ಶಿರೂರು; ಪೈಪೋಟಿಯುತ ಸಮಾಜದಲ್ಲಿ ದಿನದಿಂದ ದಿನಕ್ಕೆ ಹೊಸ ಹೊಸ ಆವಿಷ್ಕಾರಗಳ ಬೆಳವಣಿಗೆಯಾಗುತ್ತಿದೆ.ನಿನ್ನೆಯ ವಿಚಾರಗಳು ನಾಳೆಗೆ ಬೆಲೆ ಕಳೆದುಕೊಂಡು ಬಿಡುತ್ತದೆ.ಬದಲಾವಣೆಯ ಜೊತೆಗೆ ಜಗತ್ತಿನ ಪ್ರಗತಿಗೆ ನಮ್ಮನ್ನು ತೆರೆದುಕೊಳ್ಳಬೇಕಿದೆ.ಶಿಕ್ಷಣದ ಜೊತೆಗೆ ವ್ಯಕ್ತಿತ್ವ ರೂಪಿಸುವುದು ಬಹುಮುಖ್ಯ ಎಂದು ಮಂಗಳೂರು ಯುನಿವರ್ಸಿಟಿ ಉಪ ಕುಲಪತಿ ಡಾ.ಪಿ.ಸುಬ್ರಹ್ಮಣ್ಯ ಯಡಪಡಿತ್ಯಾಯ ಹೇಳಿದರು ಅವರು ಶಿರೂರು ಗ್ರೀನ್‌ವ್ಯಾಲಿ ಇಂಟರ್‌ನ್ಯಾಷನಲ್ ಸ್ಕೂಲ್ & ಪಿ.ಯು ಕಾಲೇಜು ಇದರ 22ನೇ ಶಾಲಾ ವಾರ್ಷಿಕೋತ್ಸವ ಸಮಾರಂಭ ಕಾರ್ಯಕ್ರಮದಲ್ಲಿ ಈ ಮಾತುಗಳನ್ನಾಡಿದರು.
ಗ್ರೀನ್‌ವ್ಯಾಲಿ ಶಿಕ್ಷಣ ಸಂಸ್ಥೆಯ ಟ್ರಸ್ಟಿ ಮಣೆಗಾರ್ ಮೀರಾನ್ ಸಾಹೇಬ್ ಮಾತನಾಡಿ ಗ್ರಾಮೀಣ ಭಾಗವಾದ ಶಿರೂರಿನಲ್ಲಿ ದೂರದೃಷ್ಟಿತ್ವದ ಚಿಂತನೆಯಿಂದ ಆರಂಭಿಸಿದ ಗ್ರೀನ್‌ವ್ಯಾಲಿ ಶಿಕ್ಷಣ ಸಂಸ್ಥೆ ಇಂದು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದೆ.ಗುಣಮಟ್ಟ ಮತ್ತು ಪೂರಕ ವಾತಾವರಣದ ಜೊತೆಗೆ ಅತ್ಯುತ್ತಮ ಚಿಂತನೆ,ಪಾಲಕರ ಹಾಗೂ ಪೋಷಕರ ಸಹಕಾರ ಶಿಕ್ಷಕರ ಕ್ರಿಯಾಶೀಲತೆ ಸಂಸ್ಥೆಯನ್ನು ಇನ್ನಷ್ಟು ಎತ್ತರಕ್ಕೆ ಬೆಳೆಸಿದೆ ಎಂದರು.
ಮುಖ್ಯ ಅತಿಥಿಗಳಾಗಿ ಮಣಿಪಾಲ ಎಮ್.ಐ.ಟಿ ನಿರ್ದೇಶಕ ಕಮಾಂಡರ್ ಡಾ. ಅನಿಲ್ ರಾಣಾ,ಡಾ.ಶಿರೂರು ವೆಲ್ಪ್‌ರ್ ಟ್ರಸ್ಟ್ ಅಧ್ಯಕ್ಷ ಡಾ.ಸೈಯದ್ ಹಸನ್,ಮಹ್ಮದ್ ಯಾಯಿಯಾ ಖಾಜಿ ಮೀರಾನ್,ಸೈಯದ್ ಇಬ್ರಾಹಿಂ ಉಪಸ್ಥಿತರಿದ್ದರು.
ಪ್ರಾಂಶುಪಾಲ ಜಾನ್ ಮ್ಯಾಥೂ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.ನೇಹಾ ಕಾಮತ್ ಕಾರ್ಯಕ್ರಮ ನಿರ್ವಹಿಸಿದರು.
News/Giri shiruru
photo/a.one studio shiruru