ಬೈಂದೂರು: ಕರಾವಳಿ ಕಾವಲು ಪಡೆ ಗಂಗೊಳ್ಳಿ,ಸರಕಾರಿ ಪದವಿ ಪೂರ್ವ ಕಾಲೇಜು ಬೈಂದೂರು ,ದುರ್ಗಾ ಪ್ರೆಂಡ್ಸ್ ಉಪ್ಪುಂದ,ಜೆಸಿಐ ಬೈಂದೂರು ಸಿಟಿ, ಪಡುವಣ ಫ್ರೆಂಡ್ಸ್ ಪಡುವರಿ,ಸ್ಥಳೀಯ ಮೀನುಗಾರರ ಸಂಘ ಹಾಗೂ ಕರಾವಳಿ ಕಾವಲು ಪೊಲೀಸ್ ಪಡೆಯ ಪೊಲೀಸ್ ಅಧೀಕ್ಷಕ ಅಬ್ದುಲ್ ಅಹ್ಮದ್ ರವರ ಮಾರ್ಗದರ್ಶನದಲ್ಲಿ ಪಡುವರಿ ಗ್ರಾ.ಪಂ ವ್ಯಾಪ್ತಿಯ ಸೋಮೇಶ್ವರ ಬೀಚ್‌ನಲ್ಲಿ ಹೊಸ ವರ್ಷಕ್ಕೆ ನಮ್ಮ ನಡೆ ಪ್ಲಾಸ್ಟಿಕ್ ಮುಕ್ತ ಬೀಚ್ ಕಡೆ ಅಭಿಯಾನದ ಸ್ವಚ್ಚತಾ ಕಾರ್ಯಕ್ರಮ ನಡೆಯಿತು.
ಗಂಗೊಳ್ಳಿ ಕರಾವಳಿ ಕಾವಲು ಪೊಲೀಸ್ ಠಾಣೆಯ ಠಾಣಾಧಿಕಾರಿ ನಂಜಪ್ಪ ಸ್ಚಚ್ಚತಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ ಸ್ವಚ್ಚತೆ ಪ್ರತಿಯೊಬ್ಬರ ಜವಬ್ದಾರಿಯಾಗಿದೆ.ಮಾನವನ ಚಟುವಟಿಕೆಗಳಿಂದಾಗಿ ಬೀಚ್ ಮಲಿನಗೊಳ್ಳುತ್ತಿದೆ.ನಮ್ಮಿಂದಾಗಿ ಹಾನಿಗೊಳ್ಳುವ ಸಮುದ್ರವನ್ನು ಪ್ರಕೃತಿ,ಸಮುದ್ರ ಮತ್ತು ಪ್ರಾಣಿ ಪಕ್ಷಿಗಳು ಶುಚಿಯಾಗಿರಿಸಿಕೊಳ್ಳುವಷ್ಟು ಶಕ್ತವಾಗಿದೆ.ಆದಷ್ಟು ಪ್ಲಾಸ್ಟಿಕ್‌ಗಳಿಗೆ ಕಡಿವಾಣ ಹಾಕುವ ಮೂಲಕ ಪರಿಸರವನ್ನು ಸ್ವಚ್ಚ ಮತ್ತು ಸುಂದರವಾಗಿರಿಸಿಕೊಳ್ಳಲು ಸಾಧ್ಯವಿದೆ.ಸಾಮಾಜಿಕ ಪ್ರಜ್ಞೆಯೊಂದಿಗೆ ಸಮಾಜ ಮತ್ತು ನಿಸರ್ಗದೊಂದಿಗೆ ಬದುಕೋಣ ಎಂದರು.
ಈ ಸಂದರ್ಭದಲ್ಲಿ ಪೊಲೀಸ್ ಉಪನಿರೀಕ್ಷಕ ವಿಜಯ್ ಅಮೀನ್,ಸ್ಥಳೀಯರಾದ ನಾಗರಾಜ ಖಾರ್ವಿ,ಶಂಕರ ಖಾರ್ವಿ,ಬೈಂದೂರು ಸಿಟಿ ಜೆಸಿಐ ಸ್ಥಾಪಕಾಧ್ಯಕ್ಷ ಮಣಿಕಂಠ ದೇವಾಡಿಗ,ಬೈಂದೂರು ಸಿಟಿ ಜೆಸಿಐ ನೂತನ ಅಧ್ಯಕ್ಷ ನರೇಂದ್ರ ಶೇಟ್,ರಾಜಾ ಪಡುವರಿ,ಕರಾವಳಿ ಕಾವಲು ಪಡೆಯ ಸಿಬಂದಿಗಳು ಹಾಗೂ ವಿವಿಧ ಸಂಘ ಸಂಸ್ಥೆಯ ಸದಸ್ಯರು ಹಾಜರಿದ್ದರು.
ಕರಾವಳಿ ಕಾವಲು ಪಡೆಯ ಸಿಬಂದಿ ಸುರೇಂದ್ರ ಡಿ.ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.ಯುವರಾಜ್ ಕೆ.ಪಿ ವಂದಿಸಿದರು.
News/Giri shiruru