ಶಿರೂರು: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೇಲ್ಪಂಕ್ತಿ (ಪೇಟೆ) ಶಿರೂರು ಇದರ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಶಾಲಾ ಸಭಾಭವನದಲ್ಲಿ ನಡೆಯಿತು.
ಶಿರೂರು ಗ್ರಾ.ಪಂ ಉಪಾಧ್ಯಕ್ಷ ರವೀಂದ್ರ ಶೆಟ್ಟಿ ಪಟೇಲ್ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಜಿ.ಪಂ ಮಾಜಿ ಸದಸ್ಯ ಸುರೇಶ್ ಬಟ್ವಾಡಿ ಮಾತನಾಡಿ ಶಿಕ್ಷಕರು ಹಾಗೂ ಪಾಲಕರ ಜೊತೆಗೆ ಶಾಲಾಭಿವೃದ್ದಿ ಸಮಿತಿ ಸಹಕಾರ ಮತ್ತು ಕಾಳಜಿಗಳಿದ್ದಾಗ ಕನ್ನಡ ಶಾಲೆಯನ್ನು ಕೂಡ ಉತ್ತಮವಾಗಿ ಬೆಳೆಸಲು ಸಾಧ್ಯ.ಶಾಲೆಯ ಮೇಲಿನ ಅಭಿಮಾನದಿಂದ ಸ್ವಂತ ಹಣದಿಂದ ರಂಗಮಂದಿರ ನಿರ್ಮಿಸಿಕೊಟ್ಟಿರುವ ನಿವೃತ್ತ ಮುಖ್ಯ ಶಿಕ್ಷಕಿ ಜಯಂತಿ ಟೀಚರ್ ಇವರ ಸೇವೆ ಇತರರಿಗೆ ಮಾದರಿಯಾಗಿದೆ ಎಂದರು.
ವೇದಿಕೆಯಲ್ಲಿ ತಾ.ಪಂ ಮಾಜಿ ಸದಸ್ಯ ಪುಷ್ಪರಾಜ್ ಶೆಟ್ಟಿ,ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್ ಎಂ.ಜಿ,ಬೈಂದೂರು ವಲಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶೇಖರ ಪೂಜಾರಿ,ನಿವೃತ್ತ ಮುಖ್ಯ ಶಿಕ್ಷಕಿ ಜಯಂತಿ,ಆಕ್ರಮ-ಸಕ್ರಮ ಸಮಿತಿ ಸದಸ್ಯ ದಿನೇಶ್ ಕುಮಾರ್,ಪತ್ರಕರ್ತ ಅರುಣ್ ಕುಮಾರ್ ಶಿರೂರು,ಎಸ್.ಡಿ.ಎಮ್.ಸಿ ಸಮನ್ವಯ ವೇದಿಕೆ ಜಿಲ್ಲಾಧ್ಯಕ್ಷ ಅಬ್ದುಲ್ ಸಲಾಂ ಚಿತ್ತೂರು,ಹರೀಶ್ ಶೇಟ್,ಶಿರೂರು ಹಿರಿಯ ನಾಗರೀಕ ವೇದಿಕೆ ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ,ಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷೆ ಜ್ಯೋತಿ ಜಯರಾಮ ಶೆಟ್ಟಿ,ವಿದ್ಯಾರ್ಥಿ ನಾಯಕ ಇಬಾದ್,ನಾಯಕಿ ಅಂಕಿತಾ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಈ ಶಾಲೆಯ ಹಳೆ ವಿದ್ಯಾರ್ಥಿಗಳನ್ನು ಸಮ್ಮಾನಿಸಲಾಯಿತು.
ಉದ್ಯಮಿ ಹಾಗೂ ಶಾಲೆಯ ಹಳೆ ವಿದ್ಯಾರ್ಥಿ ಎಸ್.ಪ್ರಸಾದ ಪ್ರಭು ಸ್ವಸ್ತಿವಾಚನಗೈದರು.ಶಾಲಾ ಮುಖ್ಯ ಶಿಕ್ಷಕಿ ಸರಸ್ವತಿ ಎನ್.ಶಾಲಾ ವಾರ್ಷಿಕ ವರದಿ ಮಂಡಿಸಿದರು.ಶಿಕ್ಷಕಿ ಯಶೋಧಾ ಶೆಟ್ಟಿ ಸ್ವಾಗತಿಸಿದರು.ಸಿ.ಎನ್.ಬಿಲ್ಲವ ಕಾರ್ಯಕ್ರಮ ನಿರ್ವಹಿಸಿದರು.ವಿದ್ಯಾ ವಂದಿಸಿದರು.
News/Giri shiruru
pic/Deepak shiruru