ಶಿರೂರು: ಸ್ವಾಮಿ ವಿವೇಕಾನಂದ ಯುವ ವೇದಿಕೆ ಶಿರೂರು ಇದರ ಬೆಳ್ಳಿ ಹಬ್ಬದ ಪ್ರಯುಕ್ತ ಲಕ್ಕಿಡಿಫ್ ಫಲಿತಾಂಶ ಕಾರ್ಯಕ್ರಮ ಸದ್ಗರು ಶಾಂತಾನಂದ ಆಶ್ರಮದ ಎದುರುಗಡೆ ನಡೆಯಿತು.
ಶಿರೂರಿನ ಹಿರಿಯ ವೈದ್ಯರಾದ ಕೆ.ಪಿ ನಂಬಿಯಾರ್ ಲಕ್ಕಿಡಿಫ್ ಚೀಟಿ ಎತ್ತುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಕ್ರಿಯಾತ್ಮಕ ಚಟುವಟಿಕೆ ಮುಖಾಂತರ ಊರಿನ ಗೌರವ ಹೆಚ್ಚಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿರಬೇಕು.ಸ್ವಾಮಿ ವಿವೇಕಾನಂದ ಯುವ ವೇದಿಕೆ ಶಿರೂರು ಕಳೆದ ಹಲವು ವರ್ಷಗಳಿಂದ ಅತ್ಯುತ್ತಮ ಕಾರ್ಯಕ್ರಮಗಳ ಮೂಲಕ ಊರಿನ ಅಭಿವೃದ್ದಿಗೆ ಸಹಕರಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದರು.
ಶಿರೂರು ಗ್ರಾ.ಪಂ ಉಪಾಧ್ಯಕ್ಷ ಕಾಪ್ಸಿ ನೂರ್‌ಮಹ್ಮದ್, ಜಿ.ಪಂ ಮಾಜಿ ಸದಸ್ಯ ಸುರೇಶ ಬಟ್ವಾಡಿ, ,ತಾ.ಪಂ ಮಾಜಿ ಸದಸ್ಯ ಪುಷ್ಪರಾಜ್ ಶೆಟ್ಟಿ,ಪತ್ರಕರ್ತ ಅರುಣ್ ಕುಮಾರ್ ಶಿರೂರು,ಹಿರಿಯ ನಾಗರೀಕರ ವೇದಿಕೆಯ ಚಂದ್ರಶೇಖರ ಶೆಟ್ಟಿ,ಉದ್ಯಮಿ ಪ್ರಸಾದ ಪ್ರಭು,ಮೆಸ್ಕಾಂ ಇಲಾಖೆಯ ಕೃಷ್ಣ ಮೊಗವೀರ,ರವೀಂದ್ರ ಶೆಟ್ಟಿ ಹೊನ್ಕೇರಿ,ಯೋಗೀಶ್ ಪೂಜಾರಿ ಶಿರೂರು,ರಾಜಾ ಪಡುವರಿ,ಸೀತಾರಾಮ ಪಡುವರಿ ಹಾಜರಿದ್ದರು.

ಸ್ವಾಮಿ ವಿವೇಕಾನಂದ ಯುವ ವೇದಿಕೆ ಅಧ್ಯಕ್ಷ ಶಾಂತಾರಾಮ ಪೂಜಾರಿ ಶಿರೂರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.ಗಿರೀಶ್ ಶಿರೂರು ವಂದಿಸಿದರು.