ಬೈಂದೂರು,ಮಾ.26: ಶ್ರೀ ಮಹಾಗಣಪತಿ ದೇವಸ್ಥಾನದ ಅಳ್ವೆಗದ್ದೆ ಶಿರೂರು ಇಲ್ಲಿನ ದೇವಸ್ಥಾನಕ್ಕೆ ಕನ್ನಡ ಸಿನೆಮಾದ ಖ್ಯಾತ ನಿರ್ದೇಶಕ ಬಿ.ಎಂ.‌ಗಿರಿರಾಜ್ ಭೇಟಿ ನೀಡಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಶಿಲಾಮಯ ದೇವಸ್ಥಾನದ ವಿನ್ಯಾಸ ಶಿಲ್ಪಕಲೆಯು ಅದ್ಭುತವಾಗಿ ಮೂಡಿಬಂದಿರುವ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು.‌ಈ ಸಂದರ್ಭದಲ್ಲಿ ಅವರನ್ನು ದೇವಸ್ಥಾನದ ವತಿಯಿಂದ ಸನ್ಮಾನಿಸಲಾಯಿತು.

ಸಹ ನಿರ್ದೇಶಕ ಜಯ್. ಡಿ. ಭಟ್ಕಳ, ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಗಣಪತಿ ಮೊಗವೀರ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಾಮ ಎನ್ .ಅಳ್ವೆಗದ್ದೆ, ದೇವಸ್ಥಾನದ ಗೌರವಾಧ್ಯಕ್ಷ ನಾರಾಯಣ ಟಿ ಅಳ್ವೆಗದ್ದೆ, ಮತ್ಸೋದ್ಯಮಿ ತಿಮ್ಮಪ್ಪ ಎನ್.ಮೊಗೇರ್ ಅಳ್ವೆಗದ್ದೆ ಹಾಗೂ ದೇವಸ್ಥಾನ ಸಮಿತಿಯ ಸರ್ವ ಸದಸ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

4 × one =