ಶಿರೂರು: ಇತ್ತೀಚೆಗೆ ಬೆಂಗಳೂರಿನ ವಿಜ್ಞಾನ ಭವನದಲ್ಲಿ ನಡೆದ ಹೋಮಿಯೋಪತಿ ಎಂ.ಡಿ ವೈದ್ಯಕೀಯ ವಿಭಾಗದಲ್ಲಿ ಶಿರೂರಿನ ಡಾ.ಮನಾಲಿ ಋತ್ವಿಕ್ ರವರಿಗೆ ಚಿನ್ನದ ಪದಕ ಲಭಿಸಿದೆ.ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೋಟ್ ಹಾಗೂ ಕರ್ನಾಟಕ ಸರಕಾರದ ಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್ ಪ್ರಶಸ್ತಿ ಪ್ರಧಾನ ಮಾಡಿದರು.ಇವರು ಶಿರೂರು ಗ್ರಾಮದ ಗೋಳಿಗುಂಡಿ ನಿವಾಸಿ ರಾಮಚಂದ್ರ ಬಿ.ಶಿರೂರಕರ್ ಹಾಗೂ ಚಂಪಾ ದಂಪತಿಗಳ ಸುಪುತ್ರಿಯಾಗಿದ್ದಾರೆ.
ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ವೈದ್ಯಕೀಯ ಶಿಕ್ಷಣ ಸಚಿವರು,ಕಾಲೇಜಿನ ಹಾಗೂ ವಿವಿಧ ಇಲಾಖೆಗಳ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು.