ಬೈಂದೂರು,ಮಾ.9: ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪನಿ ಬೈಂದೂರು ಉಪ ವಿಭಾಗ ಹಾಗೂ ಕ.ವಿ.ಪ್ರನಿ.ನಿ ನೌಕರರ ಸಂಘ ಪ್ರಾಥಮಿಕ ಸಮಿತಿ ಬೈಂದೂರು ಇವರ ಜಂಟಿ ಆಶ್ರಯದಲ್ಲಿ ವಿದ್ಯುತ್ ಸುರಕ್ಷತಾ ಅರಿವು ಮತ್ತು ಲೈನ್ ಮ್ಯಾನ್ ದಿವಸ್ ಕಾರ್ಯಕ್ರಮ ಬೈಂದೂರು ಮೆಸ್ಕಾಂ ಕಛೇರಿಯಲ್ಲಿ ನಡೆಯಿತು.
ಕಾರ್ಯನಿರ್ವಾಹಕ ಇಂಜಿನಿಯರ್ ಯಶವಂತ ಕಾರ್ಯಕ್ರಮ ಉದ್ಘಾಟಿಸಿದರು. ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಹರೀಶ್ ಅಧ್ಯಕ್ಷತೆ ವಹಿಸಿದ್ದರು.
ಮೆಸ್ಕಾಂ ಕಂಪನಿಯ ಉಪ ಕಾರ್ಯದರ್ಶಿ ರಾಘವೇಂದ್ರ ಎಂ,ಸ್ಥಳೀಯ ಸಮಿತಿ ಅಧ್ಯಕ್ಷ ಅಭಿಲಾಶ್ ಬಿಎ, ಆಂತರಿಕ ಲೆಕ್ಕಾಧಿಕಾರಿ ಸುಮಾ, ಸ್ಥಳೀಯ ಸಮಿತಿ ಕಾರ್ಯದರ್ಶಿ ರುದ್ರ, ಸಹಾಯಕ ಲೆಕ್ಕಾಧಿಕಾರಿ ಸಂಜಯ್ ಕಿಣಿ, ಬೈಂದೂರು ಪ್ರಾಥಮಿಕ ಸಮಿತಿಯ ಅಧ್ಯಕ್ಷ ಕುಮಾರ್ ಶೆಟ್ಟಿ,ಬೈಂದೂರು ಶಾಖಾಧಿಕಾರಿ ಕೃಷ್ಣ ಪೂಜಾರಿ, ಪ್ರಾಥಮಿಕ ಸಮಿತಿ ಸದಸ್ಯ ಮಸೂದ್ ಉಪಸ್ಥಿತರಿದ್ದರು.

ಪ್ರಾಥಮಿಕ ಸಮಿತಿ ಬೈಂದೂರು ಕಾರ್ಯಾದರ್ಶಿ ವಸಂತ್ ನಾಯ್ಕಪ್ರಾಸ್ತಾವಿಕ ಮಾತುಗಳನ್ನಾಡಿದರು.ಶಾಖಾಧಿಕಾರಿ ವಿಜೇಂದ್ರ ಆಚಾರ್ಯ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.