ಬೈಂದೂರು; ಬೈಂದೂರು ವಲಯದ ಸ್ವಾವಲಂಬಿ ಭಾರತ ಉಡುಪಿ ಜಿಲ್ಲೆ ಬೈಂದೂರು ವಲಯ ಇದರ ಸ್ವಾವಲಂಬಿ ಗ್ರಾಮ ನಿರ್ಮಾಣಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರಕಾರದ ಯೋಜನೆಗಳನ್ನು ಮನೆ ಮನೆಗಳಿಗೆ ತಲುಪಿಸುವ ಅಭಿಯಾನದ ಅಂಗವಾಗಿ ಸ್ವಾವಲಂಬಿ ಭಾರತ ಅಭಿಯಾನ ಕಾರ್ಯಕ್ರಮಕ್ಕೆ ಅಣ್ಣಪ್ಪಯ್ಯ ಸಭಾಭವನ ತ್ರಾಸಿಯಲ್ಲಿ ಚಾಲನೆ ನೀಡಲಾಯಿತು.
ಶಿವಮೊಗ್ಗ ಲೋಕಸಭಾ ಸಂಸದ ಬಿ.ವೈ ರಾಘವೇಂದ್ರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಸ್ವಾವಲಂಬಿ ದೇಶದ ನಿರ್ಮಾಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿಜೀ ಹಾಗೂ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತ್ರತ್ವದ ಸರಕಾರ ಹತ್ತಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.ಅದನ್ನು ಪ್ರತಿ ಮನೆ ಮನೆಗೂ ತಲುಪಿಸುವ ಕಾರ್ಯ ಸ್ವಾವಲಂಬಿ ಭಾರತ ಅಭಿಯಾನದಿಂದಾಗಬೇಕಿದೆ.ಬೈಂದೂರಿನ 1.15 ಲಕ್ಷ ರೈತರಿಗೆ ಕೃಷಿ ಸಮ್ಮಾನ್ 12ನೇ ಕಂತು ಪಾವತಿಯಾಗದೆ.ಯುವಜನತೆಯಲ್ಲಿ ಸ್ವ-ಉದ್ಯೋಗ ಮಾಡುವ ಮಾನಸಿಕತೆಯನ್ನು ಬೆಳೆಸುವಂತ ಶಿಕ್ಷಣ ರೂಪಿಸಬೇಕು ಹಾಗೂ ವಿವಿಧತೆಯಲ್ಲಿ ಏಕತೆ ಹೊಂದಿರುವ ದೇಶ ಎಂದರೆ ಅದು ನಮ್ಮ ಬಾರತ ಎಂದರು.
ಬೈಂದೂರು ಶಾಸಕ ಬಿ.ಎಮ್.ಸುಕುಮಾರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಸ್ವಾವಲಂಬಿ ಭಾರತ್ ಸಂಯೋಜಕ್ ವಿಜಯ ಕೊಡವೂರು ಉಪಸ್ಥಿತರಿದ್ದರು.ಸ್ವಾವಲಂಬಿ ಭಾರತ ಅಭಿಯಾನದ ಉಡುಪಿ ಜಿಲ್ಲಾ ಸಹ ಸಂಯೋಜಕ್ ಪ್ರಸನ್ನ ಕುಮಾರ್ ಉಪ್ಪುಂದ ಪ್ರಾಸ್ತಾವಿಕ ಮಾತುಗಳನ್ನಾಡಿದರು.ತುಳಸಿದಾಸ್ ಮೊಗೇರ್ ಶಿರೂರು ಕಾರ್ಯಕ್ರಮ ನಿರೂಪಿಸಿದರು.ಬಿ.ಕೆ ರಾಘವೇಂದ್ರ ವಂದಿಸಿದರು.