ಬೈಂದೂರು: ಪ್ರತಿ ಮನೆ ಮನೆಗೂ ಸಮರ್ಪಕ ಕುಡಿಯುವ ನೀರು ಪೂರೈಕೆಯಾಗಬೇಕು ಎನ್ನುವ ಪ್ರಧಾನಿ ನರೇಂದ್ರ ಮೋದಿಯವರ ಕನಸು.ಜಲಜೀವನ್ ಯೋಜನೆ ಪ್ರಧಾನಿಯವರ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ.ಈ ಯೋಜನೆ ಬೈಂದೂರು ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆಯ್ಲಲಿ ದೊರೆಯಬೇಕು ಎಂದು  ಸಂಸದ ಬಿ.ವೈ ರಾಘವೇಂದ್ರ ವಿಶೇಷ ಮುತುವರ್ಜಿ ವಹಿಸಿದ್ದಾರೆ.ಶಾಸಕನಾಗಿ ಈಗಾಗಲೇ ನಾಲ್ಕೈದು ಬಾರಿ ಈ ವಿಷಯದ ಕುರಿತು ಅಧಿಕಾರಿಗಳ ಸಭೆ ನಡೆಸಿದ್ದೇನೆ.ಅಧಿಕಾರಿಗಳಿಂದ ಲೋಪವಾದರೆ ಜೈಲು ನಿಶ್ಚಿತ ಎಂದು ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಹೇಳಿದ್ದಾರೆ ಅವರು ಗುರುವಾರ ಬೈಂದೂರು ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ ಆರಂಭದಿಂದ ಈ ಯೋಜನೆ ಪ್ರತಿ ಗ್ರಾಮದಲ್ಲೂ ಹತ್ತಾರು ಸಮಸ್ಯೆಯಿಂದ ಸುದ್ದಿಯಾಗಿದ್ದು ಹಲವು ಬಾರಿ ಸಭೆ ನಡೆಸಲಾಗಿದೆ.ಕಳೆದ ಬಾರಿ ಸಂಸದರು ಈ ಬಗ್ಗೆ ವಿಶೇಷ ಸಭೆ ನಡೆಸಿ ಸದ್ಯ ಗ್ರಾಮ ಪಂಚಾಯತ್‌ನ ಸಂರ್ಪಕಕ್ಕೆ ಜೋಡಣೆ ಮಾಡುವ ಸಲಹೆ ನೀಡಿದಾಗ ಒಂದಿಷ್ಟು ಕಡೆ ನೀರಿನ ಪೂರೈಕೆಯಾಗುತ್ತಿದೆ.ಈ ಬಗ್ಗೆ ಅಧಿಕಾರಿಗಳಿಂದ ಪೂರ್ಣ ಮಾಹಿತಿ ಪಡೆದು ಯೋಜನೆ ಸಮರ್ಪಕವಾಗಿ ಅನುಷ್ಠಾನ ಮಾಡಲಾಗುವುದು ಎಂದರು.

ಅಪಪ್ರಚಾರ ನೋವು ತಂದಿದೆ: ಕಳೆದ ಹಲವು ದಿನಗಳಿಂದ ಬೈಂದೂರು ಶಾಸಕನಾದ ನನ್ನ ತೇಜೋವಧೆ ಮಾಡುವ ಪ್ರಯತ್ನ ನಡೆಯುತ್ತಿದೆ.ಸಾಕಷ್ಟು ಅಪಪ್ರಚಾರ ನಡೆಯುತ್ತಿದೆ.ಈ ವಿಷಯದ ಬಗ್ಗೆ ಪ್ರತಿಕ್ರಿಯೆ ನೀಡಲು ಒತ್ತಡ ಇದ್ದರು ಸಹ ನಾನು ಈ ಬಗ್ಗೆ ಮಾತನಾಡಲು ಇಚ್ಚಿಸುವುದಿಲ್ಲ.ಎಲ್ಲವೂ ದೇವರ ಪಾದಕ್ಕೆ ಸಮರ್ಪಣೆ ಮಾಡಿ ಬಿಡುತ್ತೇನೆ ಎಂದರು.

ಮಾ.14 ರಂದು ಕುಂದಾಪುರದಲ್ಲಿ ಆದಿದ್ವಾರ ಜಾಬ್ ಹಬ್ಬ: ಸಮೃದ್ದ ಬೈಂದೂರು ಈಗಾಗಲೇ ಹತ್ತು ಹಲವು ಅಭಿವೃದ್ದಿ ಕಾರ್ಯಗಳನ್ನು ದಾನಿಗಳ ನೆರವಿನಿಂದ ಮಾಡಿದೆ ಮತ್ತು ಬಹಳಷ್ಟು ಕೊಡುಗೆ ನೀಡಿದೆ.ಅಸಿಸ್ಟ್‌ಟೆಕ್ ಫೌಂಡೇಶನ್ ನೇತ್ರತ್ವದಲ್ಲಿ ವಿಕಲಚೇತನ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಕರ್ನಾಟಕ ಸರಕಾರ ಇವರ ಸಹಯೋಗದಲ್ಲಿ ಮಾ.14 ರಂದು ಎಮ್.ಐ.ಟಿ ಕುಂದಾಪುರದಲ್ಲಿ ಆದಿದ್ವಾರ ಜಾಬ್ ಹಬ್ಬ ಏರ್ಪಡಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಬೈಂದೂರು ಬಿಜೆಪಿ ಮಂಡಲದ ಅಧ್ಯಕ್ಷೆ ಅನಿತಾ ಆರ್.ಕೆ, ಗೋಪಾಲ ಪೂಜಾರಿ ವಸ್ರೆ,ಕರಣ್ ಪೂಜಾರಿ,ಸಮೃದ್ದ ಬೈಂದೂರು ಅಧ್ಯಕ್ಷ ಬಿ.ಎಸ್,ಸುರೇಶ ಶೆಟ್ಟಿ,ಶ್ರೀಗಣೇಶ ಹಾಜರಿದ್ದರು.

ವರದಿ/ ಗಿರಿ ಶಿರೂರು

Leave a Reply

Your email address will not be published. Required fields are marked *

five × one =

You missed