ಬೈಂದೂರು: ಜೂನಿಯರ್ ಜೇಸಿ ಮತ್ತು ಲೇಡಿ ಜೇಸಿ ಸಮ್ಮೇಳನ ಸಿಂಧು ಇದರ ವತಿಯಿಂದ ಯಡ್ತರೆ ಜೆ.ಎನ್.ಆರ್ ಕಲಾ ಮಂದಿರದಲ್ಲಿ ರವಿವಾರ ನಡೆದ ಕಾರ್ಯಕ್ರಮದಲ್ಲಿ ಜೆಸಿಐ ವಲಯ 15 ರ ಜೆಸಿಐ ಶಿರೂರ್ ರೂರಲ್ ನ ಅಧ್ಯಕ್ಷರಾದ ವಿನೋದ್ ಮೇಸ್ತ ಶಿರೂರ್ ಅವರಿಗೆ ಜೆಎಸಿ ಗೋಲ್ಡನ್ ಪ್ರಸಿಡೆಂಟ್ ಪ್ರಶಸ್ತಿ ನೀಡಲಾಯಿತು.
ಈ ಸಂದರ್ಭದಲ್ಲಿ ವಲಯದ ಅಧ್ಯಕ್ಷರ ಸಂತೋಷ ಶೆಟ್ಟಿ, ಜೆಎಸಿ ವಲಯ ಚೇರ್ ಮೇನ್ ಜಬ್ಬಾರ್ ಸಾಹಬೆ,ಜಎಸಿ ವಲಯದ ಪೂರ್ವ ಅಧ್ಯಕ್ಷೆ ಆಶಾ,ಶಂಬಾವಿ,ಉಪಾಧ್ಯಕ್ಷ ಪ್ರದೀಪ್ ಶೆಟ್ಟಿ,ಬೈಂದೂರು ಸಿಟಿ ಜೆಸಿಐ ಅಧ್ಯಕ್ಷೆ ಚೈತ್ರ, ವಿವಿಧ ಘಟಕಗಳ ಅಧ್ಯಕ್ಷರು,ಜೆಸಿಐ ಶಿರೂರು ಸ್ಥಾಪಕ ಅಧ್ಯಕ್ಷರು,ಪೂರ್ವ ಅಧ್ಯಕ್ಷರು ಸದಸ್ಯರು ಹಾಗೂ ಜೆಸಿಐ ಸದಸ್ಯರು ಹಾಜರಿದ್ದರು.