ಬೈಂದೂರು,ಮೇ,13; ದೇವಾಡಿಗರ ಸಂಘ (ರಿ.) ಉಪ್ಪುಂದ ಇದರ ನೂತನ ಪದಾಧಿಕಾರಿಗಳ ಪದಪ್ರದಾನ ಸಮಾರಂಭ ಉಪ್ಪುಂದ ಮಾತೃಶ್ರೀ ಸಭಾಭವನದಲ್ಲಿ ನಡೆಯಿತು.
ಸಂಘದ ಅಧ್ಯಕ್ಷ ರವೀಂದ್ರ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು. ನೂತನ ಅಧ್ಯಕ್ಷರಾಗಿ ಆಯ್ಕೆಯಾದ ರಾಮಚಂದ್ರ ದೇವಾಡಿಗರು ಅಧಿಕಾರ ಸ್ವೀಕರಿಸಿದರು.
ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಗೌರಿ ದೇವಾಡಿಗ, ಮಹಿಳಾ ಸಂಘದ ಅಧ್ಯಕ್ಷೆ ಸುಶೀಲಾ ಕಟ್ಟೆಮನೆ, ಕಾರ್ಯದರ್ಶಿ ಶ್ರೀಮತಿ ರಾಧ ದೇವಾಡಿಗ, ನೂತನ ಮಹಿಳಾ ಘಟಕ ಅಧ್ಯಕ್ಷೆ ಗಿರಿಜಾ ದೇವಾಡಿಗ, ಕಾರ್ಯದರ್ಶಿ ಸೀತು ಮಹಾಬಲೇಶ್ವರ ಉಪಸ್ಥಿತರಿದ್ದರು.
ಕಾರ್ಯದರ್ಶಿ ಸುಧಾಕರ ದೇವಾಡಿಗ ಸ್ವಾಗತಿಸಿದರು.ರಾಮಕೃಷ್ಣ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು.ಕಾರ್ಯದರ್ಶಿ ಮಂಜುನಾಥ ದೇವಾಡಿಗ ವಂದಿಸಿದರು.
