ಬೈಂದೂರು,ಮಾ.20: ಶ್ರೀ ದುರ್ಗಾಪರಮೆಶ್ವರಿ ದೇವಸ್ಥಾನ ಹೊಸೂರು ಇದರ 8ನೇ ವಾರ್ಷಿಕ ವರ್ಧಂತ್ಯೋತ್ಸವ ಕಾರ್ಯಕ್ರಮ ಶುಕ್ರವಾರ ನಡೆಯಿತು.ಬೆಳಿಗ್ಗೆ ಅರ್ಚಕರಾದ ಗುರುಪ್ರಸಾದ ಭಟ್ ಕೊರಾಡಿ ಇವರ ನೇತ್ರತ್ವದಲ್ಲಿ ಧಾರ್ಮಿಕ ಪೂಜಾ ವಿಧಿ ವಿಧಾನಗಳು ನಡೆಯಿತು.
ಬೈಂದೂರು ಶಾಸಕರಾದ ಗುರುರಾಜ ಗಂಟಿಹೊಳೆ ಬೇಟಿ ನೀಡಿ ದೇವರ ದರ್ಶನ ಪಡೆದರು.
ಈ ಸಂದರ್ಭದಲ್ಲಿ ನಾಗಪ್ಪ ಮರಾಠಿ,ತಿಮ್ಮ ಮರಾಠಿ,ವಾಸುದೇವ ಮರಾಠಿ,ಜೈಸನ್ ಮದ್ದೋಡಿ,ಮಾಸ್ತಯ್ಯ ಪೂಜಾರಿ,ಮಹಾದೇವ ಮರಾಠಿ,ಕುಪ್ಪ ಮರಾಠಿ,ದೇವಸ್ಥಾನದ ಸರ್ವ ಸದಸ್ಯರು ಹಾಗೂ ಊರಿನ ಭಕ್ತಾಧಿಗಳು ಹಾಜರಿದ್ದರು.

