ಶಿರೂರು : ಕೇವಲ ಶಿಕ್ಷಕರು,ವಿದ್ಯಾರ್ಥಿಗಳಿಂದ ಮಾತ್ರ ಸಂಸ್ಥೆಯ ಅಭಿವೃದ್ದಿ ಸಾಧ್ಯವಿಲ್ಲ.ಬದಲಾಗಿ ದಾನಿಗಳು,ಶಿಕ್ಷಣಾಭಿಮಾನಿಗಳು ಹಾಗೂ ಸ್ಥಳೀಯರ ಪ್ರೋತ್ಸಾಹ ಇದ್ದಾಗ ಮಾತ್ರ ಕನ್ನಡ ಮಾಧ್ಯಮ ಶಾಲೆ ಇನ್ನಷ್ಟು ಬೆಳವಣಿಗೆ ಸಾಧ್ಯ.ಶೈಕ್ಷಣಿಕ ವಾತಾವರಣದ ಜೊತೆಗೆ ಸಾಂಘಿಕ ಪ್ರಯತ್ನಗಳಿಂದ ಶಾಲೆಯ ಬೆಳವಣಿಗೆ ಸಾಧ್ಯ ಎಂದು ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್ ಎಂ.ಜಿ ಹೇಳಿದರು ಅವರು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಶಿರೂರು ಇದರ 2022ನೇ ಸಾಲಿನ ಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಈ ಮಾತುಗಳನ್ನಾಡಿದರು.

ಶಿರೂರು ಗ್ರಾ.ಪಂ ಉಪಾಧ್ಯಕ್ಷ ರವೀಂದ್ರ ಶೆಟ್ಟಿ ಪಟೇಲ್ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಗ್ರಾ.ಪಂ ಸದಸ್ಯರಾದ ಉದಯ ಪೂಜಾರಿ,ಉಷಾ ಗಾಣಿಗ,ಪ್ರೇಮಾ ಮೊಗೇರ್,ನಾಗರತ್ನ ಆಚಾರ್ಯ,ಪ್ರಭಾವತಿ,ಪದ್ಮಾವತಿ,ಬೈಂದೂರು ವಲಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶೇಖರ ಪೂಜಾರಿ,ಉದ್ಯಮಿ ಪ್ರಕಾಶ ಪ್ರಭು,ನಾಯ್ಕನಕಟ್ಟೆ ಶಾಲಾ ಮುಖ್ಯ ಶಿಕ್ಷಕ ಮಹಾದೇವ ಬಿಲ್ಲವ,ಆಲಂದೂರು ಶಾಲೆಯ ಮುಖ್ಯ ಶಿಕ್ಷಕ ಮಾಧವ ಬಿಲ್ಲವ,ಶಾಲಾ ಎಸ್.ಡಿ.ಸಿ ಅಧ್ಯಕ್ಷ ಸತೀಶ ಶೆಟ್ಟಿ,ಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷ ರಘುವೀರ ಶೇಟ್,ವಿದ್ಯಾರ್ಥಿ ನಾಯಕ ಪ್ರಣಮ್,ನಾಯಕಿ ದಿವ್ಯಾಶ್ರೀ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಸಮ್ಮಾನಿಸಲಾಯಿತು ಹಾಗೂ ಶಾಲಾ ವಾರ್ಷಿಕ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು.

ಡಿ.ಡಿ.ಎಲ್.ಆರ್ ಉಡುಪಿ ರವೀಂದ್ರ ಪೂಜಾರಿ ಸ್ವಸ್ತಿವಾಚನಗೈದರು.ಶಾಲಾ ಮುಖ್ಯ ಶಿಕ್ಷಕ ಶಂಕರ ಶಿರೂರು ಶಾಲಾ ವಾರ್ಷಿಕ ವರದಿ ವಾಚಿಸಿದರು.ಶಿಕ್ಷಕ ಸಿ.ಎನ್.ಬಿಲ್ಲವ ಸ್ವಾಗತಿಸಿದರು.ಶಿಕ್ಷಕಿ ಗೀತಾ ಶಿರೂರು ಕಾರ್ಯಕ್ರಮ ನಿರ್ವಹಿಸಿದರು.ಸೋಮರಾಯ ಜನ್ನು ವಂದಿಸಿದರು.

ಸಭಾ ಕಾರ್ಯಕ್ರಮದ ಬಳಿಕ ಶಾಲಾ ವಿದ್ಯಾರ್ಥಿಗಳಿಂದ ನೃತ್ಯ ವೈವಿದ್ಯ ಹಾಗೂ ಶ್ರೀಕೃಷ್ಣ ದೇವರಾಯ ನಾಟಕ ಪ್ರದರ್ಶನಗೊಂಡಿತು.

News/Giri shiruru

pic/Deepak shiruru

 

 

Leave a Reply

Your email address will not be published. Required fields are marked *

thirteen + 1 =