ಬೈಂದೂರು: ಬೈಂದೂರು ತಾಲೂಕು ಸರ್ಕಾರಿ ನೌಕರರ ಸಂಘದ ಸಾಮಾನ್ಯ ಸಭೆಯಲ್ಲಿ ಸಂಘದ ನೂತನ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಸುಬ್ರಹ್ಮಣ್ಯ ಜಿ ಉಪ್ಪುಂದ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.ಸುಬ್ರಹ್ಮಣ್ಯ ಜಿ ಉಪ್ಪುಂದ ಅವರು ಬೈಂದೂರು ತಾಲೂಕು NPS ನೌಕರ ಸಂಘ, ರೋಟರಿ ಕ್ಲಬ್ ಬೈಂದೂರು ಸೇರಿದಂತೆ ಹಲವು ಸಂಘ ಸಂಸ್ಥೆಗಳಲ್ಲಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಅನುಭವವನ್ನು ಹೊಂದಿರುತ್ತಾರೆ.ಇದೇ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘಕ್ಕೆ ನಾಗರಾಜ್ ಶೆಟ್ಟಿ ಪ್ರಾಂಶುಪಾಲರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬೈಂದೂರು, ಕರುಣಾಕರ ಶೆಟ್ಟಿ ಪ್ರೌಢಶಾಲಾ ಶಿಕ್ಷಕರು ನಾವುಂದ, ರಾಘವೇಂದ್ರ ಡಿ ಮುಖ್ಯ ಶಿಕ್ಷಕರು ಹೊಸಬಾಳು, ಶಶಿಧರ್ ಗಾಂಡ್ಕರ್ ಮುಖ್ಯ ಶಿಕ್ಷಕರು ಭೇಟಿಯಾಣೆ, ಗಣೇಶ ಮೇಸ್ತ ಗ್ರಾಮ ಆಡಳಿತಾಕಾರಿ ಕಿರಿಮಂಜೇಶ್ವರ, ಆನಂದ ಬಿಲ್ಲವ ಕಾರ್ಯದರ್ಶಿ ಗ್ರಾಮ ಪಂಚಾಯತ್ ಕಾಲ್ಲೋಡು, ಸುಚಿತ್ರ ನಸಿಂಗ್ ಆಫೀಸರ್ ಕೊಲ್ಲೂರು ಹೀಗೆ ವಿವಿಧ ಇಲಾಖೆಗಳ ಏಳು ಮಂದಿ ನೌಕರರನ್ನು ನಾಮನಿರ್ದೇಶನ ಸದಸ್ಯರಾಗಿ ಆಯ್ಕೆ ಮಾಡಿ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು. ಹಾಗೆ ಈ ಸಂದರ್ಭದಲ್ಲಿ ಬೆಸ್ಟ್ ಎಜುಕೇಟರ್ ಅವಾರ್ಡ್ ಪಡೆದ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕರಾದ ಉದಯ್ ಎಂ.ಪಿ ಅವರನ್ನು ಹಾಗೂ ಶಿರೂರು ಆಡಳಿತ ಅಕಾರಿ ವಿಜಯಕುಮಾರ್ ಅವರನ್ನು ಸನ್ಮಾನಿಸಲಾಯಿತು.ಬೈಂದೂರು ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಶೇಖರ್ ಪೂಜಾರಿ ಸಭಾಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಗೌರವಾಧ್ಯಕ್ಷರಾದ ಶರೀಫ್ ರೋಣ, ಖಜಾಂಚಿ ಉದಯ ಎಂ.ಪಿ, ಪದಾಕಾರಿಗಳಾದ ಕೇಶವ ನಾಯ್ಕ ಸುಧಾಕರ್ ದೇವಾಡಿಗ, ವೀರೇಶ್, ವಿಜಯ್ ಕುಮಾರ್, ಹುಲಿಯಪ್ಪ ಗೌಡ, ಗಣೇಶ್, ಶ್ರೀಮತಿ ಹಾಗೂ ಬಿ.ಸಿ ನಿತ್ಯ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

seventeen − 12 =