ಬೈಂದೂರು; ಶ್ರೀ ಕಾಡಿಕಾಂಬಾ ದೇವಸ್ಥಾನ ದೊಂಬೆ ಶಿರೂರು ಇದರ ಶ್ರೀ ಕಾಡಿಕಾಂಬಾ ದೇವಿಯ ನೂತನ ಬಿಂಬ ಪ್ರತಿಷ್ಠೆ ಹಾಗೂ ವಾರ್ಷಿಕ ಹಾಲು ಹಬ್ಬ ಜ.12 ರಿಂದ ಮತ್ತು 15ರ ವರೆಗೆ ನಡೆಯಲಿದೆ.ಸೋಮವಾರ ಬೆಳಿಗ್ಗೆ ತ್ರಿಶೂಲ ಜಟ್ಟಿಗೇಶ್ವರ ದೇವಸ್ಥಾನದಿಂದ ಕಾಡಿಕಾಂಬಾ ದೇವಸ್ಥಾನದ ವರೆಗೆ ದೇವಿಯ ನೂತನ ಮೂರ್ತಿಯನ್ನು ಮೆರವಣಿಗೆಯ ಮೂಲಕ ದೇವಸ್ಥಾನಕ್ಕೆ ಬರಮಾಡಿಕೊಳ್ಳಲಾಯಿತು.ಮೆರವಣಿಗೆಯಲ್ಲಿ ವಿವಿಧ ಚೆಂಡೆ ವಾದನ ತಂಡ,ವಿವಿಧ ಭಜನಾ ತಂಡಗಳ ಮೂಲಕ ಭಜನಾ ಕುಣಿತ,ವಿವಿಧ ಮಹಿಳಾ ಸಂಘಗಳು,ಸ್ತ್ರಿಶಕ್ತಿ ಸ್ವ-ಸಹಾಯ ಸಂಘಗಳು ಹಾಗೂ ಊರಿನ ಗ್ರಾಮಸ್ಥರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಸಂಜೆ 5 ಗಂಟೆಗೆ ಗುರುಗಣಪತಿ ಪೂಜೆ,ವಿವಿಧ ಹೋಮ ಹವನಗಳು ಹಾಗೂ ಶ್ರೀದೇವಿಯ ನೂತನ ಬಿಂಬ ಪ್ರತಿಷ್ಠಾಪನೆ,ಮಹಾಪೂಜೆ ನಡೆಯಲಿದೆ. ಜ.13 ರಂದು ಬೆಳಿಗ್ಗೆ ಶಾಂತಿ ಪ್ರಾಯಶ್ಚಿತ ಹೋಮ,ಕಲಾತತ್ವ ಹೋಮ,ಮಹಾಪೂಜೆ ಹಾಗೂ ಮದ್ಯಾಹ್ನ ಮಹಾಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿದ್ದು ಜ.14 ರಂದು ಗೆಂಡ ಸೇವೆ ಹಾಗೂ ಜ.೧15 ರಂದು ದೇವಿಯ ಹಾಲು ಹಬ್ಬ ನಡೆಯಲಿದೆ.

ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಅಧ್ಯಕ್ಷರು,ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಹಾಜರಿದ್ದರು.
pic/Vikram Moger