ಬೈಂದೂರು,ಮಾ.24: ಶ್ರೀ ಹೊನ್ನ ಮಹಾಸತಿ ಮತ್ತು ಸಪರಿವಾರ ದೈವಸ್ಥಾನ ಸಾಂತೋಡಿ ಶಿರೂರು ಇದರ ಪುನರ್ ಪ್ರತಿಷ್ಠಾ ಮಹೋತ್ಸವ ಕಾರ್ಯಕ್ರಮ ಎ.5 ರಿಂದ 8 ರ ವರೆಗೆ ಸಾಂತೋಡಿಯಲ್ಲಿ ನಡೆಯಲಿದೆ.
ಕಾಯ೯ಕ್ರಮಗಳ ವಿವರ
ಎ. 5 ರಂದು ಬೆಳಿಗ್ಗೆ ಪುಣ್ಯಾಹವಾಚನ, ದೇವತಾ ಪ್ರಾರ್ಥನೆ, ಕಂಕಣ ಬಂಧನ, ಧ್ವಜಾರೋಹಣ ಗಂಟೆ 10.44ಕ್ಕೆ ತೋರಣ ಮುಹರ‍್ತ, ಅಖಂಡ ದೀಪ ಸ್ಥಾಪನೆ, ಮಂಗಳ ಕಲಶ ಸ್ಥಾಪನೆ, ಕ್ಷೇತ್ರಶುದ್ಧಿ ಸಂಜೆ ಗಂಟೆ 6 ರಿಂದ ವಾಸ್ತು ರಾಕ್ಷೇಪ್ನ ಹವನ, ದಿಕ್ಷಾಲಕ ಹವನ, ಪೀಠ ಶುದ್ಧಿ ಹವನ, ಜಂಬ ಶುದ್ಧಿ ಹವನ, ದಿಕ್ಷಾಲಕರ ಸ್ಥಾಪನೆ, ಶ್ರೀ ಬಲಿ ನಡೆಯಲಿದೆ.
ಎ.6 ರಂದು ಬೆಳಿಗ್ಗೆ ನಿತ್ಯವಿಧಿ ಸಹಿತ ಪೀಠಯಂತ್ರಾರಾಧನೆ.ಮಿಥುನ ಲಗ್ನದಲ್ಲಿ ಶ್ರೀ ಹೊನ್ನಮಹಾಸತಿ ಮತ್ತು ಸಪಲವಾರ ದೈವಗಳ ಪ್ರತಿಷ್ಠೆ ಸಂಜೆ ಗಂಟೆ 7 ರಿಂದ ಚಂಡಿಕಾಯಾಗ, ನವಚಂಡಿಕಾ ಜಪ, ಬಲಿ ನಡೆಯಲಿದೆ.
ಎ.7 ರಂದು ಬೆಳಿಗ್ಗೆ ನಿತ್ಯಾವಿಧಿಸಹಿತ ಪ್ರಥಮ ಪ್ರಕ್ಷಾಲನೆ, 9 ರಿಂದ ಜ್ವಾಲಾಮುಖಿ ಆರಾಧನೆ, ಹೊರಸುತ್ತಿನ ಹೈಗುಳಿ ಮತ್ತು ನಾಗದೇವರುಗಳಿಗೆ ಶಕ್ತಿ ಹವನ ಸಂಜೆ ಹೊನ್ನಮಹಾಸತಿ ಮತ್ತು ಸಪರಿವಾರ ದೇವರುಗಳ ಕಲಾವೃದ್ಧಿಯಾಗ, ಕಲಾವೃಧಿ ಜಪ, ಪೂರ್ಣಾಹುತಿ, ಮಹಾಬಲಿ ನಡೆಯಲಿದೆ.
ಎ. 8 ರಂದು ಬೆಳಿಗ್ಗೆ ನಿತ್ಯಾವಿಧಿಸಹಿತ ಶ್ರೀ ಕ್ಷೇತ್ರವೀರ ದೇವ ಆರಾಧನೆ, ಪದ್ಮಾವತಿ ದೇವಿ ಆರಾಧನೆ, ಪಂಚಾಮೃತ ಅಭಿಷೇಕ, ಅಲಂಕಾರ, ನೈವೇದ್ಯ, ಮಹಾಪೂಜೆ, ಮಹಾಮಂಗಳಾರತಿ, ಪ್ರಸಾದ ವಿತರಣೆ, ಗುರು ಆಶೀರ್ವಚನ ಹಾಗೂ ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ. ಸಂಜೆ ಗಂಟೆ 6 ರಿಂದ ನಮ್ಮೂರ ಯುವ ಪ್ರತಿಭೆಗಳಿಂದ ಗಾನ ವೈವಿಧ್ಯ ಸಂಜೆ 7:30ಕ್ಕೆ ಅರೆಹೊಳೆ ಪ್ರತಿಷ್ಠಾನದ ನಂದಗೋಕುಲ ಕಲಾವಿದರು ಮಂಗಳೂರು ಇವರಿಂದ ಅಮೋಘ ನೃತ್ಯ ವೈಭವ ಬಿಡುವನೇ ಬ್ರಹ್ಮಲಿಂಗ ಪ್ರದರ್ಶನಗೊಳ್ಳಲಿದೆ ಹಾಗೂ ಸಂಗೀತ ಗಾನಸುಧೆ ಕಾರ್ಯಕ್ರಮ ನಡೆಯಲಿದೆ ಎಂದು ದೇವಸ್ಥಾನದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.