ಶಿರೂರು: ಶ್ರೀ ಮಹಾಗಣಪತಿ ದೇವಸ್ಥಾನ ಅಳ್ವೆಗದ್ದೆ ಶಿರೂರು ಇದರ ವತಿಯಿಂದ ಎಪ್ರಿಲ್ 11 ರಿಂದ ಎಪ್ರಿಲ್ 14 ರ ವರೆಗೆ ನಡೆಯುವ ಶ್ರೀ ಮಹಾಗಣಪತಿ ದೇವಸ್ಥಾನ ಅಳ್ವೆಗದ್ದೆ ಶಿರೂರು ಇದರ ಪುನರ್ ಪ್ರತಿಷ್ಠೆ, ಹಾಗೂ ಬ್ರಹ್ಮಕಲಶೋತ್ಸವದ ಪ್ರಯುಕ್ತ ವೈಭವದ ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆ ಗುರುವಾರ ನಡೆಯಿತು.ಮದ್ಯಾಹ್ನ ಶಿರೂರು ಕೆಳಪೇಟೆಯಿಂದ ಹೊರೆಕಾಣಿಕೆ ಹೊರಟು ಶಿರೂರು ಮಾರ್ಕೆಟ್ ರಸ್ತೆಯಿಂದ ಚೆಂಡೆ ವಾದನದ ಮೂಲಕ ಭವ್ಯ ಮೆರವಣಿಗೆಯೊಂದಿಗೆ ಹಸಿರುವಾಣಿ ಹೊರೆಕಾಣಿಕೆ ದೇವಸ್ಥಾನಕ್ಕೆ ಸಮರ್ಪಣೆ ಮಾಡಲಾಯಿತು.

ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಅಧ್ಯಕ್ಷರು ಹಾಗೂ ಅಳ್ವೆಗದ್ದೆ ಶ್ರೀ ಮಹಾಗಣಪತಿ ದೇವಸ್ಥಾನದ ಜೀರ್ಣೋದ್ದಾರ ಸಮಿತಿ ಗೌರವಾಧ್ಯಕ್ಷ ನಾಡೋಜ ಡಾ.ಜಿ.ಶಂಕರ್ ಹಸಿರುವಾಣಿ ಹೊರೆಕಾಣಿಕೆಗೆ ಚಾಲನೆ ನೀಡಿದರು.

ಈ  ಸಂದರ್ಭದಲ್ಲಿ ರಾಮ ಎನ್.ಅಳ್ವೆಗದ್ದೆ ಅಧ್ಯಕ್ಷರು ಜೀರ್ಣೋದ್ದಾರ ಸಮಿತಿ ಶ್ರೀ ಮಹಾಗಣಪತಿ ದೇವಸ್ಥಾನ ಅಳ್ವೆಗದ್ದೆ,ಗಣಪತಿ ಎಸ್.ಮೊಗವೀರ ಅಧ್ಯಕ್ಷರು ಶ್ರೀ ಮಹಾಗಣಪತಿ ದೇವಸ್ಥಾನ ಅಳ್ವೆಗದ್ದೆ,ಶ್ರೀಪಾದ ಕುಮಾರ್ ಅಧ್ಯಕ್ಷರು ಶ್ರೀ ಬೊಬ್ಬರ್ಯ ದೈವಸ್ಥಾನ ಅಳ್ವೆಗದ್ದೆ, ದೇವಸ್ಥಾನದ ಗೌರವಾಧ್ಯಕ್ಷ ನಾರಾಯಣ ಟಿ.ಅಳ್ವೆಗದ್ದೆ ,ಉದ್ಯಮಿ ರಾಮಕೆ.ದೊಡ್ಮನೆ,ಉದಯ ಕುಮಾರ್ ಹಟ್ಟಿಯಂಗಡಿ ಅಧ್ಯಕ್ಷರು ಬಗ್ವಾಡಿ ಮೊಗವೀರ ಮಹಾಜನ ಸಂಘ,ಜಯಾ ಕೋಟ್ಯಾನ್,ಉದ್ಯಮಿ ಪ್ರಶಾಂತ ಮೊಗೇರ್,ಸಮಿತಿಯ ಸರ್ವ ಸದಸ್ಯರು,ಜೀರ್ಣೋದ್ದಾರ ಸಮಿತಿ ಸದಸ್ಯರು,ಮಹಿಳಾ ಮಂಡಳಿಯ ಸದಸ್ಯರು,ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು,ಸದಸ್ಯರು ಹಾಗೂ ಊರಿನ ಸಮಸ್ತ ಭಕ್ತಾಧಿಗಳು ಹಾಜರಿದ್ದರು.

ವರದಿ/ಚಿತ್ರ; ಗಿರಿ ಶಿರೂರು

Leave a Reply

Your email address will not be published. Required fields are marked *

five + 6 =