ಬೈಂದೂರು: ಗಾಂಧಿ ಮೈದಾನ ಸಂರಕ್ಷಣಾ ಸಮಿತಿ ಬೈಂದೂರು ಇದರ ವತಿಯಿಂದ ಗಾಂಧಿ ಮೈದಾನ ಉಳಿಸಿ ಧರಣಿ ಹಾಗೂ ಪ್ರತಿಭಟನೆ ಬೈಂದೂರು ಗಾಂಧಿ ಮೈದಾನದ ಆವರಣದಲ್ಲಿ ನಡೆಯಿತು.ಬೈಂದೂರು ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಪ್ರತಿಭಟನಕಾರರನ್ನುದ್ದೇಶಿಸಿ ಮಾತನಾಡಿ ಕನ್ನಡದ ಶ್ರೇಷ್ಟ ಕವಿ ಮೊಗೇರಿ ಗೋಪಾಲಕೃಷ್ಣ ಅಡಿಗರು ಈ ನಾಡಿನ ಆಸ್ತಿ.ಅವರು ನಮ್ಮ ಬಂದೂರು ಕ್ಷೇತ್ರದ ಸಾಹಿತಿಯಾಗಿರುವುದು ನಮ್ಮೆಲ್ಲರಿಗೂ ಹೆಮ್ಮೆ ಅವರ ಹೆಸರಿನಲ್ಲಿ ಪುರಭವನ ನಿರ್ಮಾಣ ಬೈಂದೂರಿಗೆ ಅತ್ಯವಶ್ಯಕ.ಪ್ರಸ್ತುತ ಪರ-ವಿರೋಧದ ಮೂಲಕ ಅಡಿಗರ ಹೆಸರಿಗೆ ಕಳಂಕ ಬರುವ ಕಾರಣ ಜಿಲ್ಲಾಧಿಕಾರಿಗಳು ತಕ್ಷಣ ಹೋರಾಟಗಾರರು,ಸಂಘ ಸಂಸ್ಥೆಯ ಪ್ರತಿನಿಧಿಗಳು ಮತ್ತು ಸಂಬಂಧಪಟ್ಟ ಇಲಾಖೆಯೊಂದಿಗೆ ಚರ್ಚಿಸಿ ಸಮನ್ವಯತೆಯಿಂದ ಇತ್ಯರ್ಥಗೊಳಿಸಿ ಗೊಂದಲ ಬಗೆಹರಿಸಬೇಕು ಮತ್ತು ಜಿಲ್ಲಾಧಿಕಾರಿಗಳ ಜೊತೆಗೆ ಈ ಕುರಿತು ಮಾತನಾಡುತ್ತೇನೆ ಎಂದರು.
ಗಾಂಧಿ ಮೈದಾನ ಸಂರಕ್ಷಣಾ ಸಮಿತಿ ಮುಂದಾಳು ಗಿರೀಶ್ ಬೈಂದೂರು ಮಾತನಾಡಿ ಗಾಂಧಿ ಮೈದಾನ ಬೈಂದೂರಿನ ಪ್ರಮುಖ ಆಸ್ತಿ.ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಅತ್ಯವಶ್ಯಕವಾಗಿದೆ.ಬಲತ್ಕಾರದಿಂದ ಕಾಮಗಾರಿ ನಡೆಸುವುದು ಸರಿಯಲ್ಲ.ಈ ಕುರಿತು ನ್ಯಾಯ ಸಿಗುವ ವರೆಗೆ ನಮ್ಮ ಹೋರಾಟ ಮುಂದುವರಿಯಲಿದೆ ಎಂದರು
ಈ ಸಂದರ್ಭದಲ್ಲಿ ಗಾಂಧಿ ಮೈದಾನ ಸಂರಕ್ಷಣಾ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಬಿಜೂರು ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಯವರಿಗೆ ಮನವಿ ಪತ್ರ ನೀಡಿದರು.
ಪ್ರತಿಭಟನೆಯಲ್ಲಿ ಯಡ್ತರೆ ಗ್ರಾ.ಪಂ ಮಾಜಿ ಅಧ್ಯಕ್ಷ ನಾಗರಾಜ ಶೆಟ್ಟಿ,ಮಾಜಿ ಗ್ರಾ.ಪಂ ಸದಸ್ಯ ಗಣೇಶ ದೇವಾಡಿಗ,ನಾಗರಾಜ ಗಾಣಿಗ,ರಾಘವೇಂದ್ರ ಪಡುವರಿ,ರಾಮ ಉಪ್ಪುಂದ ಮೊದಲಾದವರು ಹಾಜರಿದ್ದರು.
News/pic: Girish shiruru