ಬೈಂದೂರು: ಶ್ರೀ ಕಾಡಿಕಾಂಬಾ ದೇವಸ್ಥಾನ ದೊಂಬೆ ಶಿರೂರು ಇದರ ಶ್ರೀ ಕಾಡಿಕಾಂಬಾ ದೇವಿಯ ನೂತನ ಬಿಂಬ ಪ್ರತಿಷ್ಠೆ ಹಾಗೂ ವಾರ್ಷಿಕ ಹಾಲು ಹಬ್ಬ ಜ.12 ರಿಂದ ಮತ್ತು 15ರ ವರೆಗೆ ನಡೆಯಲಿದೆ.
ಜ.12ರಂದು ಬೆಳಿಗ್ಗೆ ತ್ರಿಶೂಲ ಜಟ್ಟಿಗೇಶ್ವರ ದೇವಸ್ಥಾನದಿಂದ ಕಾಡಿಕಾಂಬಾ ದೇವಸ್ಥಾನದ ವರೆಗೆ ದೇವಿಯ ನೂತನ ಮೂರ್ತಿಯ ಪುರಮೆರವಣಿಗೆ,ಸಂಜೆ 5 ಗಂಟೆಗೆ ಗುರುಗಣಪತಿ ಪೂಜೆ,ವಿವಿಧ ಹೋಮ ಹವನಗಳು ಹಾಗೂ ಶ್ರೀದೇವಿಯ ನೂತನ ಬಿಂಬ ಪ್ರತಿಷ್ಠಾಪನೆ,ಮಹಾಪೂಜೆ ನಡೆಯಲಿದೆ.
ಜ.13 ರಂದು ಬೆಳಿಗ್ಗೆ ಶಾಂತಿ ಪ್ರಾಯಶ್ಚಿತ ಹೋಮ,ಕಲಾತತ್ವ ಹೋಮ,ಮಹಾಪೂಜೆ ಹಾಗೂ ಮದ್ಯಾಹ್ನ ಮಹಾಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ.
ಜ.14 ರಂದು ಮದ್ಯಾಹ್ನ ಸಂಕ್ರಾಂತಿ ಪೂಜೆ,ಮಹಾಪೂಜೆ,ಸಂಜೆ 7ಕ್ಕೆ ಬಲಿಪೂಜೆ ಹಾಗೂ ರಾತ್ರಿ ಗೆಂಡ ಸೇವೆ ಹಾಗೂ ವಿವಿಧ ಪೂಜಾ ವಿಧಿ ವಿಧಾನಗಳು ನಡೆಯಲಿದೆ.
ಜ.15 ರಂದು ಹಾಲು ಹಬ್ಬದ ಪ್ರಯುಕ್ತ ಬೆಳಿಗ್ಗೆ ದೇವಳದ ಸನ್ನಿಧಿಯಲ್ಲಿ ವಿವಿಧ ಪೂಜಾ ವಿಧಿ ವಿಧಾನಗಳು ನಡೆಯಲಿದೆ.ಮದ್ಯಾಹ್ನ ಮಹಾಅನ್ನಸಂತರ್ಪಣೆ ಕಾರ್ಯಕ್ರಮ.ರಾತ್ರಿ ಚಿಂತನಾ ಹೆಗಡೆ ಮಾಳಕೋಡ್ ಇವರ ಗಾನ ಸಾರಥ್ಯದಲ್ಲಿ ಶಿವಭಕ್ತ ಮಾಲಿ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ ಎಂದು ದೇವಸ್ಥಾನದ ಪ್ರಕಟನೆಯಲ್ಲಿ ತಿಳಿಸಿದೆ.
