ಶಿರೂರು: ಕಳೆದ ಎರಡು ವರ್ಷಗಳಿಂದ ಶಿರೂರು ಕೆನರಾ ಬ್ಯಾಂಕ್ ಶಾಖೆಯಲ್ಲಿ ಶಾಖಾ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿ ಪ್ರಸ್ತುತ ಮಣಿಪಾಲ ಸರ್ಕಲ್ ಕೆನರಾ ಬ್ಯಾಂಕ್ ಶಾಖೆಗೆ ವರ್ಗಾವಣೆಗೊಂಡ ಯೋಗೀಶ್ ಜಿ.ಜಿ ಹಾಗೂ ಕಳೆದ ಎರಡು ವರ್ಷಗಳಿಂದ ಶಿರೂರು ಕೆನರಾ ಬ್ಯಾಂಕ್ ಶಾಖೆಯಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಆಗಿ ಸೇವೆ ಸಲ್ಲಿಸಿ ಪ್ರಸ್ತುತ ಕೆನರಾ ಬ್ಯಾಂಕ್ ಹೈದ್ರಾಬಾದ್ ಶಾಖೆಗೆ ವರ್ಗಾವಣೆಗೊಂಡ ರಾಜೇಂದ್ರ ಪಿ.ರೆಡ್ಡಿ ಇವರ ಬೀಳ್ಕೋಡುಗೆ ಸಮಾರಂಭ ಶಿರೂರು ಕೆನರಾ ಬ್ಯಾಂಕ್ ಶಾಖೆಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಶಾಖೆಯ ಸಿಬ್ಬಂದಿಗಳಾದ ಆಕಾಶ್,ದಕ್ಷನ್ ಎಮ್,ಸುನೀಲ್,ಭವಾನಿ,ಸೂರ್ಯ,ಸವಿತಾ,ಮತ್ಸೋಧ್ಯಮಿ ತಿಮ್ಮಪ್ಪ ಮೊಗೇರ್,ನಾರಾಯಣ ಅಳ್ವೆಗದ್ದೆ,ಉದ್ಯಮಿ ಪ್ರಸಾದ ಪ್ರಭು,ಲಕ್ಷ್ಮೀಶ್ ನಾಯ್ಕ,ಬ್ಯಾಂಕ್ ಆಫ್ ಬರೋಡಾ ಶಿರೂರು ಶಾಖೆಯ ಸಿಬ್ಬಂದಿ ಅರುಣ್ ಕುಮಾರ್ ಶೆಟ್ಟಿ,ನಾಗರಾಜ ಆಚಾರ್ಯ ಬಿಜೂರು,ವೀರೇಂದ್ರ ಶೆಟ್ಟಿ,ಅನಿಲ್ ಶ್ಯಾನುಭಾಗ್,ಅವಿನಾಶ್ ಪ್ರಭು ಹಾಜರಿದ್ದರು.
ಪತ್ರಕರ್ತ ಅರುಣ್ ಕುಮಾರ್ ಶಿರೂರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.ಶಾಖೆಯ ಸಿಬ್ಬಂದಿ ಸುನೀಲ್ ವಂದಿಸಿದರು.




