ಬೈಂದೂರು: ಮಾನ್ಯ ಸಂಸದರ ಹಾಗೂ ಶಾಸಕರ ವಿಶೇಷ ಪ್ರಯತ್ನದಿಂದ ಬೈಂದೂರಿಗೆ ದೊರೆತಿರುವ ಅಡಿಗರ ಹೆಸರಿನ ಪುರಭವನದ ಕುರಿತು ಗೊಂದಲಮಯ ಅಭಿಪ್ರಾಯ ಬರುತ್ತಿದ್ದು ರಾಜ್ಯ ಸರಕಾರದ ಬಹುನಿರೀಕ್ಷಿತ ಯೋಜನೆ ಕ್ಷೇತ್ರಕ್ಕೆ ದೊರೆತಿರುವುದು ಅಪಾರ ಹೆಮ್ಮೆ ಅನಿಸುತ್ತಿದೆ ಹಾಗೂ ಪುರಭವನ ಗಾಂಧಿ ಮೈದಾನದ ಒಂದು ಮೂಲೆಯಲ್ಲಿ ನಿರ್ಮಾಣವಾಗುತ್ತದೆ .ಇದರಿಂದ ಯಾವುದೇ ರೀತಿಯಲ್ಲಿ ಸಾರ್ವಜನಿಕರಿಗೆ,ಕ್ರೀಡಾಪಟುಗಳಿಗೆ ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ಯಾವುದೇ ರೀತಿ ತೊಂದರೆಯಾಗುವುದಿಲ್ಲ ಎಂದು ಬೈಂದೂರು ಬಿಜೆಪಿ ಮಂಡಲದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಹೇಳಿದರು ಅವರು ಬೈಂದೂರು ಬಿಜೆಪಿ ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ ಅಡಿಗರ ಪುರಭವನ ಹಲವು ಊಹಾಪೋಹಗಳು ಕೇಳಿಬರುತ್ತಿದೆ ಮತ್ತು ಈ ಮಹತ್ವಕಾಂಕ್ಷೆಯ ಯೋಜನೆಯಲ್ಲಿ ರಾಜಕೀಯ ಮನೋಭಾವನೆ ಸಲ್ಲದು.ಊರಿನ ಅಭಿವೃದ್ದಿ ವಿಚಾರವಾಗಿದೆ.ಈ ಕುರಿತು ಪ್ರತಿಭಟನೆ ನಡೆಸುವ ಮುಂದಾಳುಗಳ ಜೊತೆ ಮಾತನಾಡಿ ಇತ್ಯರ್ಥಗೊಳಿಸುತ್ತೇನೆ.ಮೊಗೇರಿ ಗೋಪಾಲಕೃಷ್ಣ ಅಡಿಗರ ಹೆಸರಿನ ಪುರಭವನ ಬೈಂದೂರು ಗಾಂಧಿ ಮೈದಾನದಲ್ಲೆ ನಿರ್ಮಾಣವಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಜಿ.ಪಂ ಮಾಜಿ ಸದಸ್ಯ ಸುರೇಶ್ ಬಟ್ವಾಡಿ,ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಿಯದರ್ಶಿನಿ ಬೆಸ್ಕೂರು ಹಾಜರಿದ್ದರು.

 

Leave a Reply

Your email address will not be published.

five − 3 =