ಬೈಂದೂರು: ಶ್ರೀ ಗುರುರಾಘವೇಂದ್ರ ಸ್ವಾಮಿ ಮಠ (ಕಿರು ಮಂತ್ರಾಲಯ) ವತ್ತಿನೆಣೆ ಬೈಂದೂರು ಇದರ ಶ್ರೀ ಹನುಮ ಜಯಂತಿ ಪ್ರಯುಕ್ತ ಶ್ರೀ ಆಂಜನೀಯ ದೇವರಿಗೆ ನೂತನವಾಗಿ ನಿರ್ಮಿಸಲ್ಪಟ್ಟ ಪ್ರಭಾವಳಿ ಸಮರ್ಪಣೆ ಹಾಗೂ ಸಾಮೂಹಿಕ ಶ್ರೀ ವಾಯುಸ್ತುತಿ ಪುನಃಶ್ಚರಣಾ ಯಾಗ ಶ್ರೀ ಗುರು ರಾಘವೇಂದ್ರ ಸಾರ್ವಭೌಮರಿಗೆ ಮಹಾಪೂಜೆ ಕಾರ್ಯಕ್ರಮ ಎ.02 ರಂದು ಪೂರ್ವಾಹ್ನ ನಡೆಯಲಿದೆ.ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ,ಪುಣ್ಯಾಹ, ಶ್ರೀ ಆಂಜನೇಯ ಸ್ವಾಮಿಗೆ ಪಂಪವಿಶಂತಿ ಕಲಶ,ಪಂಚಾಮೃತ ಅಭಿಷೇಕ,ಕಲಶಾಭಿಷೇಕ,ಸಂಜೆ ರಂಗಪೂಜೆ,ದೀಪಾರಾಧನೆ ಸೇವೆ ಹಾಗೂ ಮುಂತಾದ ಪೂಜಾ ವಿಧಿ ವಿಧಾನಗಳು ನಡೆಯಲಿದೆ ಎಂದು ದೇವಸ್ಥಾನದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.