ಶಿರೂರು: ಸ್ವಚ್ಚ ಶಿರೂರು ಸುಂದರ ಶಿರೂರು,ಜೆಸಿಐ ರೂರಲ್ ಶಿರೂರು ಹಾಗೂ ಕ್ಲೀನ್ ಕಿನಾರ ತಂಡ ಬೈಂದೂರು ಇದರ ಪರಿಕಲ್ಪನೆಯಡಿ ಕ್ಲೀನ್ ಕಿನಾರ ತಂಡದ 158ನೇ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ ಹಾಗೂ ಗಿಡ ನೆಡುವ ಕಾರ್ಯಕ್ರಮ ಕಳಿಹಿತ್ಲು ಕಡಲತಡಿಯಲ್ಲಿ ನಡೆಯಿತು.
ಉದ್ಯಮಿ ಪ್ರಸಾದ್ ಪ್ರಭು, ಜೆಸಿಐ ರೂರಲ್ ಶಿರೂರು ಅಧ್ಯಕ್ಷ ವಿನೋದ ಮೇಸ್ತ, ಕಾರ್ಯದರ್ಶಿ ಪವನ್ ಪೂಜಾರಿ,ಶಿಕ್ಷಕ ಗಿರೀಶ್ ಪಿ.ಮೇಸ್ತ,ಜೆಸಿಐ ಪೂರ್ವಾಧ್ಯಕ್ಷ ನಾಗೇಶ ನಾಯ್ಕ,ಲಕ್ಷ್ಮಿನಾಯ್ಕ,ಕ್ಲೀನ್ ಕಿನಾರ ತಂಡದ ಸದಸ್ಯರಾದ ರಾಘವೇಂದ್ರ ಸುರಭಿ, ನಿತೇಶ್ ಗುಜ್ಜಾಡಿ, ಪುರುಷೋತ್ತಮ್ ದಾಸ್, ಕವಿತಾ ರಾಘವೇಂದ್ರ, ಅಹಾನಾ, ರಾಣಿ ಸುರಭಿ, ಕ್ರಥಾನಿ,ಜೆಸಿಐ ಸದಸ್ಯರು ಹಾಗೂ ಕ್ಲೀನ್ ಕಿನಾರ ತಂಡದ ಸದಸ್ಯರು ಹಾಜರಿದ್ದರು..
