ಬೈಂದೂರು; ಕಳೆದ ವರ್ಷದಿಂದ ಬೈಂದೂರಿನಲ್ಲಿ ಆರಂಭಗೊಂಡಿರುವ ಅಜಿನೊರ ಸಂಸ್ಥೆ ಅಂತರಾಷ್ಟ್ರೀಯ ಉದ್ಯೋಗ ಕಲ್ಪಿಸುವಲ್ಲಿ ಜಾಗತಿಕ ಮನ್ನಣೆ ಪಡೆದಿದೆ.ಬೈಂದೂರು ಸೇರಿದಂತೆ ದೇಶದ ಬಹುತೇಕ ಗ್ರಾಮೀಣ ಭಾಗದ ಸಾವಿರಾರು ಯುವಜನರಿಗೆ ದೇಶ ವಿದೇಶದಲ್ಲಿ ಉದ್ಯೋಗವಕಾಶ ನೀಡಿರುವ ಜೊತೆಗೆ ಗುಣ ಮಟ್ಟದ ಶೈಕ್ಷಣಿಕ ಹಿನ್ನಲೆ ಹೊಂದಿದ್ದು ಭಾರತ ಸರಕಾರದ ಮಾನ್ಯತೆ ಹೊಂದಿದೆ. ಇಂತಹ ಸಂಸ್ಥೆಯ ಸಾಧನೆಗೆ ಕಳಂಕ ತರುವ ಉದ್ದೇಶ ಮತ್ತು ರಾಜಕೀಯ ದುರುದ್ದೇಶಕ್ಕೆ ಸಂಸ್ಥೆಯ ಹೆಸರನ್ನು ಬಳಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಮಾಹಿತಿ ಹರಡುತ್ತಿರುವುದು ಸಂಸ್ಥೆಯ ಗಮನಕ್ಕೆ ಬಂದಿದ್ದು ಬೈಂದೂರಿನ ರಾಜಕೀಯ ವಿಚಾರಕ್ಕೂ ಮತ್ತು ಅಜಿನೋರ ಸಂಸ್ಥೆಗೂ ಯಾವುದೇ ರೀತಿಯ ಸಂಬಂಧವಿಲ್ಲ. ನಮ್ಮ ಎಲ್ಲಾ ಸಾಧನೆ ಹಾಗೂ ಚಟುವಟಿಕೆ ಪಾರದಶ೯ಕವಾಗಿದೆ.ಅನಗತ್ಯ ಸುಳ್ಳು ಸುದ್ದಿ ಹರಡುವುದರ ಕುರಿತು ಗಂಭೀರವಾಗಿ ಪರಿಗಣಿಸಲಿದೆ ಮತ್ತು ಅಗತ್ಯಬಿದ್ದರೆ ಕಾನೂನು ಕ್ರಮಕ್ಕೆ ಮುಂದಾಗಬೇಕಾಗುತ್ತದೆ ಎಂದು ಆಜಿನೊರ ಸಂಸ್ಥೆ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.
ಸಂಸ್ಥೆಯ ಹಿನ್ನಲೆ: ಕೇರಳದಲ್ಲಿ 2013 ರಿಂದ ಸ್ಥಾಪನೆಗೊಂಡು ವಿವಿಧ ವಿಭಾಗಗಳಲ್ಲಿ ವ್ಯಾಸಂಗ ಮಾಡಿದ ಅಭ್ಯರ್ಥಿಗಳಿಗೆ ವಿದೇಶದಲ್ಲಿ ಉದ್ಯೋಗ ಅಥವಾ ಉನ್ನತ ವಿದ್ಯಬ್ಯಾಸಕ್ಕಾಗಿ ಅವಕಾಶವನ್ನು ಕಲ್ಪಿಸುವಲ್ಲಿ ಮುಂಚೂಣಿಯಲ್ಲಿರುವ ಸಂಸ್ಥೆಯಾಗಿದೆ. ಸಂಸ್ಥೆಯು ದೇಶದ ವಿವಿಧ ಭಾಗಗಳಲ್ಲಿ ತನ್ನ ಶಾಖೆ ಯನ್ನು ಹೊಂದಿದೆ.ಕರ್ನಾಟಕದಲ್ಲಿ ತನ್ನ ಶಾಖೆಯನ್ನು ವಿಸ್ತರಿಸುವ ಸಮಯದಲ್ಲಿ ಗ್ರಾಮೀಣ ಪ್ರದೇಶ ಹಾಗೂ ತಾಲೂಕು ಮಟ್ಟದ ಕ್ಷೇತ್ರದಲ್ಲಿರುವ ಅಭ್ಯರ್ಥಿಗಳಿಗೆ ಸಹಾಯವಾಗಬೇಕು ಎನ್ನುವ ಉದ್ದೇಶದೊಂದಿಗೆ ಬೈಂದೂರಿನ ಶಾಖೆಯನ್ನು 2024 ನವೆಂಬರ್ ತಿಂಗಳಿನಲ್ಲಿ ಸಿಟಿ ಪಾಯಿಂಟ್ ಕಟ್ಟಡದಲ್ಲಿ ಆರಂಭಿಸಿದೆ.ಬೈಂದೂರು ಶಾಖೆಯು ಪ್ರಮುಖವಾಗಿ ನಸಿಂಗ್ ವಿಭಾಗದಲ್ಲಿ ತರಬೇತು ಹೊಂದಿದ ಅಭ್ಯರ್ಥಿಗಳಿಗೆ ಜರ್ಮನಿಯಲ್ಲಿ ರಿಜಿಸ್ಟರ್ಡ್ ನರ್ಸ್ ಉದ್ಯೋಗವನ್ನು ಕೊಡುವ ಉದ್ದೇಶದಿಂದ ಸ್ಥಾಪಿಸಲಾಗಿದೆ. ಜರ್ಮನ್ ಭಾಷಾ ಕಲಿಕಾ ವಿಭಾಗವನ್ನು ಶಾಖೆಯಲ್ಲಿ ಆರಂಭಿಸಲಾಗಿದೆ.
ಜಪಾನ್ ಭಾಷೆ ಕಲಿಯಲು ಉದ್ಯೋಗ ಮೇಳದಿಂದ ಆಯ್ಕೆಯಾದ 32 ಅಭ್ಯರ್ಥಿಗಳು ಜಪಾನ್ ಭಾಷಾ ತರಬೇತಿಯನ್ನು ಪಡೆಯಲು ಅಜಿನೊರ ಸಂಸ್ಥಯನ್ನು ಸೇರಿಕೊಂಡಿರುತ್ತಾರೆ. ಇದರಲ್ಲಿ 8 ಅಭ್ಯರ್ಥಿಗಳು ಕಲಿಕಾ ತರಬೇತಿಯಿಂದ ಸ್ವಇಚ್ಛೆಯಿಂದ ಹೊರ ಹೋಗಿರುತ್ತಾರೆ. ಹಾಗೂ೮ ಅಭ್ಯರ್ಥಿಗಳು ಜಪಾನ ಉದ್ಯೋಗ ಪಡೆಯಲು ಜೆಎಫ್‌ಟಿ2 ಮಟ್ಟದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುತ್ತಾರೆ. ಇವರಲ್ಲಿ ಓರ್ವ ಅಭ್ಯರ್ಥಿ ಎನ್ ಎಸ್ ಡಿ ಸಿ ಐ ಯೋಜನೆಯ ಅಡಿಯಲ್ಲಿ ಜಪಾನ್ ನಲ್ಲಿ ಈಗಾಗಲೇ ಉದ್ಯೋಗವನ್ನು ಮಾಡುತ್ತಿದ್ದಾರೆ ಹಾಗೂ ಇಬ್ಬರು ಅಭ್ಯರ್ಥಿಗಳು ಶುಲ್ಕ ಸಹಿತವಾದ ಉದ್ಯೋಗದ ಅಡಿಯಲ್ಲಿ ಜಪಾನ್ ನಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಬೈಂದೂರು ಭಾಗದ ಆರು ವಿದ್ಯಾಥಿಗಳು ಈ ಸಂಸ್ಥೆಯಲ್ಲಿ ಶಿಕ್ಷಣ ಪಡೆದು ಜರ್ಮನಿಯಲ್ಲಿ ಉದ್ಯೋಗ ಪಡೆದುಕೊಂಡಿದ್ದಾರೆ.
ಉದ್ಯೋಗ ಮೇಳ,ಹಲವರಿಗೆ ಅವಕಾಶ; ಬೈಂದೂರಿನಲ್ಲಿ ಪ್ರಥಮ ಬಾರಿಗೆ ಸಂಸದರು ಹಾಗೂ ಶಾಸಕರ ಪರಿಕಲ್ಪನೆಯಲ್ಲಿ 2024 ಸೆಪ್ಟೆಂಬರ್ ನಲ್ಲಿ ಉದ್ಯೋಗ ಮೇಳ ನಡೆದಿದ್ದು ಅತ್ಯಂತ ಯಶಸ್ವಿಯಾಗಿದೆ.ಅರ್ಹತೆಯ ಅಧಾರದಲ್ಲಿ ನೂರಾರು ಯುವಕರು ಹಲವು ಉತ್ತಮ ಉದ್ಯೋಗ ಪಡೆದಿದ್ದಾರೆ. ನವೆಂಬರ್ 2024 ರಿಂದ ಮಾರ್ಚ್ 2026 ರ ತನಕ ಸುಮಾರು 1000 ಸಾವಿರ ಅಭ್ಯರ್ಥಿಗಳು ದೇಶದ ವಿವಿಧ ಪ್ರದೇಶದಿಂದ (ತಮಿಳುನಾಡು, ಅಸ್ಸಾಂ, ಬಿಹಾರ ಛತ್ತೀಸ್ಗಡ್ , ಮಹಾರಾಷ್ಟ್ರ, ವೆಸ್ಟ್ ಬೆಂಗಾಲ್, ಗೋವಾ, ಅಂಡಮಾನ್ ಮಣಿಪುರ್ ದೆಹಲಿ , ಕಲ್ಕತ್ತ, ಕೇರಳ , ಆಂಧ್ರಪ್ರದೇಶ) ಹಾಗೂ ಕರ್ನಾಟಕದ ವಿವಿಧ ಭಾಗಗಳಿಂದ ಅಭ್ಯರ್ಥಿಗಳು ಬೈಂದೂರಿಗೆ ಬಂದು ಜರ್ಮನಿ ಭಾಷೆಯನ್ನು ಕಲಿತಿದ್ದಾರೆ. ಅಂತರಾಷ್ಟ್ರಿಯ ಪರೀಕ್ಷೆಯಲ್ಲಿ ಪ್ರಥಮ ಪ್ರಯತ್ನದಲ್ಲಿ 200 ಅಭ್ಯರ್ಥಿಗಳು ಉತ್ತೀರ್ಣರಾಗಿರುತ್ತಾರೆ. ಉತ್ತೀರ್ಣರಾದ ಅಭ್ಯರ್ಥಿಗಳಲ್ಲಿ 8 ಮಂದಿ ಈಗಾಗಲೇ ಜರ್ಮನಿಯಲ್ಲಿ ಉದ್ಯೋಗ ಪಡೆದಿರುತ್ತಾರೆ. ಬರುವ ಏಪ್ರಿಲ್ ಮೊದಲವಾರದಲ್ಲಿ 3 ಮಂದಿ ಜರ್ಮನಿಗೆ ಹೋಗಲಿದ್ದಾರೆ ಹಾಗೂ ಉಳಿದ ಅಭ್ಯರ್ಥಿಗಳು ಜರ್ಮನಿ ಗೆ ಹೋಗುವ ಸಿದ್ದತೆಯಲ್ಲಿದ್ದಾರೆ.
ಭಾಷೆ ಕಲಿತ 24 ಅಭ್ಯರ್ಥಿಗಳಲ್ಲಿ 2 ಅಭ್ಯರ್ಥಿಗಳಿಗೆ ಅವರು ಪಾವತಿಸಿದ ಸಂಪೂರ್ಣ ಶುಲ್ಕವನ್ನು ಹಿಂದಿರುಗಿಸಲಾಗಿದೆ ಹಾಗೂ 6 ಅಭ್ಯರ್ಥಿಗಳ ಭಾಗಶಃ ಶುಲ್ಕವನ್ನು ಹಿಂದಿರುಗಿಸಲಾಗಿದೆ. ಜರ್ಮನಿ ಭಾಷಾ ಕಲಿಕೆಯು ಖಚಿತವಾದ ಉದ್ಯೋಗವನ್ನು ನೀಡುವ ತರಬೇತಿಯಾಗಿದ್ದು ಸಂಸ್ಥೆಯು ರಾಜ್ಯದಾದ್ಯಂತ ಜರ್ಮನ್ ಭಾಷೆ ಕಲಿಕೆಯ ಹೆಸರುವಾಸಿ ಸಂಸ್ಥೆಯಾಗಿ ಹೊರಹೋಮ್ಮಿದೆ. ಅಜಿನೊರ ಬೈಂದೂರಿನಿಂದ ಮಲೇಷ್ಯಾ ದೇಶದಲ್ಲಿ ಮರೈನ್ ವಿಭಾಗದಲ್ಲಿ ತರಬೇತಿಯನ್ನು ಪಡೆಯಲು ಇಬ್ಬರು ಅಭ್ಯರ್ಥಿಗಳು ಮಲೇಷ್ಯಾ ಗೆ ಹೋಗಿರುತ್ತಾರೆ. ಅಜಿನೊರ ಸಂಸ್ಥೆಯ ಅಭ್ಯರ್ಥಿಗಳಿಗೆ ಈ ತರಬೇತಿಯೊಂದಿಗೆ 34 ಲಕ್ಷ ವಿದ್ಯಾರ್ಥಿವೇತನ ಹಾಗೂ ತರಬೇತಿ ಮುಗಿದ ನಂತರ ಉದ್ಯೋಗಕ್ಕಾಗಿ ಕಂಡೀಷನಲ್ ಆಫರ್ ಲೆಟರ್ ದೊರಕಿರುತ್ತದೆ. ಬ್ರಹ್ಮಾವರ ಹಾಗೂ ಒಬ್ಬ ಕೊಡಗಿನ ಅಭ್ಯರ್ಥಿ ಆಯ್ಕೆ ಆಗಿರುತ್ತಾರೆ. ಈಗಾಗಲೇ ಜರ್ಮನಿ ಭಾಷೆಯ ಅಂತಾರಾಷ್ಟ್ರೀಯ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡ ಅಭ್ಯರ್ಥಿಗಳಿಗೆ ಉದ್ಯೋಗ ದೊರಕಿಸಲು ಜರ್ಮನಿಯಲ್ಲಿ ಅಧೀಕೃತವಾಗಿ ನೋಂದಣಿಯಾದಂತಹ ನಾಲ್ಕು ಸಂಸ್ಥೆಗಳು ಅಜಿನೊರ ಸಂಸ್ಥೆ ಬೈಂದೂರಿನೊಂದಿಗೆ ಒಪ್ಪಂದವನ್ನು ಮಾಡಿಕೊಂಡಿರುತ್ತಾರೆ.
ಅಂತಾರಾಷ್ಟ್ರೀಯ ಮಟ್ಟದ ಪರೀಕ್ಷೆ ಮುಗಿಸಿದ ಅಭ್ಯರ್ಥಿಗಳೆಗೆ ಅಜಿನೊರ ಬೈಂದೂರಿನಲ್ಲಿಯೆ ಈ ಉದ್ಯೋಗದಾತರ ಮುಖಾಂತರ ನೇರ ಸಂದರ್ಶನದ ಅವಕಾಶದೊಂದಿಗೆ ಜರ್ಮನಿಗೆ ಅಭ್ಯರ್ಥಿಗಳನ್ನು ಕಳುಹಿಸುವ ಪಕ್ರಿಯೆಯನ್ನು ಸಂಸ್ಥೆಯಲ್ಲಿ ದೊರಕಿಸಲಾಗಿದೆ. ಮಲೇಷ್ಯಾ ಸರ್ಕಾರದ ಅಧೀನದಲ್ಲಿರುವ ಬಹುದೊಡ್ಡ ತೈಲ ಹಾಗೂ ಅನಿಲ ಸಂಸ್ಥೆಯ ಪ್ರಾಯೋಜಿಕತ್ವದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಹೊಂದಿದ ವಿಶ್ವವಿದ್ಯಾನಿಲಯದಲ್ಲಿ ಈ ತರಬೇತಿಯನ್ನು ಈ ಅಭ್ಯರ್ಥಿಗಳಿಗೆ ನೀಡಲಾಗುತ್ತಿದೆ.

ಬೈಂದೂರಿನಲ್ಲಿ ರಾಜಕೀಯ ವಿಚಾರಗಳಿಗೂ ಮತ್ತು ಆಜಿನೋರ ಸಂಸ್ಥೆಯ ಕಾರ್ಯಚಟುವಟಿಗೆಗೆ ಯಾವುದೆ ಸಂಭಂಧವಿಲ್ಲ.ಸಂಸ್ಥೆ ಸರಕಾರದ ನಿಯಮಗಳೊಂದಿಗೆ ಪ್ರತಿ ವಿದ್ಯಾರ್ಥಿಗಳಿಗೂ ನೂರಕ್ಕೆ ನೂರು ಪಾರದರ್ಶಕ ಸೇವೆ ನೀಡಿದೆ.ಇಲ್ಲಿನ ರಾಜಕೀಯದ ಜೊತೆಗೆ ಆಜಿನೊರ ಸಂಸ್ಥೆಯ ಹೆಸರನ್ನು ತಳುಕು ಹಾಕುವ ಪ್ರಯತ್ನ ಸಲ್ಲದು.ಹಾಗೂ ಅನಗತ್ಯ ಅಪಪ್ರಚಾರದ ಹಿಂದೆ ಕಾಣದ ಕೈಗಳ ಪ್ರಯತ್ನ ಉತ್ತಮ ಬೆಳವಣಿಗೆಯಲ್ಲ.ಯಾವುದೆ ಮಾಹಿತಿ ಬೇಕಿದ್ದರು ಸಂಸ್ಥೆ ಪಾರದರ್ಶಕವಾಗಿ ನೀಡಲಿದೆ ಎಂದು ಸಂಸ್ಥೆಯ ಅಧೀಕ್ರತ ಮಾಹಿತಿಯಲ್ಲಿ ತಿಳಿಸಿದ್ದಾರೆ.