ಶಿರೂರು: ಕುಡಿಯುವ ನೀರು ಪೂರೈಕೆಗಾಗಿ ಶಿರೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ 7.35 ಕೋಟಿ ಅನುದಾನ ವೆಚ್ಚವಾಗಿದೆ.ಇದರಲ್ಲಿ ಶೇ.80% ಹಣ ಗುತ್ತಿಗೆದಾರರಿಗೆ ಪಾವತಿಯಾಗಿದೆ.ಆದರೆ ಶಿರೂರಿನ ಯಾವ ಮನೆಗೂ ಇದುವರೆಗೆ ಹನಿ ನೀರನ್ನು ಕೂಡ ಸರಬರಾಜು ಮಾಡಲಾಗಿಲ್ಲ.ಮಾತ್ರವಲ್ಲದೆ ಹಿಂದಿನ ಪಂಚಾಯತ್ ಪೈಲ್‌ಲೈನ್‌ಗಳನ್ನು ತೆಗೆದ ಪರಿಣಾಮ ಗ್ರಾಮ ಪಂಚಾಯತ್ ಕೂಡ ನೀರು ಪೂರೈಸಲಾಗದಂತಹ ಪರಿಸ್ಥಿತಿ.ಕೆಲವು ಕಡೆ ಗ್ರಾಮ ಪಂಚಾಯತ್ ಕೂಡ ನೀರು ಪೂರೈಸಲಾಗದಂತಹ ಪರಿಸ್ಥಿತಿ ಬಂದೊದಗಿದೆ.ಕೆಲವು ಕಡೆ ಪಂಚಾಯತ್ ಪೈಪ್‌ಲೈನ್‌ಗಳಿಗೆ ಸಂಪರ್ಕ ನೀಡಲಾಗಿದೆ.ಟೆಂಡರ್ ನಿಗಧಿಯಾದ ಪೈಪ್‌ಗಳ ಬದಲಿಗೆ ಕಳಪೆ ಮಟ್ಟದ ಪೈಪ್‌ಗಳನ್ನು ಅಳವಡಿಸಲಾಗಿದ್ದು ಕೋಟ್ಯಾಂತರ ರೂಪಾಯಿ ಹಣ ಗುಳುಂ ಆಗಿದೆ.ಮಾತ್ರವಲ್ಲದೆ ಕೇಂದ್ರ ಹಾಗೂ ರಾಜ್ಯ ಸರಕಾರ ಪ್ರತಿ ಮನೆ ಮನೆಗೂ ನೀರು ದೊರೆಯಬೇಕೆನ್ನುವ ಮಹತ್ವಾಕಾಂಕ್ಷೆಯಲ್ಲಿ ನೂರಾರು ಕೋಟಿ ಅನುದಾನ ನೀಡಿದರೆ ಅಧಿಕಾರಿಗಳು,ಜಿಲ್ಲಾಡಳಿತ,ಆಡಳಿತ ವ್ಯವಸ್ಥೆ ವೈಫಲ್ಯದಿಂದ ಗುತ್ತಿಗೆದಾರರಿಗೆ ದುಡ್ಡು ಮಾಡಿಕೊಡುವ ಯೋಜನೆಯಾಗಿಬಿಟ್ಟಿದೆ.ಶಿರೂರಿನ ಕಳುಹಿತ್ಲು, ಹಡವಿನಕೋಣೆ,ಆರ್ಮಿ,ಕರಿಕಟ್ಟೆ,ಮೇಲ್ಪಂಕ್ತಿ,ಕೆಸರಕೋಡಿ ಮುಂತಾದ ಕಡೆ ನೀರಿಗಾಗಿ ಹಪಹಪಿಸುವಂತಾಗಿದೆ.ಪ್ರತಿ ಮನೆಯ ಎದುರುಗಡೆ ಸ್ಮಾರಕದಂತಹ ಸಿಮೆಂಟ್ ಕಲ್ಲನ್ನು ಅಳವಡಿಸಿರುವ ಗುತ್ತಿಗೆದಾರರು ಸಂರ್ಪಕಕ್ಕೆ ಸಿಗುತ್ತಿಲ್ಲ.4 ವರ್ಷವಾದರು ಕಾಮಗಾರಿ ಪೂರ್ಣಗೊಂಡಿಲ್ಲ.

ಶುಕ್ರವಾರ ರೈತ ಸಂಘದಿಂದ ಶಿರೂರು ಗ್ರಾಮ ಪಂಚಾಯತ್ ಬೇಟಿ, ಸಾರ್ವಜನಿಕ ಸಂವಾದ: ಪ್ರತಿ ಗ್ರಾಮದಲ್ಲೂ ಇದೇ ರೀತಿ ಅವ್ಯವಹಾರವಾಗಿದ್ದ ಒಟ್ಟು 198 ಕೋಟಿ ರೂಪಾಯಿ ಜಲಜೀವನ್ ಮಿಷನ್ ಹಾಗೂ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ 585 ಕೋಟಿ ಅನುದಾನ ದೊರೆತಿದೆ ಆದರೆ ಕಾಮಗಾರಿ ಮಾತ್ರ ಪೂರ್ಣಗೊಂಡಿಲ್ಲ.ಕೆಲವು ಗ್ರಾಮ ಪಂಚಾಯತ್‌ಗಳು ನಿರಪೇಕ್ಷಣಾ ಪತ್ರ ಕೂಡ ನೀಡಿದೆ.ಹೀಗಾಗಿ ರಾಜಕೀಯ ರಹಿತವಾಗಿ ಜನಜಾಗೃತಿ ಮೂಡಿಸಿ ಈ ಯೋಜನೆ ಸಮರ್ಪಕ ಅನುಷ್ಠಾನಕ್ಕಾಗಿ ರೈತ ಸಂಘ ಪ್ರತಿ ಗ್ರಾಮ ಪಂಚಾಯತ್‌ಗಳಿಗೆ ಬೇಟಿ ನೀಡಿ ಸಾರ್ವಜನಿಕರ ಜೊತೆ ಸಂವಾದ ನಡೆಸಿ ಮಾಹಿತಿ ನೀಡಲಿದೆ.ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ಶಿರೂರು ಗ್ರಾಮ ಪಂಚಾಯತ್‌ಗೆ ರೈತ ಸಂಘ ಬೇಟಿ ನೀಡಲಿದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಾಮಾಜಿಕ ಜವಬ್ದಾರಿ ವಹಿಸಿಕೊಳ್ಳಬೇಕಾಗಿ ಬೈಂದೂರು ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.
ವರದಿ/ಗಿರಿ ಶಿರೂರು