ಶಿರೂರು; ಶ್ರೀ ಮಹಾಸತಿ ಯುವಕ ಸಂಘ (ರಿ ) ಮುದ್ರಮಕ್ಕಿ ಶಿರೂರು ಇದರ ನೂತನ ಅಧ್ಯಕ್ಷರಾಗಿ ರಾಘು ಶಿರೂರು ಹಾಗೂ ನೂತನ ಕಾರ್ಯದರ್ಶಿಯಾಗಿ ತಿಮ್ಮಪ್ಪ ಪೂಜಾರಿ ಮುದ್ರಮಕ್ಕಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಪ್ರಶಾಂತ್ ಕುಮಾರ್, ಜೊತೆ ಕಾರ್ಯದರ್ಶಿಯಾಗಿ ಪುಷ್ಪರಾಜ್, ಖಜಾಂಚಿಯಾಗಿ ಮಂಜುನಾಥ ಪೂಜಾರಿ,ಉಪ ಖಜಾಂಚಿಯಾಗಿ ಹರೀಶ್ ಮೊದಲಾದವರು ಆಯ್ಕೆ ಗೊಂಡರು.