ಬೈಂದೂರು: ಬೈಂದೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಇದರ ವತಿಯಿಂದ ಇತ್ತೀಚೆಗೆ ನಿಧನರಾದ ಹಿರಿಯ ಪತ್ರಕರ್ತರಾದ ಎಸ್.ಜನಾರ್ಧನ ಮರವಂತೆ ಯವರ ನುಡಿನಮನ ಕಾರ್ಯಕ್ರಮ ಬೈಂದೂರು ಪ್ರವಾಸಿ ಮಂದಿರದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ನಿಧನರಾದ ಎಸ್.ಜನಾರ್ಧನ ಮರವಂತೆ ಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.
ಬೈಂದೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಉದಯ ಪಡಿಯಾರ್,ಉಪಾಧ್ಯಕ್ಷ ನರಸಿಂಹ ನಾಯಕ್,ಕಾರ್ಯದರ್ಶಿ ರಾಮ ಬಿಜೂರು,ಪದಾಧಿಕಾರಿಗಳಾದ ಅರುಣ್ ಕುಮಾರ್ ಶಿರೂರು,ಸುನೀಲ್ ಎಚ್.ಜಿ,ಕೃಷ್ಣ ಬಿಜೂರು,ಗಿರೀಶ್ ಶಿರೂರು,ವಿಶ್ವನಾಥ ಆಚಾರ್ಯ,ಜೆ.ಪಿ ಬಡಾಕೆರೆ, ಸುಶಾಂತ್ ಆಚಾರ್ಯ ಹಾಜರಿದ್ದರು.