊತೆಗೆ ಸಂಘಟನೆ ಮತ್ತು ಒಗ್ಗಟ್ಟು ಧಾರ್ಮಿಕ ಕಾರ್ಯದ ಮೂಲಕ ದೊರೆಯುತ್ತದೆ.ಭಗವಂತನ ಆರಾಧನೆಯಿಂದ ಬದುಕಿಗೆ ಬೆಳಕು ದೊರೆಯುತ್ತದೆ.ತೂದಳ್ಳಿ ಶ್ರೀ ಮಹಾವಿಷ್ಣು ದೇವಸ್ಥಾನದ ಪುನಃಪ್ರತಿಷ್ಠೆ ವಿಜೃಂಭಣೆಯಿಂದ ನಡೆದಿದೆ ಎಂದರು.
ಶ್ರೀ ಮಹಾವಿಷ್ಣು ದೇವಸ್ಥಾನ ತೂದಳ್ಳಿ ಅಧ್ಯಕ್ಷ ಶಾಂತಾನಂದ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ದೇವಸ್ಥಾನದ ಅರ್ಚಕ ನಾಗರಾಜ ಭಟ್,ನಿವೃತ್ತ ಕಾರ್ಯನಿರ್ವಾಹಕ ಇಂಜಿನಿಯರ್ ಕೃಷ್ಣಮೂರ್ತಿ ಎಸ್.ಕೋಟೆಮನೆ,ಧತ್ತಾತ್ರೇಯ ಭಟ್ ಮೇಲ್ಪಂಕ್ತಿ,ಪತ್ರಕರ್ತ ಅರುಣ ಕುಮಾರ್ ಶಿರೂರು,ನಾಗಪ್ಪ ಮರಾಠಿ ಹೊಸೂರು,ನಾಗೇಶ ಭಂಡಾರಿ ಊದೂರು,ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಗಣೇಶ ಆಚಾರ್ಯ,ಉಪಾಧ್ಯಕ್ಷ ಕುಪ್ಪ ಪೂಜಾರಿ,ಕೃಷ್ಣ ಪೂಜಾರಿ ಜೋಗೂರು,ಮಹಾದೇವ ಪೂಜಾರಿ ಕಿಸ್ಮತ್ತಿ,ಪದ್ಮಾಕ್ಷ ಪೂಜಾರಿ ಗೋಳಿಬೇರು,ಕುಪ್ಪಯ್ಯ ಪೂಜಾರಿ ಚಕ್ತಕಲ್,ಅಣ್ಣಪ್ಪ ಭಂಡಾರಿ ಊದೂರು,ಕಾರ್ಯದರ್ಶಿ ದಿನೇಶ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಹಾವಿಷ್ಣು ದೇವರಿಗೆ ಬೆಳ್ಳಿ ಕಿರೀಟ ಸಮರ್ಪಿಸಿದ ನಾರಾಯಣ ಶೆಟ್ಟಿ ಕುಂಟವಾಣಿ ಯವರನ್ನು ಹಾಗೂ ಧನಸಹಾಯ ನೀಡಿದ ದಾನಿಗಳನ್ನು ಸಮ್ಮಾನಿಸಲಾಯಿತು.
ಆಲಂದೂರು ಮಂಜುನಾಥ ಗಾಣಿಗ ಸ್ವಾಗತಿಸಿದರು.ಶಿಕ್ಷಕ ಸುಧಾಕರ ಪಿ.ಬೈಂದೂರು ಕಾರ್ಯಕ್ರಮ ನಿರ್ವಹಿಸಿದರು.ಹಾಲೇಶಪ್ಪ ವಂದಿಸಿದರು.
ವರದಿ/ಚಿತ್ರ: ಗಿರೀಶ್ ಶಿರೂರು