ಶಿರೂರು: ಟೀಮ್ ಉದಯ ಪೂಜಾರಿ ತಂಡ ಗ್ರಾಮೀಣ ಭಾಗದಲ್ಲಿ ಕ್ರೀಡೆ ಸೇರಿದಂತೆ ಹತ್ತಾರು ಸಮಾಜಮುಖಿ ಕಾರ್ಯಕ್ರಮದ ಮೂಲಕ ಗುರುತಿಸಿಕೊಂಡಿದೆ.ಕ್ರೀಡೆಯಿಂದ ಸಂಘಟನೆ ಮತ್ತು ಸಾಮಾಜಿಕ ಅಭಿವೃದ್ದಿ ಸಾದ್ಯ ಎಂದು ಬೈಂದೂರು ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಹೇಳಿದರು ಅವರು ಶಿರೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ನಡೆದ ಟೀಮ್ ಉದಯ ಪೂಜಾರಿ ಶಿರೂರು ಇವರ ಆಶ್ರಯದಲ್ಲಿ ದಿ.ಗೋವರ್ಧನ್ ಇವರ ಸ್ಮರಣಾರ್ಥವಾಗಿ ಗೋವರ್ಧನ್ ಟ್ರೋಪಿ -2026 ಹೊನಲು ಬೆಳಕಿನ 30 ಗಜಗಳ ಕ್ರಿಕೆಟ್ ಪಂದ್ಯಾಟ ಉದ್ಘಾಟಿಸಿ ಈ ಮಾತುಗಳನ್ನಾಡಿದರು.
ಕ್ರಿಕೆಟ್ ಪಂದ್ಯಾಟದ ಆಯೋಜಕ ಉದಯ ಪೂಜಾರಿ ಮೈದಿನಪುರ ಅಧ್ಯಕ್ಷತೆ ವಹಿಸಿದ್ದರು.
ಬೈಂದೂರು ಯೂತ್ ಕಾಂಗ್ರೇಸ್ ಅಧ್ಯಕ್ಷ ಶೇಖರ ಪೂಜಾರಿ,ಶಿರೂರು ಗ್ರಾ.ಪಂ ಉಪಾಧ್ಯಕ್ಷ ಕಾಪ್ಸಿ ನೂರ್‌ಮಹ್ಮದ್,ಬೈಂದೂರು ಪಟ್ಟಣ ಪಂಚಾಯತ್ ನಾಮನಿರ್ದೇಶಿತ ಸದಸ್ಯ ನಾಗರಾಜ ಗಾಣಿಗ,ಯಕ್ಷ ಸಂಪದ ಅಧ್ಯಕ್ಷ ಚಿಕ್ಕು ಪೂಜಾರಿ,ಗ್ರಾ.ಪಂ ಸದಸ್ಯರಾದ ಪ್ರಸನ್ನ ಕುಮಾರ್ ಶೆಟ್ಟಿ,ಮುಕ್ರಿ ಮಹ್ಮದ್ ಅಲ್ತಾಫ್,ಪತ್ರಕರ್ತ ಅರುಣ್ ಕುಮಾರ್ ಶಿರೂರು,ಉದ್ಯಮಿ ರಾಜೇಶ ಪೂಜಾರಿ ಹಣಮಕ್ಕಿ,ಉದಯ ಆಚಾರ್ಯ,ಮಾಸ್ತಯ್ಯ ಪೂಜಾರಿ,ದಿನಕರ ಶಿರೂರು,ಕಿರಣ್ ಪೂಜಾರಿ,ಕಿಶನ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.





ಈ ಸಂದರ್ಭದಲ್ಲಿ ನಿವೃತ್ತ ಸೈನಿಕ ಹಾಗೂ ಹಿರಿಯ ದೇಹದಾಡ್ಯಪಟು ಬಾಬು ಪೂಜಾರಿ ಮೈದಿನಪುರ ರವರನ್ನು ಸಮ್ಮಾನಿಸಲಾಯಿತು ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ವಿನಾಯಕ ತಲ್ಲೂರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ವರದಿ/ಚಿತ್ರ; ಗಿರಿ ಶಿರೂರು