ಉಪ್ಪುಂದ.; ಬಿಜೂರು ಮೂರ್ಗೋಳಿಹಕ್ಲು ಶ್ರೀ ನಂದಿಕೇಶ್ವರ ಹಾಗೂ ಪರಿವಾರ ದೈವಸ್ಥಾನದಲ್ಲಿ ಲೋಕಕಲ್ಯಾಣಕ್ಕಾಗಿ ಶ್ರೀ ರಾಮ ನಾಮ ಕೋಟಿ ಜಪ ಯಜ್ಞಕ್ಕೆ ಜ. 11 ರಂದು ಚಾಲನೆ ನೀಡಲಾಯಿತು.
ಶ್ರೀ ನಂದಿಕೇಶ್ವರ ದೈವಸ್ಥಾನದಲ್ಲಿ ಏಕಾಹ ಅಖಂಡ ಭಜನೋತ್ಸವ ಪ್ರಾರಂಭಿಸಿ ಐವತ್ತು ವರ್ಷಗಳು ಪೂರ್ಣ ಗೊಳ್ಳುವ ಸಂದರ್ಭದಲ್ಲಿ ಪರಿವಾರ ದೈವಗಳ, ನಾಗ ದೇವರ ಪುನಃ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ ಹಾಗೂ ಭಜನಾ ಸುವರ್ಣಮಹೋತ್ಸವದ ಅಂಗವಾಗಿ ಕೋಟಿ ಜಪ ಯಜ್ಞ ನಡೆಯಲಿದೆ. ಶ್ರೀ ನಂದಿಕೇಶ್ವರ ದೇವರಿಗೆ ಹಾಗೂ ಶ್ರೀ ರಾಮ ದೇವರಿಗೆ ವಿಶೇಷ ಪೂಜೆ ಹಾಗೂ ಪ್ರಾರ್ಥನೆಯೊಂದಿಗೆ ಶ್ರೀ ರಾಮ ನಾಮ ಕೋಟಿ ಜಪ ಯಜ್ಞ ಪ್ರಾರಂಭಿಸಲಾಯಿತು. ವೇ.ಮೂ. ಮಹಾಬಲ ಭಟ್ ಮತ್ತು ವೇ.ಮೂ. ತಿರುಮಲೇಶ್ವರ ಭಟ್ ಧಾರ್ಮಿಕ ಕಾರ್ಯಕ್ರಮ ನೆರವೇರಿಸಿದರು.

ಪ್ರತಿನಿತ್ಯ ಜಪ; ಬಿಜೂರು ಮೂರ್ಗೋಳಿಹಕ್ಲು ಶ್ರೀ ನಂದಿಕೇಶ್ವರ ಸಭಾಭವನದಲ್ಲಿ ಜ.11ರಿಂದ ಏ.11ರ ವರೆಗೆ ಬೆಳಗ್ಗೆ ಗಂಟೆ 6.30 ರಿಂದ 8.30 ಮತ್ತು ಸಂಜೆ ಗಂಟೆ 5ರಿಂದ 7 ವರೆಗೆ
ಶ್ರೀ ರಾಮ ನಾಮ ( ಶ್ರೀ ರಾಮ ಜಯ ರಾಮ ಜಯ ಜಯ ರಾಮ ) ಜಪ ನಡೆಯಲಿದೆ. ಹಿರಿಯ ಭಜಕರಾದ ಗುಳೈ ಮಂಜಣ್ಣ ಉಪ್ಪುಂದ, ರವಿ ಖಾರ್ವಿ ಅಳ್ವಕೊಡಿ, ಗಣಪತಿ ಪೂಜಾರಿ, ಬಾಬು ದೇವಾಡಿಗ ಕಸಿನಮನೆ, ದೈವಸ್ಥಾನದ ಮಾಜಿ ಅಧ್ಯಕ್ಷ ಕ್ರಷ್ಣ ಮೂರ್ತಿ ದೇವಾಡಿಗ, ಬಿಜೂರು ಗ್ರಾಮ ಪಂಚಾಯಿತ ಸದಸ್ಯರಾದ ರಮೇಶ ವಿ. ದೇವಾಡಿಗ, ರಾಜೇಂದ್ರ ಬಿಜೂರು,ಬಿಜೂರು ಗ್ರಾಮ ಪಂಚಾಯತ್ ಸದಸ್ಯ ಗಂಗಾಧರ ತಿಪ್ಪನಡಿ ಹಾಗೂ ದೈವಸ್ಥಾನದ ಪದಾಧಿಕಾರಿಗಳು, ಭಕ್ತಾಧಿಗಳು ಉಪಸ್ಥಿತರಿದ್ದರು.