ಬೈಂದೂರು: ಕಳೆದ ಆರು ತಿಂಗಳಿಂದ ಗ್ರಾಮೀಣ ಭಾಗಗಳನ್ನು ಪಟ್ಟಣ ಪಂಚಾಯತ್ ವ್ಯಾಪ್ತಿಯಿಂದ ಕೈಬಿಡಬೇಕೆಂದು ಆಗ್ರಹಿಸಿ ತಾಲೂಕು ರೈತ ಸಂಘದ ವತಿಯಿಂದ ಬೈಂದೂರು ತಾಲೂಕು ಆಡಳಿತ ಸೌಧದ ಎದುರು ನಡೆಯುತ್ತಿರುವ ನಡೆಯುತ್ತಿರುವ ಅನಿಧಿ೯ಷ್ಟಾವಧಿ ಧರಣಿ 175 ದಿನ ಪೂರೈಸಿದೆ.ಈ ಸಂದರ್ಭದಲ್ಲಿ ಮಾತನಾಡಿದ ಬೈಂದೂರು ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಕಳೆದ ಐದು ವರ್ಷಗಳಿಂದ ಗ್ರಾಮೀಣ ಭಾಗಗಳನ್ನು ಪಟ್ಟಣ ಪಂಚಾಯತ್‌ನಿಂದ ಬೇರ್ಪಡಿಸಬೇಕೆಂದು ಹಲವಾರು ರೀತಿಯ ಬೇಡಿಕೆಗಳನ್ನು ನೀಡಿದರು ಸಹ ಜಿಲ್ಲಾಡಳಿತದ ನಿರ್ಲಕ್ಷದಿಂದ ವಿಳಂಬವಾಗಿದೆ.ಈ ಬಗ್ಗೆ ಬೈಂದೂರು ರೈತ ಸಂಘದ ನೇತ್ರತ್ವದಲ್ಲಿ ತಾಲೂಕು ಆಡಳಿತ ಸೌಧದ ಎದುರು ಕಳೆದ ಆರು ತಿಂಗಳುಗಳಿಂದ ಪ್ರತಿಭಟನೆ ನಡೆಯುತ್ತಿದೆ.ಅನ್ನದಾತರ ದ್ವನಿಗೆ ಸರಕಾರ,ಜಿಲ್ಲಾಡಳಿತ,ಆಡಳಿತ ವ್ಯವಸ್ಥೆ ಇದುವರೆಗೆ ಸಮರ್ಪಕ ಸ್ಪಂಧನೆ ನೀಡಿಲ್ಲ. ರೈತರ ಹೋರಾಟಕ್ಕೆ ಸಮರ್ಪಕವಾದ ಸ್ಪಂಧನೆ ನೀಡದಿದ್ದಲ್ಲಿ ಹೋರಾಟದ ಗಂಭೀರ ಪರಿಣಾಮ ಸರಕಾರ ಎದುರಿಸಬೇಕಾಗುತ್ತದೆ ಮತ್ತು ಗ್ರಾಮೀಣ ಭಾಗ ಸೇರಿದಂತೆ ಕರಾವಳಿ ಭಾಗದಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾಗಿದೆ.ನೂರಾರು ಕೋಟಿ ರೂಪಾಯಿ ಅನುದಾನ ಕಾಮಗಾರಿ ನಡೆಯದೆ ಗೋಲ್‌ಮಾಲ್ ಆಗಿದೆ.ಈ ಬಗ್ಗೆ ಗಮನಹರಿಸಿ ಪ್ರತಿ ಮನೆ ಮನೆಗೂ ನೀರು ನೀಡಬೇಕು ಎಂದರು.

ಈ ಸಂದರ್ಭದಲ್ಲಿ ಪದ್ಮಾಕ್ಷ ಗೋಳಿಬೇರು,ಹೆರಿಯಣ್ಣ ಗೋಳಿಬೇರು,ಅರುಣ್ ಕುಮಾರ್ ಶಿರೂರು,ತೂದಳ್ಳಿ ಮುಂತಾದ ಗ್ರಾಮೀಣ ಭಾಗದ ಗ್ರಾಮಸ್ಥರು ಹಾಜರಿದ್ದರು.

 

Leave a Reply

Your email address will not be published. Required fields are marked *

4 × three =