ಶಿರೂರು: ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಮಹಿಳೆ ಸರಿಸಮನಾಗಿ ಕುಟುಂಬ ನಿರ್ವಹಣೆ ಮಾಡುತ್ತಿರುವುದು ಶ್ಲಾಘನೀಯ.ಮಹಿಳೆಯರಿಗೆ ಸೂಕ್ತ ಅವಕಾಶ ದೊರೆತಾಗ ಪ್ರತಿಭೆ ಹೊರಹೊಮ್ಮುತ್ತದೆ. ಕುಟುಂಬ ಹಾಗೂ ಸಮಾಜ ನಿರ್ವಹಣೆಯಲ್ಲಿ ಮಹಿಳೆಯ ಪಾತ್ರ ಮಹತ್ವದ್ದಾಗಿದೆ ಎಂದು ಬೈಂದೂರು ಸಮುದಾಯ ಆರೋಗ್ಯ ಕೇಂದ್ರದ ಮಕ್ಕಳ ತಜ್ಞೆ ಡಾ.ನಂದಿನಿ ಬಿ.ಹೇಳಿದರು ಅವರು ಜೆ.ಸಿ.ಐ ಶಿರೂರು ಹಾಗೂ ಜೇಸಿರೇಟ್ ವಿಭಾಗ ಇದರ ವತಿಯಿಂದ ಶಿರೂರು ಪೇಟೆ ವೆಂಕಟರಮಣ ಸಭಾಭವನದಲ್ಲಿ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಶಿರೂರು ಜೆಸಿಐ ವತಿಯಿಂದ ಸಮ್ಮಾನ ಸ್ವೀಕರಿಸಿ ಈ ಮಾತುಗಳನ್ನಾಡಿದರು.

ಜೇಸಿರೇಟ್ ಅಧ್ಯಕ್ಷೆ ಸ್ಮಿತಾ ಹರೀಶ್ ಶೇಟ್ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಜೆಸಿಐ ವಲಯಾಧಿಕಾರಿ ಪಾಂಡುರಂಗ ಅಳ್ವೆಗದ್ದೆ,ಶಿರೂರು ಜೆಸಿಐ ಅಧ್ಯಕ್ಷ ನಾಗೇಂದ್ರ ಪ್ರಭು,ನಿಕಟ ಪೂರ್ವಾಧ್ಯಕ್ಷ ಸುರೇಶ್ ಮಾಕೋಡಿ,ಅರುಣ್ ಕುಮಾರ್ ಶಿರೂರು ಹಾಗೂ ಜೆಸಿಐ ಪೂರ್ವಾಧ್ಯಕ್ಷರು ಉಪಸ್ಥಿತರಿದ್ದರು.

ಜೂನಿಯರ್ ಜೇಸಿ ಅಧ್ಯಕ್ಷೆ ನಿಶ್ಚಿತಾ ರಾಜೇಶ್ ಕಾರ್ಯಕ್ರಮ ನಿರ್ವಹಿಸಿದರು.ಕಾರ್ಯದರ್ಶಿ ವಿನೋದ ಮೇಸ್ತ ವಂದಿಸಿದರು.

News;Giri shiruru

pic:Krishna poojary market

 

 

Leave a Reply

Your email address will not be published.

5 × 3 =