ಶಿರೂರು : ಕನ್ನಡ ಮಾಧ್ಯಮ ಶಾಲೆಗಳನ್ನು ಬೆಳೆಸುವುದು ಮತ್ತು ಉಳಿಸುವ ಜೊತೆಗೆ ಅಗತ್ಯವಿರುವ ಮೂಲಭೂತ ವ್ಯವಸ್ಥೆಗಳನ್ನು ಒದಗಿಸುವ ಮೂಲಕ ಉತ್ತಮ ಶೈಕ್ಷಣಿಕ ವಾತಾವರಣ ಕಲ್ಪಿಸಬೇಕು.ಸ್ಥಳೀಯರ ಸಹಕಾರ ಇದ್ದಾಗ ಮಾತ್ರ ಶಾಲೆಯ ಪ್ರಗತಿ ಸಾಧ್ಯ ಎಂದು ಶಿರೂರು ವೆಲ್ಪ್‌ರ್ ಟ್ರಸ್ಟ್ ಅಧ್ಯಕ್ಷ ಡಾ. ಹಸನ್ ಹೇಳಿದರು ಅವರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಪ್ಪನಬೈಲು ಶಿರೂರಿನಲ್ಲಿ ನೂತನ ಕೊಠಡಿಯನ್ನು ಉದ್ಘಾಟಿಸಿ ಈ ಮಾತುಗಳನ್ನಾಡಿದರು.
ಶಿರೂರು ಗ್ರೀನ್‌ವ್ಯಾಲಿ ಶಿಕ್ಷಣ ಸಂಸ್ಥೆಯ ಟ್ರಸ್ಟಿ ಮಣೆಗಾರ್ ಮೀರಾನ್ ಸಾಹೇಬ್ ಮಾತನಾಡಿ ಪರಸ್ಪರ ಪ್ರೀತಿ ಬಾಂಧವ್ಯದ ಮೂಲಕ ಸಾಮರಸ್ಯದ ಬೆಳವಣಿಗೆ ಸಾಧ್ಯ.ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಕೊರತೆಯಾಗದಿದ್ದಲ್ಲಿ ಆ ಊರು ಉತ್ತಮ ಬೆಳವಣಿಗೆಯಾಗಿದೆ ಎಂದು ನಿರ್ಣಯಿಸಬಹುವುದು.ಶಿಕ್ಷಕರ ಆಸಕ್ತಿ ಪೋಷಕರ ಪ್ರೋತ್ಸಾಹ ಹಾಗೂ ದಾನಿಗಳ ಸಹಕಾರ ಇದ್ದಾಗ ಕನ್ನಡ ಮಾಧ್ಯಮ ಶಾಲೆಗಳ ಬೆಳವಣಿಗೆ ಇನ್ನಷ್ಟು ಸಾಧ್ಯ ಎಂದರು.
ಈ ಸಂದರ್ಭದಲ್ಲಿ ದಾನಿಗಳಾದ ಮಣೆಗಾರ್ ಮೀರಾನ್ ಸಾಹೇಬ್, ಹಾಗೂ ಸೈಯದ್ ಇಬ್ರಾಹಿಂ ರವನ್ನು ಶಾಲೆಯ ವತಿಯಿಂದ ಸಮ್ಮಾನಿಸಲಾಯಿತು.
ಬೊಡರ್ನಿ ರಯಿಸಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.ಕಾರ್ಯಕ್ರಮದಲ್ಲಿ ಶಿರೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಜಿ.ಯು ದಿಲ್‌ಶಾದ್ ಬೇಗಂ,ಗ್ರಾಮ ಪಂಚಾಯತ ಸದಸ್ಯ ಮುಕ್ರಿ ಅಲ್ತಾಫ್,ಮಾಜಿ ಗ್ರಾಮ ಪಂಚಾಯತ ಸದಸ್ಯ ರಘುರಾಮ ಕೆ.ಪೂಜಾರಿ,ಎಸ್.ಡಿ.ಎಮ್.ಸಿ ಸದಸ್ಯರು ಹಾಗೂ ಶಿಕ್ಷಕ ವೃಂದದವರು ಹಾಜರಿದ್ದರು.
ಪ್ರಭಾರ ಮುಖ್ಯ ಶಿಕ್ಷಕಿ ವಿನೋದಿನಿ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.
News/Giri shiruru