ಬೈಂದೂರು: ಶ್ರೀ ದುಗಾ೯ಂಬಿಕಾ ದೇವಸ್ಥಾನ ಕೋಟೆಮನೆ ಶಿರೂರು ಇದರ ಶ್ರೀ ಮಹಾಕಾಳಿ ಹಾಗೂ ಶ್ರೀ ದುಗಾ೯ಂಬಿಕಾ ದೇವಸ್ಥಾನದ ಜೀರ್ಣೋದ್ದಾರದ ಅಂಗವಾಗಿ ಬಾಲಾಲಯ ಪ್ರತಿಷ್ಠೆ ಕಾರ್ಯಕ್ರಮ ಬುಧವಾರ ನಡೆಯಿತು.ಬೆಳಿಗ್ಗೆ ಗ್ರಾಮ ಪುರೋಹಿತರಾದ ಸುರೇಶ ಅವಭೃತ ಇವರ ನೇತ್ರತ್ವದಲ್ಲಿ ಜೀವ ಕಲಶಾಭಿಷೇಕ,ಮಹಾಪೂಜೆ,ಮಹಾಮಂಗಳಾರತಿ, ತೀರ್ಥಪ್ರಸಾದ ವಿತರಣೆ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ದೇವಸ್ಥಾನದ ಅಧ್ಯಕ್ಷ ನಾರಾಯಣ ವಿ.ಮೇಸ್ತ,ಉಪಾಧ್ಯಕ್ಷ ಶಂಕರ ಎಸ್.ಮೇಸ್ತ,ಕಾರ್ಯದರ್ಶಿ ಚಂದ್ರಶೇಖರ ಮೇಸ್ತ,ಜೊತೆ ಕಾರ್ಯದರ್ಶಿ ಶಂಕರ ಕೆ.ಮೇಸ್ತ,ಖಜಾಂಚಿ ರಮೇಶ ಬಿ.ಮೇಸ್ತ,ಸದಸ್ಯರಾದ ಪಾಲಾಕ್ಷ ಮೇಸ್ತ,ನಾಗೇಶ ಎಮ್.ಮೇಸ್ತ,ಚಂದ್ರಹಾಸ ಎಸ್.ಮೇಸ್ತ,ಗೋವಿಂದ ಡಿ.ಮೇಸ್ತ,ಶಂಕರ ಜಿ.ಮೇಸ್ತ,ರಮೇಶ ಪಿ.ಮೇಸ್ತ,ನಾಗರಾಜ ವಿ.ಮೇಸ್ತ,ಕೃಷ್ಣ ಎನ್.ಮೇಸ್ತ,ಅನುವಂಶಿಕ ಅರ್ಚಕರಾದ ರಾಮಚಂದ್ರ ಮೇಸ್ತ,ಪಾಂಡುರಂಗ ಮೇಸ್ತ ಹಾಗೂ ಊರಿನ ಭಕ್ತಾಧಿಗಳು ಹಾಜರಿದ್ದರು.

Leave a Reply

Your email address will not be published. Required fields are marked *

sixteen − 8 =