ಶಿರೂರು: ಕ್ರೀಡೆ ಮನುಷ್ಯನ ಜೀವನದ ಅವಿಭಾಜ್ಯ ಅಂಗವಾಗಿದೆ.ಕ್ರೀಡೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ನಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುವುದಾಗಿದೆ.ಕ್ರೀಡಾ ಸ್ಪೂರ್ತಿಯಿಂದ ಭಾಗವಹಿಸುವ ಕ್ರೀಡಾಳುಗಳು ಕಠಿಣ ಪ್ರಯತ್ನ ಮತ್ತು ಪರಿಶ್ರಮದಿಂದ ಉತ್ತಮ ಅವಕಾಶ ಪಡೆಯಲು ಸಾಧ್ಯವಾಗುತ್ತದೆ.ಕ್ರೀಡೆ ಸಹಭಾಳ್ವೆಯ ಜೊತೆಗೆ ಸಾಮರಸ್ಯ ಮೂಡಿಸುತ್ತದೆ ಎಂದು ಬೈಂದೂರು ಬಿಜೆಪಿ ಮಂಡಲದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಹೇಳಿದರು ಅವರು ಎಮ್.ಸಿ.ಸಿ ಪ್ರೆಂಡ್ಸ್ ಮೇಲ್ಪಂಕ್ತಿ ಶಿರೂರು ಇದರ ವತಿಯಿಂದ ಮೇಲ್ಪಂಕ್ತಿಯಲ್ಲಿ ನಡೆದ 30 ಗಜಗಳ ಕ್ರಿಕೆಟ್ ಪಂದ್ಯಾಟ ಜಟ್ಟಿಗೇಶ್ವರ ಟ್ರೋಪಿ-2023 ಉದ್ಘಾಟಿಸಿ ಈ ಮಾತುಗಳನ್ನಾಡಿದರು.
ತಾ.ಪಂ ಮಾಜಿ ಸದಸ್ಯ ಪುಷ್ಪರಾಜ್ ಶೆಟ್ಟಿ ಕ್ರೀಡಾಂಗಣವನ್ನು ಉದ್ಘಾಟಿಸಿದರು.ಗ್ರಾ.ಪಂ ಸದಸ್ಯ ಸುರೇಂದ್ರ ದೇವಾಡಿಗ ಟ್ರೋಪಿ ಅನಾವರಣಗೊಳಿಸಿದರು.
ಮುಖ್ಯ ಅತಿಥಿಗಳಾಗಿ ಎರಗೇಶ್ವರ ದೇವಸ್ಥಾನ ಮೇಲ್ಪಂಕ್ತಿ ಆಡಳಿತ ಮೊಕ್ತೇಸರ ಶಾಂತಾನಂದ ಆಚಾರಿ,ಹಿರಿಯ ಕೃಷಿಕ ಸುಬ್ರಾಯ ನಾಯ್ಕ ಬಪ್ಪನಬೈಲು,ಉದ್ಯಮಿ ರವೀಂದ್ರ ಶೆಟ್ಟಿ ಹೊನ್ಕೇರಿ,ಪತ್ರಕರ್ತ ಗಿರೀಶ್ ಶಿರೂರು,ಜನಾರ್ಧನ ಪೂಜಾರಿ ಮೇಲ್ಪಂಕ್ತಿ ಉಪಸ್ಥಿತರಿದ್ದರು.
ಗಿರೀಶ್ ದೇವಾಡಿಗ ಸ್ವಾಗತಿಸಿದರು.ದೀಪಕ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.ಯೋಗೇಶ್ ದೇವಾಡಿಗ ವಂದಿಸಿದರು.