ಶಿರೂರು: ಶ್ರೀ ಮಹಾಸತಿ ದೇವಸ್ಥಾನ ಮುದ್ರಮಕ್ಕಿ ಶಿರೂರು ಇದರ ಹಾಲು ಹಬ್ಬದ ಪ್ರಯುಕ್ತ ಶ್ರೀ ಮಹಾಸತಿ ಯುವಕ ಸಂಘ ಮುದ್ರಮಕ್ಕಿ ಶಿರೂರು ಇದರ 26ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ಮುದ್ರಮಕ್ಕಿಯಲ್ಲಿ ನಡೆಯಿತು. ಸಂಜೆ ನಡೆದ ಸಭಾ ಕಾರ್ಯಕ್ರಮವನ್ನು ಬೈಂದೂರು ಬಿಜೆಪಿ ಮಂಡಲದ ಅಧ್ಯಕ್ಷೆ ಅನಿತಾ ಆರ್.ಕೆ. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಸಂಘವು ಕೇವಲ ಧಾರ್ಮಿಕ ಕ್ಷೇತ್ರಕ್ಕೆ ಸೀಮಿತವಾಗದೇ ಕ್ರೀಡೆ, ಸಾಂಸ್ಕೃತಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿಯೂ ತನ್ನ ಸೇವೆಯನ್ನು ವಿಸ್ತರಿಸಿಕೊಂಡಿರುವುದು ನಿಜಕ್ಕೂ ಶ್ಲಾಘನೀಯವಾಗಿದೆ.ಗ್ರಾಮೀಣ ಭಾಗವಾದ ಶಿರೂರಿನಲ್ಲಿ ಮಹಾಸತಿ ಯುವಕ ಸಂಘ ತನ್ನ ವಿಭಿನ್ನವಾದ ಕಾರ್ಯಕ್ರಮಗಳ ಮೂಲಕ ಬಹುತೇಕ ಸಂಘಗಳಿಗೆ ಮಾದರಿಯಾಗಿದೆ.ಸಾಂಸ್ಕ್ರತಿಕ ಕಾರ್ಯಕ್ರಮಗಳ ಜೊತೆಗೆ ಊರಿನ ಅಭಿವೃದ್ದಿಗೆ ಯುವ ಸಮುದಾಯ ಚಿಂತನೆ ನಡೆಸಿದಾಗ ಮಾತ್ರ ಪ್ರಗತಿ ಸಾಧ್ಯ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಂಘದ ಪೂರ್ವಾಧ್ಯಕ್ಷ ರಾಘು ಶಿರೂರು  ಮಹಾಸತಿ ಯುವಕ ಸಂಘವು ಈಗಾಗಲೇ ಅನೇಕ ಜನಪರ ಮತ್ತು ಸಮಾಜಮುಖಿ ಕಾರ್ಯಗಳನ್ನು ಕೈಗೊಂಡು ಯಶಸ್ವಿಯಾಗಿ ಅನುಷ್ಠಾನಗೊಳಿಸಿಕೊಂಡು ಬಂದಿದೆ.ಯುವ ಸಮುದಾಯದ ಒಗ್ಗಟ್ಟು ಮತ್ತು ಹಿರಿಯರ ಸಹಕಾರ ಗ್ರಾಮೀಣ ಭಾಗದ ಅಭಿವೃದ್ದಿಗೆ ಸಹಕಾರಿಯಾಗಿದೆ.ಸಂಘಟನಾತ್ಮಕ ಚಟುವಟಿಕೆ ಸಾರ್ಥಕ 26ನೇ ವರ್ಷದ ಸಂಭ್ರಮ ಕಂಡಿದೆ.ಕ್ರಿಯಾತ್ಮಕ ಕಾರ್ಯಕ್ರಮಗಳು ಊರಿಗೆ ಉತ್ತಮ ಸಂಘಟನೆ ನೀಡುತ್ತದೆ ಎಂದರು.

ಮುಖ್ಯ ಅತಿಥಿಗಳಾಗಿ ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿ  ಸೂರಜ್ ಗೋಪಾಲ್ ಪೂಜಾರಿ, ತಾ.ಪಂ ಕೆಡಿಪಿ ಸದಸ್ಯ  ಶೇಖರ್ ಪೂಜಾರಿ ಉಪ್ಪುಂದ,ಬೈಂದೂರು ಬ್ಲಾಕ್ ಕಾಂಗ್ರೆಸ್‌ನ ಕಿಸಾನ್ ಘಟಕದ ಅಧ್ಯಕ್ಷ ವೀರಭದ್ರ ಗಾಣಿಗ,ಸಂಘದ ಅಧ್ಯಕ್ಷ ಪುಷ್ಪರಾಜ್ ಬಿಲ್ಲವ, ಭೀಮಘರ್ಜನೆ ಉಡುಪಿ ಜಿಲ್ಲಾ ಸಮಿತಿಯ ಸಂಚಾಲಕ ಚಂದ್ರ ಅಲ್ತಾರ್, ಶಿರೂರು ಗ್ರಾಮ ಪಂಚಾಯತ್ ಸದಸ್ಯ ಲಿಂಗಪ್ಪ ಆರ್. ಮೇಸ್ತ, ಪಿಡಿಒ ರಾಜೇಂದ್ರ ಶೆಟ್ಟಿ, ಸಾಮಾಜಿಕ ಕಾರ್ಯಕರ್ತ ವೇದನಾಥ್ ಶೆಟ್ಟಿ ಹೇರಂಜಾಲು,ಶ್ರೀಜಿತ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಅನ್ನದಾನದ ಸೇವಾಕರ್ತರಾದ ಲಕ್ಷ್ಮೀ ಗೋವಿಂದ ಬಿಲ್ಲವ ದಂಪತಿಗಳನ್ನು,ರಾಜ್ಯ ಪ್ರಶಸ್ತಿ ಪುರಸ್ಕ್ರತ ಚಂದ್ರ ನಾರಾಯಣ ಬಿಲ್ಲವ ರವರನ್ನು ಸಮ್ಮಾನಿಸಲಾಯಿತು.

ಸುಧಾಕರ್ ಬಿಲ್ಲವ ಸ್ವಾಗತಿಸಿದರು.ಸಂಘದ ಸದಸ್ಯಮಂಜುನಾಥ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.ವೆಂಕಟೇಶ್ ಬಿಲ್ಲವ ವಂದಿಸಿದರು.

ಚಿತ್ರ: ಕೃಷ್ಣ ಸ್ಮಾರ್ಟ್ ಸ್ಟುಡಿಯೋ ಶಿರೂರು

Leave a Reply

Your email address will not be published. Required fields are marked *

two × 1 =