ಶಿರೂರು: ಸ್ಟಾರ್ ಹೆಲ್ತ್ ಮತ್ತು ಅಲೈಡ್ ಇನ್ಸೂರೆನ್ಸ್ ಕಂ.ಲಿ. ಇದರ ವರ್ಟಿಕಲ್ ಹೆಡ್ ಆದಿತ್ಯ ಬಿಯಾನಿ ಮತ್ತು ಸೀನಿಯರ್ ಟೆರಿಟೊರಿ ಮೆನೇಜರ್ ಕಿಶೋರೆ ಪಿ.ಹೆಚ್.ರವರು ಶಿರೂರು-ಬೈಂದೂರು ಶಾಖೆಗೆ ಮಂಗಳವಾರ ಭೇಟಿ ನೀಡಿದರು.ಈ ಸಂದರ್ಭದಲ್ಲಿ ಮಾತನಾಡಿದ ವರ್ಟಿಕಲ್ ಹೆಡ್ ಆದಿತ್ಯ ಬಿಯಾನಿ ಸ್ಟಾರ್ ಆರೋಗ್ಯ ವಿಮಾ ಸಂಸ್ಥೆಯು ಗ್ರಾಮೀಣ ಭಾಗದ ಜನರಿಗೆ ಅನೂಕೂಲವಾಗುವಂತೆ ಸರಕಾರದ ಅನುಮತಿಯಂತೆ ಸುಮಾರು ಶೇಖಡ 20% ರಷ್ಟು ರಿಯಾಯಿತಿ ದರದಲ್ಲಿ ಪಾಲಿಸಿಯನ್ನು ನೀಡುತ್ತಿದೆ.ಉಸಿರಾಡುವ ಗಾಳಿ,ಸೇವಿಸುವ ಆಹಾರ ಮತ್ತು ಕುಡಿಯುವ ನೀರು ಕಲುಷಿತಗೊಂಡಿರುವುದರಿಂದ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ.ಆರೋಗ್ಯ ಜಾಗೃತಿ ಅತ್ಯಗತ್ಯ.ಅದರ ಜೊತೆಗೆ ಆರೋಗ್ಯ ವಿಮೆ ಕೂಡ ಪ್ರತಿ ಕುಟುಂಬಕ್ಕೂ ಅತ್ಯಗತ್ಯವಾಗಿದೆ.ತ್ರಾಸಿ,ನಾವುಂದ,ಉಪ್ಪುಂದ,ಬೈಂದೂರು,ಭಟ್ಕಳ ಮತ್ತು ಹೊನ್ನಾವರ ಭಾಗದಲ್ಲಿ ಅಧೀಕೃತ ಸೇವಾ ಕೇಂದ್ರಗಳನ್ನು ತರೆಯಲಾಗುವದು.ಈ ಭಾಗಗಳಲ್ಲಿ ನಿರುದ್ಯೋಗಿ ವಿದ್ಯಾವಂತರಿಗೆ ಉದ್ಯೋಗ ಕಲ್ಪಿಸಲಾಗುವುದು. ಗ್ರಾಹಕರ ಅನುಕೂಲಕ್ಕಾಗಿ ಇನ್ನಷ್ಟು ಸೇವಾ ಕೇಂದ್ರ ಆರಂಭವಾಗಲಿದೆ ಸ್ಟಾರ್ ಆರೋಗ್ಯ ಕಾರ್ಡ್ ಮನೆ ಮನೆಗೆ ತಲುಪಲಿ ಎಂದರು.
ಈ ಸಂದರ್ಭದಲ್ಲಿ ಶಾಖೆಯ ಸೇಲ್ಸ್ ಮೆನೇಜರ್ ಲೋಕೇಶ್ ಕುಮಾರ್, ಮಹೇಶ್ ಮೇಸ್ತ,ಪ್ರತಿನಿಧಿಗಳಾದ ಯು.ಲಕ್ಷ್ಮೀನಾರಾಯಣ ಮಯ್ಯ,ಆನಂದ ಬಿಲ್ಲವ ಉಪಸ್ಥಿತರಿದ್ದರು.
ಸ್ಟಾರ್ ಹೆಲ್ತ್ ಶಿರೂರು ಶಾಖೆಯ ವ್ಯವಸ್ಥಾಪಕ ರವಿದಾಸ್ ಮೊಗೇರ್ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.ಶಿರೂರು ಶಾಖೆಯ ಅಧಿಕಾರಿ ಚಿದಂಬರ್ ಪಿ. ಮೊಗೇರ್ ವಂದಿಸಿದರು.