ಶಿರೂರು; ಜಗತ್ತು ವೇಗವಾಗಿ ಬದಲಾವಣೆಗೆ ಒಗ್ಗಿಕೊಳ್ಳುತ್ತಿದೆ.ಮಾಹಿತಿ ತಂತ್ರಜ್ಞಾನ ಬೆರಳತುದಿಯಲ್ಲಿದೆ.ನಮ್ಮೊಳಗಿನ ಭಾಂಧವ್ಯ ಬೆಳೆದಾಗ ಐಕ್ಯತೆ ಮೂಡುತ್ತದೆ.ಸಾಂಸ್ಕ್ರತಿಕ ಚಟುವಟಿಕೆಗಳು ಮನಸ್ಸುಗಳನ್ನು ಕಟ್ಟುವ ಮೂಲಕ ಊರಿನ ಅಭಿವ್ರದ್ದಿಗೆ ಪ್ರೇರಣೆ ನೀಡುತ್ತದೆ ಎಂದು ಲೆಪ್ಟಿನೆಂಟ್ ಕರ್ನಲ್ ರಂಜಿತ್ ಕುಮಾರ್ ಶಿರೂರು ಹೇಳಿದರು. ಅವರು ಶಿರೂರು ಪೇಟೆ ಶಾಲೆ ಮೈದಾನದಲ್ಲಿ ನಡೆದ ರಾಷ್ಟ್ರಭಕ್ತ ಸ್ವಾಮಿ ವಿವೇಕಾನಂದ ವೇದಿಕೆ ಶಿರೂರು ಇದರ 20ನೇ ವರ್ಷದ ವಾರ್ಷಿಕ ಸಾಂಸ್ಕ್ರತಿಕ ಸಂಭ್ರಮ ಕಾರ್ಯಕ್ರಮದಲ್ಲಿ ಶಿರೂರ್‍ದ ಸಿರಿ ಸಮ್ಮಾನ ಸ್ವೀಕರಿಸಿ ಈ ಮಾತುಗಳನ್ನಾಡಿದರು.
ಜಿ.ಪಂ ಮಾಜಿ ಸದಸ್ಯ ಸುರೇಶ್ ಬಟ್ವಾಡಿ ಕಾರ್ಯಕ್ರಮ ಉದ್ಘಾಟಿಸಿದರು.ಸ್ವಾಮಿ ವಿವೇಕಾನಂದ ವೇದಿಕೆ ಅಧ್ಯಕ್ಷ ಶಾಂತಾರಾಮ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ತಾ.ಪಂ ಮಾಜಿ ಸದಸ್ಯ ಪುಷ್ಪರಾಜ್ ಶೆಟ್ಟಿ,ಶಿರೂರು ಗ್ರಾ.ಪಂ ಉಪಾಧ್ಯಕ್ಷ ರವೀಂದ್ರ ಶೆಟ್ಟಿ ಪಟೇಲ್,ಪುಷ್ಪ ರಘುರಾಮ ಮೇಸ್ತ,ಉದ್ಯಮಿ ರಾಮ ಎ.ಮೇಸ್ತ,ಅರುಣ್ ಕುಮಾರ್ ಶಿರೂರು,ಗ್ರಾ.ಪಂ ಸದಸ್ಯ ರವೀಂದ್ರ ಶೆಟ್ಟಿ ಆರ್‍ಮಕ್ಕಿ,ಶಿರೂರು ಬಂಟರ ಸಂಘದ ಅಧ್ಯಕ್ಷ ಶ್ರೀನಿವಾಸ ಶೆಟ್ಟಿ,ಎರಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಶಾಂತಾನಂದ ಆಚಾರಿ,ಮೊಗವೀರ ಯುವ ಸಂಘಟನೆ ಬೈಂದೂರು-ಶಿರೂರು ಘಟಕದ ಅಧ್ಯಕ್ಷ ರವಿರಾಜ್ ಚಂದನ್ ಕಳವಾಡಿ,ರವಿದಾಸ್ ಮೊಗೇರ್ ಕರಾವಳಿ,ವಿನೋದ ಮೇಸ್ತ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಉದ್ಯಮಿ ಕೃಷ್ಣ ಪೂಜಾರಿ ದೇವಲ್ಕುಂದ ಹಾಗೂ ಶಿಕ್ಷಕ ಸಿ.ಎನ್.ಬಿಲ್ಲವ ರವರನ್ನು ಸಮ್ಮಾನಿಸಲಾಯಿತು.ಶಿಕ್ಷಕ ಸಿ.ಎನ್.ಬಿಲ್ಲವ ಸ್ವಾಗತಿಸಿದರು.ಶ್ವೇತಾ ಎಸ್.ಆಚಾರ್ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.
News/Giri shiruru