ಶಿರೂರು; ಜೆಸಿಐ ಶಿರೂರು ಇದರ ವತಿಯಿಂದ ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಶಿರೂರು ಜೆಸಿಐ ಸಂಸ್ಥೆ ಶಿರೂರಿನ 15 ಶಾಲೆಗಳಿಗೆ ಹಾಗೂ ಕಾಲೇಜಿಗೆ ಬೇಟಿ ನೀಡಿ ಶಾಲಾ ಮುಖ್ಯೋಪಾಧ್ಯಾಯರಿಗೆ ಹಣ್ಣಿನ ಗಿಡಗಳನ್ನು ನೀಡುವುದರ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.
ಶಿರೂರು ಜೆಸಿಐ ಅಧ್ಯಕ್ಷ ವಿನೋದ್ ಮೇಸ್ತ,ಲೇಡಿ ಜೆಸಿ ಅಧ್ಯಕ್ಷೆ ಜ್ಯೋತಿ ಪೂಜಾರಿ,ಕಾರ್ಯದರ್ಶಿ ಪವನ್ ಪೂಜಾರಿ,ಜೆಸಿಐ ಸದಸ್ಯರು ಹಾಗೂ ಶಿಕ್ಷಕ ವೃಂದದವರು ಹಾಜರಿದ್ದರು.
