ಶಿರೂರು: ಶ್ರೀ ದುರ್ಗಾಂಬಿಕಾ ದೇವಸ್ಥಾನ ಕೋಟೆಮನೆ ಶಿರೂರು ಇದರ ನಿಧಿ ಕುಂಭ ಸ್ಥಾಪನೆ ಹಾಗೂ ಮುಷ್ಟಿ ಕಾಣಿಕೆ ಸಮರ್ಪಣೆ ಕಾರ್ಯಕ್ರಮ ಶುಕ್ರವಾರ ದೇವಸ್ಥಾನದ ಆವರಣದಲ್ಲಿ ನಡೆಯಿತು.

ಬೆಳಿಗ್ಗೆ  ತಂತ್ರಿಗಳಾದ ಶ್ರೀನಿವಾಸ ಅಡಿಗ ಗೋಕರ್ಣ ಹಾಗೂ ಗ್ರಾಮ ಪುರೋಹಿತರಾದ ಸುರೇಶ ಅವಭೃತ ಇವರ ಪುರೋಹಿತ್ವದಲ್ಲಿ ನಿಧಿ ಕುಂಭ ಸ್ಥಾಪನೆ,ಮುಷ್ಟಿ ಕಾಣಿಕೆ ಸಮರ್ಪಣೆ,ವಿವಿಧ ಪೂಜಾ ವಿಧಿ ವಿಧಾನಗಳು ಹಾಗೂ ಮದ್ಯಾಹ್ನ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ  ನೂರಾರು ಭಕ್ತರು ನಿಧಿ ಕುಂಭ ಸ್ಥಾಪನೆ ಹಾಗೂ ಮುಷ್ಟಿ ಕಾಣಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ನಾರಾಯಣ ವಿ.ಮೇಸ್ತ,ಉಪಾಧ್ಯಕ್ಷ ಶಂಕರ ಎಸ್.ಮೇಸ್ತ,ಕಾರ್ಯದರ್ಶಿ ಚಂದ್ರಶೇಖರ ಮೇಸ್ತ,ಜೊತೆ ಕಾರ್ಯದರ್ಶಿ ಶಂಕರ ಕೆ.ಮೇಸ್ತ,ಖಜಾಂಚಿ ರಮೇಶ ಬಿ.ಮೇಸ್ತ,ಸದಸ್ಯರಾದ ಪಾಲಾಕ್ಷ ಮೇಸ್ತ,ನಾಗೇಶ ಎಮ್.ಮೇಸ್ತ,ಚಂದ್ರಹಾಸ ಎಸ್.ಮೇಸ್ತ,ಗೋವಿಂದ ಡಿ.ಮೇಸ್ತ,ಶಂಕರ ಜಿ.ಮೇಸ್ತ,ರಮೇಶ ಪಿ.ಮೇಸ್ತ,ನಾಗರಾಜ ವಿ.ಮೇಸ್ತ,ಕೃಷ್ಣ ಎನ್.ಮೇಸ್ತ,ಅನುವಂಶಿಕ ಅರ್ಚಕರಾದ ರಾಮಚಂದ್ರ ಮೇಸ್ತ, ಪಾಂಡುರಂಗ ಮೇಸ್ತ,ಶಿಲ್ಪಿಗಳಾದ ವಿಶ್ವನಾಥ ಕಾರ್ಕಳ,ವತ್ತಿನೆಣೆ ಶ್ರೀಗುರುರಾಘವೇಂದ್ರ ಸ್ವಾಮಿ ಮಠದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸೂಲಿಯಣ್ಣ ಶೆಟ್ಟಿ ಹಾಗೂ ಊರಿನ ಸರ್ವ ಭಕ್ತಾಧಿಗಳು ಹಾಜರಿದ್ದರು.

ವರದಿ/ಚಿತ್ರ: ಗಿರಿ ಶಿರೂರು

Leave a Reply

Your email address will not be published. Required fields are marked *

five + 8 =