ಬೈಂದೂರು: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅತ್ಯಾಡಿ ಬೈಂದೂರು ವಲಯ ಇದರ ಶಾಲಾ ವಾರ್ಷಿಕೋತ್ಸವ ಸಮಾರಂಭ ಸ.ಹಿ.ಪ್ರಾ.ಶಾಲೆ ಅತ್ಯಾಡಿಯಲ್ಲಿ ನಡೆಯಿತು.
ಬೈಂದೂರು ಶಾಸಕ ಬಿ.ಎಮ್.ಸುಕುಮಾರ್ ಶೆಟ್ಟಿ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿ ಬೈಂದೂರು ಕ್ಷೇತ್ರದ ಅತ್ಯುತ್ತಮ ಸರಕಾರಿ ಶಾಲೆಗಳಲ್ಲಿ ಅತ್ಯಾಡಿ ಶಾಲೆ ಕೂಡ ಸಾಧನೆ ಮೂಲಕ ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವ ಮಟ್ಟದಲ್ಲಿ ಬೆಳೆದಿದೆ.ಇಲ್ಲಿನ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಆಸಕ್ತಿ ಪ್ರಯತ್ನದಿಂದ ಕುಗ್ರಾಮದ ವಿದ್ಯಾರ್ಥಿಗಳು ರಾಷ್ಟ್ರಮಟ್ಟದಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸುವಂತಾಗಿದೆ.ಸ್ಥಳೀಯರ ಸಹಕಾರ ಇದ್ದಾಗ ಶಾಲೆಯ ಸರ್ವತೋಮುಖ ಅಭಿವೃದ್ದಿ ಸಾಧ್ಯ ಎಂದರು.
ದಾನಿಗಳಾದ ಬಿ .ಜಿ ಥೋಮಸ್,ಸುನಿತಾ ರೋಶನ್ ನೀಡಿದ ಕ್ರೀಡಾ ಸಮವಸ್ತ್ರವನ್ನು ಬಿಡುಗಡೆಗೊಳಿಸಲಾಯಿತು.ಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷ ಅಶೋಕ್ ಸಿ.ಎಂ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್ ಎಂ.ಜಿ,ಅತ್ಯಾಡಿ ಚರ್ಚಿನ ಧರ್ಮಗುರು ಸನ್ನಿ ಠಿ. ಜೋನ್ ,ಸಿ ಎಮ್ ಜಾರ್ಜ್,ಬೈಂದೂರು ಬಿಜೆಪಿ ಮಂಡಲದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ.ಬೈಂದೂರು ವಲಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶೇಖರ್ ಪೂಜಾರಿ,ಜಿ.ಪಂ ಮಾಜಿ ಸದಸ್ಯ ಸುರೇಶ್ ಬಟವಾಡಿ,ತಾ.ಪಂ ಮಾಜಿ ಸದಸ್ಯ ಪುಷ್ಪರಾಜ್ ಶೆಟ್ಟಿ.ಶಿಕ್ಷಣ ಸಂಯೋಜಕ ಚಂದ್ರ ದೇವಾಡಿಗ,ಪತ್ರಕರ್ತ ಅರುಣ್ ಕುಮಾರ್ ಶಿರೂರು,ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಮಂಜುನಾಥ ನಾಯಕ್,ಶಾಲಾ ಎಸ್.ಡಿ.ಸಿ ಅಧ್ಯಕ್ಷ ಮಾದೇವ ಪೂಜಾರಿ ಕಿಸ್ಮತ್ತಿ,ಎಸ್.ಡಿ.ಎಮ್.ಸಿ ಉಪಾಧ್ಯಕ್ಷೆ ಕಲ್ಪನಾ ಸುರೇಶ್ ಪೂಜಾರಿ.ಖಜಾಂಚಿ. ಸಜಿ ಪಿಜೆ,ವಿದ್ಯಾರ್ಥಿ ನಾಯಕ ನಿಖಿಲ್,ಅಲ್ವಿನ ಸಿ ಅಶೋಕ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಇನ್‌ಸ್ಪೈರ್ಡ್ ಅವಾರ್ಡ್ ನಲ್ಲಿ ರಾಷ್ಟ್ರಮಟ್ಟವನ್ನು ಪ್ರತಿನಿಽಸಿದ ಪ್ರಜ್ವಲ್ ಎಂ.ರವರನ್ನು ಗೌರವಿಸಲಾಯಿತು,ಶಿಕ್ಷಕ ರಾಜೇಶ್ ರವರನ್ನು ಗುರುತಿಸಲಾಯಿತು ಹಾಗೂ ಶಾಲಾ ಎಸ್,ಡಿ.ಎಮ್.ಸಿ ಅಧ್ಯಕ್ಷರಾದ ಅಶೋಕ್,ಪಾಲಕ ಪ್ರತಿನಿಽ ಹೆರಿಯ ಪೂಜಾರಿಯನ್ನು ಸಮ್ಮಾನಿಸಲಾಯಿತು.
ಮುರಾರ್ಜಿ ವಸತಿ ಪ್ರೌಢಶಾಲೆಯ ಶಿಕ್ಷಕಿ ನಳಿನಿ ಸ್ವಸ್ತಿವಾಚನಗೈದರು.ಶಿಕ್ಷಕಿ ಮಂಗಳ ಗೌರಿ ಶೆಟ್ಟಿ ವರದಿ ವಾಚಿಸಿದರು.ಶಾಲಾ ಮುಖ್ಯ ಶಿಕ್ಷಕ ಡಿ.ಆರ್ ಹಾಲೇಶ್ ಸ್ವಾಗತಿಸಿದರು.ಹಿರಿಯ ಶಿಕ್ಷಕ ಸಿ.ಜೆ ಸಾಜು ಹಾಗೂ ರಾಜೇಶ್ ಕಾರ್ಯಕ್ರಮ ನಿರ್ವಹಿಸಿದರು.ಮೇರಿ ಥೋಮಸ್ ವಂದಿಸಿದರು.ಬಳಿಕ ಶಾಲೆಯ ವಿದ್ಯಾರ್ಥಿಗಳಿಂದ ಸಾಂಸ್ಕ್ರತಿಕ ಕಾರ್ಯಕ್ರಮ ನಡೆಯಿತು.
News/Girish shiruru
pic/shabari studio yadthare