ಬೈಂದೂರು: ಜೆಸಿಐ ಉಪ್ಪುಂದ ಜೇಸಿರೇಟ್ ವಿಭಾಗ ಹಾಗೂ ಇದರ ವತಿಯಿಂದ ಬೈಂದೂರು ಸಿಟಿ ಜೆಸಿ ಸದಸ್ಯರ ಸಹಭಾಗಿತ್ವದಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ಸಾಧಕರಿಗೆ ಸಮ್ಮಾನ,ತರಬೇತಿ ಸಂವಾದ ಹಾಗೂ ಸ್ಪರ್ಧಾ ಕಾರ್ಯಕ್ರಮ ಉಪ್ಪಂದ ರೈತ ಸಿರಿ ಸಭಾಭವನದಲ್ಲಿ ನಡೆಯಿತು. ಕಂಬದಕೊಣೆ ರೈತರ ಸೇವಾ ಸಹಕಾರಿ ಸಂಘ ನಿಯಮಿತ ಉಪ್ಪುಂದ ಅಧ್ಯಕ್ಷ ಎಸ್.ಪ್ರಕಾಶ್ಚಂದ್ರ ಶೆಟ್ಟಿ ಮಾತನಾಡಿ ಸೃಷ್ಟಿಯಲ್ಲಿ ಪ್ರತಿಯೊಬ್ಬ ಮನುಷ್ಯನು ಕೂಡ ತನ್ನ ಜೀವನದ ಎಲ್ಲಾ ಹಂತಗಳಲ್ಲಿ ಮಹಿಳೆಯ ಮೇಲೆ ಅವಲಂಬಿತನಾಗಿರುತ್ತಾನೆ ಪ್ರತಿಯೊಬ್ಬ ಮಹಿಳೆಯು ಕೂಡ ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸಿದಾಗ ಈ ದೇಶ ಇನ್ನಷ್ಟು ಶೀಘ್ರವಾಗಿ ಅಭಿವೃದ್ಧಿ ಹೊಂದುತ್ತದೆ ಎಂದರು.
ಜೆ ಸಿ ಐ ಉಪ್ಪುಂದ ಜೇಸಿರೇಟ್ ಅಧ್ಯಕ್ಷೆ ರೇಖಾ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ವಲಯ ಕಾರ್ಯಕ್ರಮ ವಿಭಾಗದ ನಿರ್ದೇಶಕ ಅಕ್ಷತಾ ಗಿರೀಶ್,ಪೂರ್ವ ಅಧ್ಯಕ್ಷರಾದ ಮಂಗೇಶ್ ಶ್ಯಾನುಭಾಗ್,ಜೆಸಿಐ ಉಪ್ಪುಂದ ಅಧ್ಯಕ್ಷ ಪ್ರದೀಪ್ ಶೆಟ್ಟಿ ಕಾರಿಕಟ್ಟೆ,ಬೈಂದೂರು ಸಿಟಿ ಜೆಸಿ ಪೂರ್ವ ಅಧ್ಯಕ್ಷೆ ಪ್ರಿಯದರ್ಶಿನಿ ಬೆಸ್ಕೂರ್,ಉಪ್ಪುಂದ ಜಿಸಿ ನಿಕಟ ಪೂರ್ವ ಅಧ್ಯಕ್ಷ ನಾಗರಾಜ ಪೂಜಾರಿ,ಗುಲಾಬಿ ಮರವಂತೆ, ಬೈಂದೂರು ಜೆಸಿಐ ಕಾರ್ಯದರ್ಶಿ ಸತೀಶ್ ಬೈಂದೂರು,ನಿಶಾ ಸಂತೋಷ್ ಶೆಟ್ಟಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಅಂಗವಿಕಲ ಇಬ್ಬರು ಗಂಡು ಮಕ್ಕಳನ್ನ 45 ವರ್ಷಗಳಿಂದ ಸಾಕುತ್ತಿರುವ ಮಹಾತಾಯಿ ಗಿರಿಜಾ ಅವರನ್ನು ಉದ್ಯಮ ಕ್ಷೇತ್ರದಲ್ಲಿ ತನ್ನನ್ನ ತೊಡಗಿಸಿಕೊಂಡ ಲೀಲಾ ಅವರನನ್ನು ಹಾಗೂ ಆಶಾ ಕಾರ್ಯಕರ್ತೆ ಪ್ರಕಾಶಿನಿ ಅವರನ್ನು ಸಮ್ಮಾನಿಸಲಾಯಿತು.
ರಮಣಿ ಸ್ವಾಗತಿಸಿದರು.ಶ್ರೀಲತಾ ಕಾರ್ಯಕ್ರಮ ನಿರ್ವಹಿಸಿದರು.ಕಾರ್ಯದರ್ಶಿ ಪುರಂದರ ಉಪ್ಪುಂದ ವಂದಿಸಿದರು.ಬಳಿಕ ವಲಯ ತರಬೇತುದಾರರಾದ ಅಕ್ಷತಾ ಗಿರೀಶ್ ತರಬೇತಿ ಕಾರ್ಯಕ್ರಮ ನಡೆಸಿಕೊಟ್ಟರು.